ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾನಪದ ಲೋಕದ ಬೆಳ್ಳಿ ಹಬ್ಬ:ಕಲಾಕ್ಷೇತ್ರದಲ್ಲಿ ಅನಾವರಣಗೊಂಡ ಸಿರಿ ಲೋಕ

|
Google Oneindia Kannada News

ಬೆಂಗಳೂರು, ಫೆಬ್ರವರಿ 17: ಜಾನಪದ ಸಂಸ್ಕತಿ ಎಲ್ಲ ಸಂಸ್ಕತಿಗಳ ತಾಯಿ ಬೇರು ಇದ್ದಂತೆ. ಈ ತಾಯಿ ಬೇರನ್ನು ನೀರೆರೆದು ಪೋಷಿಸುವುದು ಅತ್ಯಂತ ಅವಶುಕವಾಗಿದೆ ಎಂದು ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಜಾನಪದ ಲೋಕದ ಬೆಳ್ಳಿ ಹಬ್ಬ ಕಾರ್ಯಕ್ರಮಗಳನ್ನು ಪಲ್ಲಕ್ಕಿಗೆ ಹೂವು ಚೆಲ್ಲುವ ಮೂಲಕ ಉದ್ಘಾಟಿಸಿದ ಅವರು ಜಾನಪದ ಎಂದೂ ರಾಜಾಶ್ರಯವನ್ನು ಆಶ್ರಯಿಸಲೂ ಇಲ್ಲ. ರಾಜಾಶ್ರಯಕ್ಕಾಗಿ ಬೇಡಲೂ ಇಲ್ಲ.ಜಾನಪದ ನೋವು ನಲಿವು ಸಂಬಂಧಗಳ ಆಗರ. ಇದು ಕರುಳ ಬಳ್ಳಿ ಇದ್ದಂತೆ. ಇದು ಯಾರವೂ ಇಲ್ಲದೇ ಜನರಿಂದ ಜನರಿಗೆ ಹರಿದು ಬಂದಿದೆ. ಹಾಗೆಂದು ಸರ್ಕಾರ ಜಾನಪದಕ್ಕೆ ಆಸರೆ ನೀಡುವುದಿಲ್ಲವೆಂದಲ್ಲ. ಈ ತಾಯಿ ಬೇರಿಗೆ ನೀರೆರೆಯುವ ಕೆಲಸವನ್ನು ಸರಕಾರ ಮಾಡಲಿದೆ ಎಂದರು.

ಈ ಜವಾಬ್ಧಾರಿಯೂ ಸರ್ಕಾರದ ಮೇಲಿದೆ ಎಂದರು. ಜಾನಪದ ಲೋಕ ಜಾನಪದವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಪಾರ ಶ್ರಮ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ಇನ್ನಷ್ಟು ನೆರವು ನೀಡುವ ಕುರಿತು ಮುಖ್ಯಮಂತ್ರಿಯವರಲ್ಲಿ ಮಾತನಾಡುತ್ತೇನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇನ್ನೂ ಹೆಚ್ಚಿನ ಅನುದಾನ ಒದಗಿಸುವುದಾಗಿ ಅವರು ಭರವಸೆ ನೀಡಿದರು.

10 ಕೋಟಿ ನೆರವಿಗೆ ಬೇಡಿಕೆ

10 ಕೋಟಿ ನೆರವಿಗೆ ಬೇಡಿಕೆ

ಜಾನಪದ ಲೋಕ ನಶಿಸುತ್ತಿರುವ ಜಾನಪದ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಅನೇಕ ಉಪಕ್ರಮಗಳನ್ನು ಕೈಗೊಂಡಿದ್ದು ಇದನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಸರ್ಕಾರ ಹತ್ತು ಕೋಟಿ ರೂ ನೆರವು ಒದಗಿಸುವಂತೆ ಜಾನಪದ ಪರಿಷತ್ತಿನ ಅಧ್ಯಕ್ಷ ನಿವೃತ್ತ ಐ.ಎ,ಎಸ್ ಅಧಿಕಾರಿ ಟಿ.ತಿಮ್ಮೇಗೌಡ ಆಗ್ರಹಿಸಿದರು. ಜಾನಪದ ಲೋಕದ ವಿಸ್ತರಣೆಗೆ ಇನ್ನಷ್ಟು ಜಮೀನು ನೀಡುವಂತೆ ಕೋರಿದ ಅವರು ಜಾನಪದವನ್ನು ಪಠ್ಯಗಳಲ್ಲಿ ಅಳವಡಿಸುವಂತೆ ಮನವಿ ಮಾಡಿದರು. ಗ್ರಾಮಪಂಚಾಯ್ತಿ ಒಳಗೊಂಡು ಎಲ್ಲ ಸ್ಥಳೀಯ ಸಂಸ್ಥೆಗಳು ಜಾನಪದ ಚಟುವಟಿಕೆಗಳಿಗೆ ನೆರವು ನೀಡುವ ಅಗತ್ಯತೆ ಇದೆ ಎಂದರು.

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ ಜಾನಪದ ಕಲೆಗಳನ್ನು ಒಟ್ಟು ಜಾನಪದವನ್ನು ಉಳಿಸುವ ಅಗತ್ಯತೆ ಕುರಿತು ಬೆಳಕು ಚೆಲ್ಲಿದರು. ಹಿರಿಯ ಜಾನಪದ ವಿದ್ವಾಂಸ ಗೊ.ರು.ಚನ್ನಬಸಪ್ಪ ಮಾತನಾಡಿ ಜಾನಪದವನ್ನು ಪೀಳಿಗೆಯಿಂದ ಪೀಳಿಗೆಗೆ ಉಳಿಸುವ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದೆ ಎಂದರು.

ಭವ್ಯ ಮೆರವಣಿಗೆ

ಭವ್ಯ ಮೆರವಣಿಗೆ

ಸಾಹಿತಿ ಡಾ.ಸಿದ್ಧಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ, ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ, ಶಾಸಕ ಉದಯ ಗರುಡಾಚಾರ್,ಜಾನಪದ ಲೋಕದ ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್ ಮತ್ತಿತರರು ಉಪಸ್ಥಿತರಿದ್ದರು. ಹಿರಿಯ ಜಾನಪದ ಕಲಾವಿದರು ಮತ್ತು ವಿದ್ವಾಂಸರನ್ನು ಸನ್ಮಾನಿಸಲಾಯಿತು. ಜಾನಪದ ಲೋಕದ ವಿವಿಧ ಪ್ರಕಟಣೆಗಳನ್ನು ಇದೇ ಸಂದರ್ಭದಲ್ಲಿ ಗಣ್ಯರು ಬಿಡುಗಡೆಗೊಳಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಬಿಬಿಎಂಪಿ ಕಚೇರಿ ಆವರಣದಿಂದ ರವೀಂದ್ರ ಕಲಾಕ್ಷೇತ್ರದ ವರೆಗೆ ಭವ್ಯ ಮೆರವಣಿಗೆ ನಡೆಯಿತು.

ಕಲಾಕ್ಷೇತ್ರದಲ್ಲಿ ಜಾನಪದ ಲೋಕ

ಕಲಾಕ್ಷೇತ್ರದಲ್ಲಿ ಜಾನಪದ ಲೋಕ

ಕಲಾಕ್ಷೇತ್ರ ಆವರಣದಲ್ಲಿ ಜಾನಪದ ಲೋಕವೇ ಅನಾವರಣಗೊಂಡಿತ್ತು. ರಾಮನಗರದ ಜಾನಪದ ಲೋಕದ ಅತ್ಯಂತ ಅಪರೂಪದ ಜಾನಪದ ವಸ್ತುಗಳ ಸಂಗ್ರಹದ ಮಿನಿ ವಸ್ತು ಪ್ರದರ್ಶನ ಜೊತೆಗೆ ವಿವಿಧ ಜಾನಪದ ಪ್ರದರ್ಶನ ಕಲೆಗಳ ಗೊಂಬೆಗಳು ಗಮನಸೆಳೆದವು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗಳನ್ನು ನೀಡಿದ ಹತ್ತಕ್ಕೂ ಹೆಚ್ಚು ತಂಡಗಳ ನೂರಾರು ಕಲಾವಿದರು ಡೊಳ್ಳು ಕುಣಿತ, ತಮಟೆ ವಾದನ,ವೀರಗಾಸೆ,ಜೋಗತಿ ನೃತ್ಯ,ಬೀಸು ಕಂಸಾಳೆ,ಮಹಿಳಾ ಪೂಜಾ ಕುಣಿತ, ಮಹಿಳಾ ವೀರಗಾಸೆ,ಚೌಡಿಕೆ, ನೀಲಗಾರರು,ಚಿಟ್ಟಿ ಮೇಳ ಹೀಗೆ ವಿವಿಧ ಜಾನಪದ ಕಲೆಗಳನ್ನು ಪ್ರದರ್ಶಿಸಿದರು. ಸೋಮವಾರ ಮತ್ತು ಮಂಗಳವಾರ ರಾಮನಗರದ ಜಾನಪದ ಲೋಕದಲ್ಲಿ ಬೆಳ್ಳಿ ಹಬ್ಬದ ಪ್ರವಾಸಿ ಜಾನಪದ ಲೋಕೋತ್ಸವ ಆಯೋಜಿಸಲಾಗಿದೆ.

ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡರ ಭಾಷಣ

ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡರ ಭಾಷಣ

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿರುವ ಪರಮಪೂಜ್ಯ ನಿರ್ಮಲಾನಂದನಾಥ ಸ್ವಾಮೀಜಿ ಅವರ ಪಾದಾರವಿಂದಗಳಿಗೆ ನಮಿಸುತ್ತ ಜಾನಪದ ಲೋಕದ ಬೆಳ್ಳಿ ಹಬ್ಬ ಕಾರ್ಯಕ್ರಮಗಳಿಗೆ ಅವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸುತ್ತೇನೆ, ಇವರು ನಮ್ಮ ಜಾನಪದ ಪರಿಷತ್ತಿನ ಮಹಾಪೋಷಕರೂ ಆಗಿದ್ದು ಇದೀಗ ನಮ್ಮ ಚಟುವಟಿಕೆಗಳಿಗೆ ಅವರ ಆಶೀರ್ವಾದ ಮತ್ತು ಮಾರ್ಗದರ್ಶನದ ಬಲ ಬಂದಿದೆ.

ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪ ಅವರು ಬಜೆಟ್ ಅಧಿವೇಶನ ಜೊತೆಗೆ ಈಗಷ್ಟೇ ವಾರಣಾಸಿಯಿಂದ ಆಗಮಿಸಿ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ನಾಡಿನ ಜಾನಪದದ ಮೇಲಿನ ಅಭಿಮಾನ ಮತ್ತು ಜಾನಪದ ಪರಿಷತ್ ಮೇಲಿನ ಪ್ರೀತಿಯಿಂದ ನಮ್ಮ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.ಇವರಿಗೆ ಜಾನಪದ ಪರಿಷತ್ತಿನ ಪರವಾಗಿ ಸ್ವಾಗತಿಸುತ್ತೇನೆ,

ನಮ್ಮ ಸಚಿವರು ನಮ್ಮೆಲ್ಲ ಕಾರ್ಯಕ್ರಮಗಳಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿರುವ ಬೆಳ್ಳಿ ಹಬ್ಬದ ಲಾಂಛನವನ್ನೂ ಬಿಡುಗಡೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾನ್ಯ ಸಚಿವ ಸಿ.ಟಿ.ರವಿ ಅವರಿಗೆ ಆತ್ಮೀಯವಾಗಿ ಸ್ವಾಗತ ಕೋರುತ್ತೇನೆ.

ಜಾನಪದ ಮೆರವಣಿಗೆ ಉದ್ಘಾಟಿಸಿದ ಮಹಾಪೌರ

ಜಾನಪದ ಮೆರವಣಿಗೆ ಉದ್ಘಾಟಿಸಿದ ಮಹಾಪೌರ

ಜಾನಪದ ಮೆರವಣಿಗೆ ಉದ್ಘಾಟಿಸಿದ ಮಹಾಪೌರ ಗೌತಮ್ ಕುಮಾರ್, ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿರುವ ಶಾಸಕ ಡಾ.ಉದಯ ಬಿ.ಗರುಡಾಚಾರ್, ನಾಡೋಜ ಗೊ.ರು.ಚನ್ನಬಸಪ್ಪ, ಹಿರಿಯ ಸಾಹಿತಿ ಡಾ.ಸಿದ್ಧಲಿಂಗಯ್ಯ, ಅವರಿಗೆ ಮತ್ತು ಆಗಮಿಸಿರುವ ಎಲ್ಲ ಗಣ್ಯರಿಗೆ ಹೃತ್ಪೂರ್ವಕ ಸ್ವಾಗತ ಕೋರುತ್ತೇನೆ. ಈ ಕಾರ್ಯಕ್ರಮದಲ್ಲಿ ಜಾನಪದ ಲೋಕದ ಬೆಳ್ಳಿ ಹಬ್ಬದ ಲೋಕಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವ ಎಲ್ಲ ಹಿರಿಯ ಕಲಾವಿದರು, ವಿದ್ವಾಂಸರಿಗೂ ಸ್ವಾಗತ ಕೋರುತ್ತೇನೆ.

ನಮ್ಮ ಈ ಜಾನಪದ ಲೋಕದ ಕಾರ್ಯಕ್ರಮಗಳಿಗೆ ಮತ್ತು ಜಾನಪದ ಲೋಕದ ಕುರಿತಾಗಿ ಲೇಖನಗಳನ್ನು ಪ್ರಕಟಿಸಿ ನಮ್ಮ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಿರುವ ಎಲ್ಲ ಮಾಧ್ಯಮಗಳ ಪ್ರತಿನಿಧಿಗಳಿಗೆ ಸ್ವಾಗತ ಕೋರುತ್ತೇನೆ.

ಈ ಕಾರ್ಯಕ್ರಮ ಯಶಸ್ವಿ ಆಗಬೇಕಿದ್ದಲ್ಲಿ ನಾಡಿನ ಜಾನಪದ ಕಲಾವಿದರ ಕೊಡುಗೆ ಅನನ್ಯ. ಈ ಎಲ್ಲ ಕಲಾವಿದರಿಗೂ ನಾನು ಸ್ವಾಗತ ಬಯಸುತ್ತೇನೆ.

ಥಾಯ್ ವಿಲೇಜ್ ನಂತೆ ಜಾನಪದ ಲೋಕ

ಥಾಯ್ ವಿಲೇಜ್ ನಂತೆ ಜಾನಪದ ಲೋಕ

ಕರ್ನಾಟಕದಲ್ಲಿ ಅತ್ಯುನ್ನತ ಗ್ರಾಮೀಣ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಾಣ ಮಾಡಬೇಕೆನ್ನುವುದು ನಾಡೋಜ ದಿವಂಗತ ಎಚ್.ಎಲ್.ನಾಗೇಗೌಡರ ಕನಸಾಗಿತ್ತು. ಥಾಯ್ಲೆಂಡ್‍ನ ‘ಥಾಯ್ ವಿಲೇಜ್' ನೋಡಿಬಂದಿದ್ದ ಅವರು, ಆ ಮಾದರಿಯ 'ಜಾನಪದ ಲೋಕ'ವನ್ನು ಸೃಷ್ಟಿಸಬೇಕೆಂಬುದು ಅವರ ಉದ್ದೇಶವಾಗಿತ್ತು. ಕನಸಿನ ಜಾನಪದ ಲೋಕ ಹೀಗೆ ಇರಬೇಕೆಂದು ಪ್ಲಾನ್ ಕೂಡ ಮಾಡಿಸಿದ್ದರು.

1979ರಲ್ಲಿ ಕರ್ನಾಟಕ ಜಾನಪದ ಪರಿಷತ್ತು ಸ್ಥಾಪನೆಯಾದ ನಂತರವೂ, ಜಾನಪದ ಲೋಕದ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಜಾಗ ಹುಡುಕುತ್ತಿದ್ದರು. ಬೆಂಗಳೂರಲ್ಲಿ ಜಾಗ ಸಿಗಲಿಲ್ಲ. ನಗರದಿಂದ ಹೊರಗೆ ಏಕೆ ಜಾನಪದ ಲೋಕ ಮಾಡಬಾರದು ಎಂದು ಚಿಂತಿಸಿದರು. ನಾನು ಆಗ ಬೆಂಗಳೂರು ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯಾಗಿದ್ದೆ. ನನ್ನ ಬಳಿ ಈ ವಿಷಯ ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲೇ ರಾಮನಗರ ಸಮೀಪದ ಸರ್ವೆ ನಂ. 306ರಲ್ಲಿದ್ದ ದೊಡ್ಡಮಣ್ಣುಗುಡ್ಡೆ ಬ್ಲಾಕ್ ಜಮೀನನ್ನು ಜಾನಪದಲೋಕ ನಿರ್ಮಾಣಕ್ಕೆ ಗುರುತಿಸಲಾಯಿತು. ಮೊದಲ ಹಂತದಲ್ಲಿ ಏಳು ಎಕರೆ ಹತ್ತು ಗುಂಟೆ ಜಮೀನು ಮಾತ್ರ ಸಿಕ್ಕಿತು. ಹಂತ ಹಂತವಾಗಿ ಸುತ್ತಲಿನ ಜಮೀನನನ್ನು ಖರೀದಿಸಿ 15 ಎಕರೆಗೆ ವಿಸ್ತರಿಸಿದರು. ಮಾರ್ಚ್ 12, 1994ರಂದು ಜಾನಪದ ಲೋಕಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿತು.

ಜಾನಪದಲೋಕ ಹಂತ ಹಂತವಾಗಿ ಬೆಳೆದಿದೆ

ಜಾನಪದಲೋಕ ಹಂತ ಹಂತವಾಗಿ ಬೆಳೆದಿದೆ

ಇಲ್ಲಿಂದ ನಾಗೇಗೌಡರು ಬಹುದೊಡ್ಡ ಜಾನಪದ ಆಸಕ್ತರ ಪಾಳೆಯವನ್ನೇ ಕಟ್ಟಿಕೊಂಡು, ನಾಡಿನಾದ್ಯಂತ ಸುತ್ತಾಡಿ, ಕೃಷಿ, ಗ್ರಾಮೀಣ, ಜಾನಪದಕ್ಕೆ ಸಂಬಂಧಿಸಿದ ಪರಿಕರಗಳು, ವಾದ್ಯಗಳು, ಸಂಗೀತದ ಧ್ವನಿ ಸುರುಳಿಗಳನ್ನು ಮುದ್ರಿಸಿಕೊಂಡು ತಂದರು. ಅವರ ನೇತೃತ್ವದಲ್ಲೇ ಮೂರು ಮ್ಯೂಸಿಯಂಗಳು ತಲೆ ಎತ್ತಿದವು. ಮುಂದೆ ಜಾನಪದಲೋಕ ಹಂತ ಹಂತವಾಗಿ ತನ್ನ ಸೌಂದರ್ಯವನ್ನು ವೃದ್ಧಿಸಿಕೊಂಡಿತು.

2005ರಲ್ಲಿ ನಾಗೇಗೌಡರು ನಮ್ಮನ್ನು ಅಗಲಿದ ನಂತರ, ಪರಿಷತ್ತಿನ ಅಧ್ಯಕ್ಷಸ್ಥಾನದ ಜವಾಬ್ದಾರಿ ಹೊತ್ತವರು ನಾಡೋಜ ಜಿ. ನಾರಾಯಣ. ಗೌಡರಂತೆ, ನಾರಾಯಣ ಅವರು ಅವರು ದಣಿವರಿಯದೇ ದುಡಿದು, ಜಾನಪದಲೋಕಕ್ಕೆ ಮತಷ್ಟು ಮೆರಗು ತಂದುಕೊಟ್ಟರು. ಕರ್ನಾಟಕದಲ್ಲಿ ಅತ್ಯುನ್ನತ ಗ್ರಾಮೀಣ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಾಣ ಮಾಡಬೇಕೆನ್ನುವುದು ನಾಡೋಜ ದಿವಂಗತ ಎಚ್.ಎಲ್.ನಾಗೇಗೌಡರ ಕನಸಾಗಿತ್ತು. ಥಾಯ್ಲೆಂಡ್‍ನ ‘ಥಾಯ್ ವಿಲೇಜ್' ನೋಡಿಬಂದಿದ್ದ ಅವರು, ಆ ಮಾದರಿಯ 'ಜಾನಪದ ಲೋಕ'ವನ್ನು ಸೃಷ್ಟಿಸಬೇಕೆಂಬುದು ಅವರ ಕನಸಾಗಿತ್ತು. ಸಿನ ಜಾನಪದ ಲೋಕ ಹೀಗೆ ಇರಬೇಕೆಂದು ಪ್ಲಾನ್ ಕೂಡ ಮಾಡಿಸಿದ್ದರು.

ಕರ್ನಾಟಕ ಜಾನಪದ ಪರಿಷತ್ತು ಸ್ಥಾಪನೆ

ಕರ್ನಾಟಕ ಜಾನಪದ ಪರಿಷತ್ತು ಸ್ಥಾಪನೆ

1979ರಲ್ಲಿ ಕರ್ನಾಟಕ ಜಾನಪದ ಪರಿಷತ್ತು ಸ್ಥಾಪನೆಯಾದ ನಂತರವೂ, ಜಾನಪದ ಲೋಕದ ನಿರ್ಮಾಣಕ್ಕಾಗಿ ಬೆಂಗಳೂರಿನಲ್ಲಿ ಜಾಗ ಹುಡುಕುತ್ತಿದ್ದರು. ಬೆಂಗಳೂರಲ್ಲಿ ಜಾಗ ಸಿಗಲಿಲ್ಲ. ನಗರದಿಂದ ಹೊರಗೆ ಏಕೆ ಜಾನಪದ ಲೋಕ ಮಾಡಬಾರದು ಎಂದು ಚಿಂತಿಸಿದರು. ನಾನು ಆಗ ಬೆಂಗಳೂರು ಜಿಲ್ಲೆಯ ವಿಶೇಷ ಜಿಲ್ಲಾಧಿಕಾರಿಯಾಗಿದ್ದೆ. ನನ್ನ ಬಳಿ ಈ ವಿಷಯ ಪ್ರಸ್ತಾಪಿಸಿದ್ದರು. ಆ ಸಂದರ್ಭದಲ್ಲೇ ರಾಮನಗರ ಸಮೀಪದ ಸರ್ವೆ ನಂ. 306ರಲ್ಲಿದ್ದ ದೊಡ್ಡಮಣ್ಣುಗುಡ್ಡೆ ಬ್ಲಾಕ್ ಜಮೀನನ್ನು ಜಾನಪದಲೋಕ ನಿರ್ಮಾಣಕ್ಕೆ ಗುರುತಿಸಲಾಯಿತು. ಮೊದಲ ಹಂತದಲ್ಲಿ ಏಳು ಎಕರೆ ಹತ್ತು ಗುಂಟೆ ಜಮೀನು ಮಾತ್ರ ಸಿಕ್ಕಿತು. ಹಂತ ಹಂತವಾಗಿ ಸುತ್ತಲಿನ ಜಮೀನನನ್ನು ಖರೀದಿಸಿ 15 ಎಕರೆಗೆ ವಿಸ್ತರಿಸಿದರು. ಮಾರ್ಚ್ 12, 1994ರಂದು ಜಾನಪದ ಲೋಕಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿತು.

ಇಲ್ಲಿಂದ ನಾಗೇಗೌಡರು ಬಹುದೊಡ್ಡ ಜಾನಪದ ಆಸಕ್ತರ ಪಾಳೆಯವನ್ನೇ ಕಟ್ಟಿಕೊಂಡು, ನಾಡಿನಾದ್ಯಂತ ಸುತ್ತಾಡಿ, ಕೃಷಿ, ಗ್ರಾಮೀಣ, ಜಾನಪದಕ್ಕೆ ಸಂಬಂಧಿಸಿದ ಪರಿಕರಗಳು, ವಾದ್ಯಗಳು, ಸಂಗೀತದ ಧ್ವನಿ ಸುರುಳಿಗಳನ್ನು ಮುದ್ರಿಸಿಕೊಂಡು ತಂದರು. ಅವರ ನೇತೃತ್ವದಲ್ಲೇ ಮೂರು ಮ್ಯೂಸಿಯಂಗಳು ತಲೆ ಎತ್ತಿದವು. ಮುಂದೆ ಜಾನಪದಲೋಕ ಹಂತ ಹಂತವಾಗಿ ತನ್ನ ಸೌಂದರ್ಯವನ್ನು ವೃದ್ಧಿಸಿಕೊಂಡಿತು.

ನಾಡೋಜ ಜಿ. ನಾರಾಯಣ ಮಾರ್ಗದರ್ಶನ

ನಾಡೋಜ ಜಿ. ನಾರಾಯಣ ಮಾರ್ಗದರ್ಶನ

2005ರಲ್ಲಿ ನಾಗೇಗೌಡರು ನಮ್ಮನ್ನು ಅಗಲಿದ ನಂತರ, ಪರಿಷತ್ತಿನ ಅಧ್ಯಕ್ಷಸ್ಥಾನದ ಜವಾಬ್ದಾರಿ ಹೊತ್ತವರು ನಾಡೋಜ ಜಿ. ನಾರಾಯಣ. ಗೌಡರಂತೆ, ನಾರಾಯಣ ಅವರು ಅವರು ದಣಿವರಿಯದೇ ದುಡಿದು, ಜಾನಪದಲೋಕಕ್ಕೆ ಮತಷ್ಟು ಮೆರಗು ತಂದುಕೊಟ್ಟರು.

ಬೆಳ್ಳಿಹಬ್ಬದ ಸಂಭ್ರಮಾಚರಣೆಯಲ್ಲಿರುವ ಜಾನಪದಲೋಕ ನಾಗೇಗೌಡರ ಆಶಯದಂತೆ ಸಮಗ್ರ ಗ್ರಾಮೀಣ ಸಂಸ್ಕೃತಿಯ ಕೇಂದ್ರವಾಗಿ ಬೆಳೆದು ನಿಂತಿದೆ. ಕನ್ನಡ ನಾಡಿನ 20ನೆಯ ಶತಮಾನದ ಚರಿತ್ರೆಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲ, ದೇಶದ ಅತ್ಯಂತ ಮಹತ್ವದ ಸಾಂಸ್ಕೃತಿಕ ಕೇಂದ್ರವಾಗಿ ಬೆಳವಣಿಗೆ ಕಂಡಿದೆ. ಈ ಕೇಂದ್ರಕ್ಕೆ ನಿತ್ಯವೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.

ಜಾನಪದ ಸಂಗ್ರಹಗಳ ಬೃಹತ್ ಲೋಕ ಈ ಜಾನಪದ ಲೋಕ. ಇಲ್ಲಿರುವ ಅಪರೂಪದ ವಸ್ತುಗಳು ನಮ್ಮ ಹಿಂದಿನ ಪರಂಪರೆಯ ಸ್ವತ್ತು ಮಾತ್ರವಲ್ಲ ನಮ್ಮ ಮುಂದಿನ ಪೀಳಿಗೆಗೆ ಹಿಂದಿನದನ್ನು ಪರಿಚಯಿಸುವ ಲೋಕ. ಜಾನಪದ ಸದಾ ಹಸಿರಾಗಿಸಬೇಕೆಂಬ ನಿಟ್ಟಿನಲ್ಲಿ 1999ರಿಂದ ಜಾನಪದ ಮಹಾವಿದ್ಯಾಲಯವು ಆರಂಭವಾಗಿದೆ. ಜಾನಪದ ಅಭಿರುಚಿ ಶಿಬಿರ, ಜಾನಪದ ಸಂಶೋಧನಾ ಕಮ್ಮಟ, ವಿಚಾರ ಸಂಕಿರಣಗಳನ್ನು ಜಾನಪದ ಲೋಕದಲ್ಲಿ ನಿಯತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಸುಸಜ್ಜಿತವಾದ ಜಾನಪದ ಗ್ರಂಥಾಲಯವಿದೆ.

ಅತ್ಯಂತ ಮಹತ್ವದ ಸಾಂಸ್ಕೃತಿಕ ಕೇಂದ್ರ

English summary
Varius Folk artists performed at Janapada Loka Silver Jubilee celebration held at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X