• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಮನಗರದಲ್ಲಿ ರತಿ-ಮನ್ಮಥರ ಜೊತೆ ಸಾಂಪ್ರದಾಯಿಕ ಹೋಳಿ

|

ರಾಮನಗರ, ಮಾರ್ಚ್. ೦3: ಎಲ್ಲೆಡೆ ಹೋಳಿ ಹುಣ್ಣಿಮೆಯಂದು ಕಾಮನನ್ನು ದಹಿಸಿ ಹೋಳಿ ಆಡಿ ಸಂಬ್ರಮಿಸುತ್ತಾರೆ. ಅದರೆ ಚನ್ನಪಟ್ಟಣದದಲ್ಲಿ ಶಿವ ಮನ್ಮಥನಿಗೆ ಜೀವದಾನ ಮಾಡಿದ ದಿನವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ.

ಹದಿನೈದು ದಿನಗಳ ಕಾಲ ರತಿ-ಮನ್ಮಥರ ಬೊಂಬೆ ಪ್ರಾತಿಷ್ಠಾಪಿಸಿ ಪ್ರತಿದಿನ ಪೊಜಿಸಿಸುವುದು ಇಲ್ಲಿಯ ವಾಡಿಕೆ. ಈ ಬಾರಿಯೂ ಸಂಪ್ರದಾಯ ಮುಂದುವರೆದಿದ್ದು ಹುಣ್ಣಿಮೆಯಂದು ಕಾಮನ ಬೊಂಬೆಯನ್ನು ದಹಿಸುತ್ತಾರೆ ಮರುದಿನ ಶಿವ ಮನ್ಮಥನಿಗೆ ಜೀವದಾನ ಮಾಡಿದ ನೆನಪಿಗಾಗಿ ಪುನಃ ಕಾಮನ ಬೊಂಬೆ ಕುಳ್ಳಿರಿಸಿ ರತಿ ಬೊಂಬೆಯೊಂದಿಗೆ ಮದುವೆ ಮಾಡಿ ನಗರದ ತುಂಬೆಲ್ಲಾ ರತಿ ಮನ್ಮಥರ ಬೊಂಬೆಗಳನ್ನು ಬೆಳ್ಳಿ ರಥದಲ್ಲಿ ಕೂರಿಸಿ ಮೆರವಣಿಗೆ ಮಾಡಿದ್ದಾರೆ.

ಬಣ್ಣದ ಹಬ್ಬ ಹೋಳಿ ಹಬ್ಬಕ್ಕೆ ಶುಭ ಹಾರೈಸಿದ ಮೋದಿ, ಕೋವಿಂದ್

ಪಟ್ಟಣದ ಬೀದಿಗಳಲ್ಲಿ ಹೋಳಿಯನ್ನು ಖುಷಿಯಿಂದ ಆಚರಿಸಲಾಯಿತು. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರೆಲ್ಲರೂ ಕೂಡಾ ಹೋಳಿಯಲ್ಲಿ ಬಣ್ಣದಲ್ಲಿ ಮಿಂದೆದ್ದರು. ಅಲ್ಲದೇ ಕನ್ನಡ ಹಾಡುಗಳಿಗೆ ಬೀದಿಯುದ್ದಕ್ಕೂ ಮೆರವಣಿಗೆಯಲ್ಲಿ ಬಣ್ಣವನ್ನ ಎರಚುತ್ತಾ ಎಲ್ಲರೂ ಕೂಡಾ ಕುಣಿದರು. ಮಹಿಳೆಯರೂ ಕೂಡಾ ಬೀದಿಗಿಳಿದು ಪರಸ್ಪರ ಬಣ್ಣವನ್ನು ಹಾಕುವ ಮೂಲಕ ಸಂಭ್ರಮಾಚರಣೆ ನಡೆಸಿದರು.

ರತಿ ಮನ್ಮಥರ ಬೊಂಬೆ

ರತಿ ಮನ್ಮಥರ ಬೊಂಬೆ

ರಾಮನಗರ ಜಿಲ್ಲೆ, ಚನ್ನಪಟ್ಟಣದ ಮಂಡಿಪೇಟೆಯಲ್ಲಿ ಕಾಮನ ಹಬ್ಬವನ್ನು ನಾಡಹಬ್ಬದಂತೆ ಬಹಳ ವಿಜೃಂಬಣೆಯಿಂದು ಅಚರಿಸುತ್ತಾರೆ. ಅಮಾವಾಸ್ಯೆ ಯಂದು ರತಿ ಮನ್ಮಥನ ಬೊಂಬೆಯನ್ನ ಕೂರಿಸಿ ಒಂದು ವಾರಗಳ ಕಾಲ ಪ್ರತಿ ದಿನ ವಿವಿಧ ರೀತಿಯ ವೇಷಭೂಷಣಗಳನ್ನ ತೊಡಿಸಿ ಪೂಜೆಸಲ್ಲಿಸಲಾಗುತ್ತದೆ.

ರತಿ ಮನ್ಮಥರಿಗೆ ಮದುವೆ

ರತಿ ಮನ್ಮಥರಿಗೆ ಮದುವೆ

ಹುಣ್ಣಿಮೆಯದಿನ ರಾತ್ರಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ಕಾಮಣ್ಣ ಬೊಂಬೆಯನ್ನು ಸುಟ್ಟು ನಂತರ ಮರು ದಿನ ಕಾಮನ ಬೊಂಬೆ ಪ್ರಾತಿಷ್ಟಾಪಿಸಿ ರತಿ ಬೊಂಬೆಯೋಂದಿಗೆ ಮದುವೆ ಮಾಡಿ ಬೆಳ್ಳಿ ರಥದಲ್ಲಿ ರತಿಮನ್ಮಥರ ಬೊಂಬೆಗಳನ್ನು ಕುಳ್ಳರಿಸಿ ನಗರದ ತುಂಬೇಲ್ಲ ಮೆರವಣಿಗೆ ಮಾಡುತ್ತಾರೆ.

ಊರಿಗೆಲ್ಲಾ ಸಿಹಿ ಹಂಚಿಕೆ

ಊರಿಗೆಲ್ಲಾ ಸಿಹಿ ಹಂಚಿಕೆ

ಬೀದಿಯ ಪ್ರತಿ ಮನೆಯವರು ಆರತಿ ಬೆಳಗಿ ಬೊಂಬೆಗಳಿಗೆ ಪೊಜೆ ಸಲ್ಲಿಸಿ ಗೌರವಿಸುತ್ತಾರೆ. ಊರಿಗೆಲ್ಲ ಸಿಹಿಹಂಚಿ, ಪರಸಪರ ಬಣ್ಣಹಚ್ಚಿ ಕಾಮನ ಹಬ್ಬವನ್ನು ಆಚರಿಸುತ್ತಾರೆ. ಬೆಂಗಳೂರು ಕರಗ ಮಾದರಿಯಲ್ಲಿ ತಲೆತಲಾಂತರದಿಂದಲೂ ಸಹ ಕಾಮಣ್ಣನ ಹಬ್ಬವನ್ನ ಬಹಳ ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.

ಪತಿ ವಿಯೋಗ

ಪತಿ ವಿಯೋಗ

ದೇವತೆಗಳ ಕೋರಿಕೆಯಂತೆ ಶಿವನ ತಪ್ಪಸ್ಸು ಭಂಗಪಡಿಸಲು ಮನ್ಮಥನು ಶಿವನ ಎದೆಗೆ ಹೂ ಬಾಣವನ್ನ ಬಿಟ್ಟು ತಪ್ಪಸ್ಸಿನಿಂದ ಏಳಿಸುತ್ತಾನೆ. ಆಗ ಕುಪಿತಗೊಂಡ ಶಿವ ಮನ್ಮಥನಿಗೆ ತನ್ನ ಮೂರನೇ ಕಣ್ಣಿನಿಂದ ಬೆಂಕಿಯುಗುಳಿ ಭಸ್ಮ ಮಾಡುತ್ತಾನೆ. ಆಗ ಮನ್ಮಥನ ಪತ್ನಿ ರತಿ ಪರಶಿವನಲ್ಲಿ ಬೇಡಿಕೊಂಡಾಗ ನಿನಗೆ ಮೂರು ಮುಕ್ಕಾಲು ಗಂಟೆ ಮಾತ್ರ ಪತಿವಿಯೋಗ ಎಂದು ಮತ್ತೆ ಮನ್ಮಥನಿಗೆ ಶಿವ ಜೀವಕೊಡುತ್ತಾನೆ.

ಪ್ರತಿದಿನ ಪೂಜೆ

ಪ್ರತಿದಿನ ಪೂಜೆ

ಆಗ ಪ್ರಪಂಚ ಸುಭೀಕ್ಷವಾಗುತ್ತದೆ, ಮಳೆ ಬೆಳೆ ಚೆನ್ನಾಗಿ ಆಗುತ್ತದೆ. ಈ ಕಾರಣಕ್ಕಾಗಿ ಜಗತ್ತಿನಲ್ಲಿ ಮಳೆ, ಬೆಳೆ, ಸುಖ, ಶಾಂತಿ ನೆಲಸಲೆಂದು ಕಾಮಣ್ಣನ ಹಬ್ಬವನ್ನ ಆಚರಣೆ ಮಾಡಲಾಗುತ್ತದೆ. ಚನ್ನಪಟ್ಟಣದ ಮಂಡಿಪೇಟೆಯಲ್ಲಿ ಪ್ರತಿದಿನ ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ ಜಗತ್ತಿನಲ್ಲಿ ಸುಖಶಾಂತಿ ನೆಲಸಲೆಂದು ಪ್ರಾರ್ಥಿಸಲಾಗುತ್ತದೆ.

ಹಿರಿಯ-ಕಿರಿಯ ಬೇಧವಿಲ್ಲ

ಹಿರಿಯ-ಕಿರಿಯ ಬೇಧವಿಲ್ಲ

ಮುಖ್ಯವಾಗಿ ಕಾಮಣ್ಣನಿಗೆ ಪೂಜೆ ಸಲ್ಲಿಸಿದರೆ, ಮದುವೆಯಾಗದಿದ್ದವರಿಗೆ ಮದುವೆಯಾಗುತ್ತದೆ ಹಾಗೇ ಮಕ್ಕಳಾಗದಿದ್ದವರಿಗೆ ಮಕ್ಕಳು ಜನಿಸುತ್ತಾರೆಂಬುದು ನಂಬಿಕೆ ನಂಬಿಕೆಯಿದೆ. ಇನ್ನು ಅಮಾವಾಸ್ಯೆಯಲ್ಲಿ ರತಿಮನ್ಮಥರ ಗೊಂಬೆಯಿಟ್ಟು ಒಂದು ವಾರಗಳ ಕಾಲ ವಿಶೇಷ ಪೂಜೆ ಸಲ್ಲಿಸಿ ಮುಂದಿನ ಹುಣ್ಣಿಮೆಯಂದು ದಹಿಸಿ ಮರುದಿನ ರತಿಮನ್ಮಥ ಬೊಂಬೆಗಳನ್ನು ಚನ್ನಪಟ್ಟಣ ನಗರದ ಸುತ್ತೆಲ್ಲ ಮೆರವಣಿಗೆ ನಡೆಸಿ ಹಿರಿಯರು ಕಿರಿಯರನ್ನೇದೆ ಎಲ್ಲರು ಹೋಕಳಿಯಲ್ಲಿ ಮಿಂದು ಸಂಬ್ರಮಿಸುತ್ತಾರೆ.

ರತಿ-ಮನ್ಮಥರೊಂದಿಗೆ ಸೆಲ್ಫಿ

ರತಿ-ಮನ್ಮಥರೊಂದಿಗೆ ಸೆಲ್ಫಿ

ಇನ್ನು ಪ್ರತಿನಿತ್ಯ ಕಾಮಣ್ಣನಿಗೆ ಪೂಜೆ ಸಲ್ಲಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು ರತಿಮನ್ಮಥನೊಂದಿಗೆ ಸೆಲ್ಫಿ ತೆಗೆದುಕೊಳ್ಳುವವರೆ ಹೆಚ್ಚಾಗಿದ್ದಾರೆ. ಹಾಗೇ ದಿನನಿತ್ಯ ಸಂಗೀತ ಕಚೇರಿ, ವಾದ್ಯ ಮೇಳ, ನಗೆ ಹಬ್ಬಗಳಂತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಿ ಮತ್ತು ನಗರದೆಲ್ಲೆಡೆ ವಿದ್ಯುತ್ ದೀಪಾಲಂಕರಗಳಿಂದ ನಗರ ಮಿರಮಿರ ಮಿಂಚುತ್ತಿದೆ.

ಹೋಳಿ ಎಂಬ ರಂಗಿನ ಹಬ್ಬದ ರಂಗು ರಂಗಾದ ಚಿತ್ರಗಳು...

English summary
In Ramanagar's Chenpatna people celebrate Holi in tradition way. they worship 'Rathi-Manmatha' god and goddess of love.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more