• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಂಚೆ ಮೂಲಕ ಚನ್ನಪಟ್ಟಣದ ಬೊಂಬೆಗಳು ವಿದೇಶಕ್ಕೆ!

By ರಾಮನಗರ ಪ್ರತಿನಿಧಿ
|

‌‌‌ರಾಮನಗರ, ಏಪ್ರಿಲ್ 6; ತನ್ನ ಅಂದ ಚೆಂದಗಳಿಂದ ವಿಶ್ವ ವಿಖ್ಯಾತಿಯನ್ನು ಪಡೆದಿದೆ ಚನ್ನಪಟ್ಟಣದ ಮರದ ಬೊಂಬೆಗಳು. ದೇಶ-ವಿದೇಶಗಳಲ್ಲಿ ಪ್ರಸಿದ್ದಿ ಪಡೆಯುವ ಜೊತೆಗೆ ಅಮೆರಿಕ ವೈಟ್ ಹೌಸ್‌ನಲ್ಲಿಯೂ ಬೊಂಬೆಗಳು ಸ್ಥಾನವನ್ನು ಪಡೆದಿವೆ.

ಸ್ಥಳೀಯ ಕರಕುಶಲ ಕರ್ಮಿಗಳ ಕಷ್ಟ ಮನಗಂಡು, ಚನ್ನಪಟ್ಟಣದ ಬೊಂಬೆಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ರಫ್ತು ಮಾಡಲು ಭಾರತೀಯ ಅಂಚೆ ಇಲಾಖೆ ಪ್ಯಾಕೇಜಿಂಗ್ ಪಾರ್ಸಲ್ ಎಂಬ ವಿನೂತನ ಸೇವೆಯನ್ನು ಆರಂಭಿಸಿದೆ.

ಕಾರ್ಮಿಕರ ಮಕ್ಕಳ ಮೊಗದಲ್ಲಿ ನಗು ಮೂಡಿಸಿದ ಚನ್ನಪಟ್ಟಣ ಗೊಂಬೆ! ಕಾರ್ಮಿಕರ ಮಕ್ಕಳ ಮೊಗದಲ್ಲಿ ನಗು ಮೂಡಿಸಿದ ಚನ್ನಪಟ್ಟಣ ಗೊಂಬೆ!

ಚನ್ನಪಟ್ಟಣದ ಅಂಚೆ ಕಛೇರಿಯಲ್ಲಿ ಅಂತರಾಷ್ಟ್ರೀಯ ಮಟ್ಟದ ಹಲವಾರು ರೀತಿಯ ಜನಪಯೋಗಿ ಪ್ಯಾಕೇಜಿಂಗ್ ಪಾರ್ಸೆಲ್‌ ಬುಕ್ಕಿಂಗ್ ಸೇವಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಈ ಕೇಂದ್ರವನ್ನು ಭಾರತೀಯ ಅಂಚೆ ಇಲಾಖೆಯ ಸೆಕ್ರೆಟರಿ ಪ್ರದೀಪ್ತ ಕುಮಾರ್ ಬಿಸಾಯ್ ಉದ್ಘಾಟಿಸಿದರು.

ಚೆಂದದ ಬೊಂಬೆ ತಯಾರಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿನಿ ಚಂದನಾಚೆಂದದ ಬೊಂಬೆ ತಯಾರಿಸಿ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಸರ್ಕಾರಿ ಶಾಲಾ ವಿದ್ಯಾರ್ಥಿನಿ ಚಂದನಾ

ನೂತನ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, "ಬೊಂಬೆ ತಯಾರಿಕೆಯಲ್ಲಿ ಪರಿಣತಿ ಪಡೆದಿರುವ ಕುಶಲಕರ್ಮಿಗಳು ಹಾಗೂ ವಿತರಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ರಾಮನಗರ ಜಿಲ್ಲೆಯಲ್ಲಿ ಪ್ರಥಮ ಆದ್ಯತೆಯನ್ನು ಈ ಚನ್ನಪಟ್ಟಣದ ಅಂಚೆ ಕಛೇರಿಗೆ ನೀಡಲಾಗಿದೆ. ಇದರಿಂದ ತಮ್ಮ ವಸ್ತುಗಳನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ನೇರವಾಗಿ ಇಲ್ಲಿಂದಲೇ ಕಳಿಸಬಹದು" ಎಂದರು.

ಬೊಂಬೆ ತಯಾರಿಕಾ ಉದ್ಯಮದ ಪುನಶ್ಚೇತನಕ್ಕೆ ಆಗ್ರಹಿಸಿ ಪಾದಯಾತ್ರೆಬೊಂಬೆ ತಯಾರಿಕಾ ಉದ್ಯಮದ ಪುನಶ್ಚೇತನಕ್ಕೆ ಆಗ್ರಹಿಸಿ ಪಾದಯಾತ್ರೆ

ಕರ್ನಾಟಕ ಕೇಂದ್ರ ಅಂಚೆಯ ಮುಖ್ಯ ಕಾರ್ಯದರ್ಶಿ ಶಾರದಾ ಸಂಪತ್ ಮಾತನಾಡಿ, "ಅಂಚೆ ಇಲಾಖೆಯಲ್ಲಿ ಭಾರತೀಯ ಅಂಚೆ ಮುಖ್ಯವಾಗಿ ಲಾಜಿಸ್ಟಿಕ್ಸ್ ಪಾಲುದಾರನಾಗಿ ಕಾರ್ಯನಿರ್ವಹಿಸುತ್ತಿದೆ. ಅಂಚೆ ಕಛೇರಿಯು ಬೃಹತ್ ವ್ಯಾಪಾರಿಗಳ ಗ್ರಾಹಕರಿಗಾಗಿ ತುರ್ತಾಗಿ ತೆಗೆದುಕೊಳ್ಳುವ ಸೌಲಭ್ಯವನ್ನು ಒದಗಿಸುತ್ತದೆ. ಸಣ್ಣ ವ್ಯಾಪಾರಿಗಳಿಗೆ ರಫ್ತುದಾರರ ಸಹಯೋಗದೊಂದಿಗೆ ಕೊಳ್ಳಲು ಹಾಗು ಕೊಡಲು ಅನುಕೂಲವಾಗುವಂತೆ ಕೆಲವು ಕಾರ್ಯವಿಧಾನಗಳನ್ನು ಅಭಿವೃದ್ಧಿ ಪಡಿಸುತ್ತಿದೆ" ಎಂದು ಹೇಳಿದರು.

ಬೆಂಗಳೂರಿನ ಅಂಚೆ ಇಲಾಖೆಯ ಮುಖ್ಯ ಕಾರ್ಯದರ್ಶಿ ಶುಯೇಲಿ ಬರ್ಮನ್ ಮಾತನಾಡಿ, "ಅಂಚೆ ಕಛೇರಿ ಸಿಬ್ಬಂದಿಯು ಗ್ರಾಹಕರಿಗೆ ವಿಳಾಸ, ಪ್ಯಾಕೇಜಿಂಗ್, ನಿಷೇಧ ಮತ್ತು ಅಂತರಾಷ್ಟ್ರೀಯ ಮಿಂಚಂಚೆಗೆ ಸಂಬಂಧಿಸಿದ ನಿರ್ಬಂಧಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ವ್ಯಾಪಾರ ಸುಂಕದ ಪರವಾನಗಿಯನ್ನು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆಕಛೇರಿಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದು" ಎಂದು ತಿಳಿಸಿದರು.

   #Covid19Update: 24 ಗಂಟೆಗಳಲ್ಲಿ ದೇಶದಲ್ಲಿ 96,982 ಜನರಿಗೆ ಕೊರೊನಾ ಸೋಂಕು ದೃಢ | Oneindia Kannada

   ಅಂತರರಾಷ್ಟ್ರೀಯ ಅಂಚೆ ವಹಿವಾಟು ಮತ್ತು ಪಾರ್ಸೆಲ್ ಬುಕ್ಕಿಂಗ್ ವಿಚಾರಣೆ ಮತ್ತು ಮಾಹಿತಿಗಾಗಿ 080-26600590 ದೂರವಾಣಿ ಸಂಖ್ಯೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.

   English summary
   Indian Post started service to send Chennapatna wooden toys to other countries. Ramanagara district Channapatna popularly known as Gombegala Ooru.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X