ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರೈಸ್ತ ಪ್ರತಿಮೆಯನ್ನು ನಾನು ಪ್ರಬಲವಾಗಿ ವಿರೋಧಿಸುತ್ತೇನೆ: ಕಾಳಿಕಾ ಸ್ವಾಮಿ

|
Google Oneindia Kannada News

ರಾಮನಗರ, ಜನವರಿ 01: ಕನಕಪುರ ತಾಲ್ಲೂಕಿನ ಹಾರೋಬೆಲೆಯಲ್ಲಿ ಕ್ರೈಸ್ತ ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಾಳಿಕಾ ಆಶ್ರಮದ ಶ್ರೀ ಋಷಿಕುಮಾರ ಸ್ವಾಮಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಕ್ರೈಸ್ತ ಪ್ರತಿಮೆ ನಿರ್ಮಾಣವಾದರೆ ವಿದೇಶದಿಂದ ಹಣ ಬರುತ್ತೆ, ಆಮೇಲೆ ಕರ್ನಾಟಕ ಜನರು ಈ ಪ್ರತಿಮೆಯಿಂದ ಗುರುತಿಸಿಕೊಳ್ಳಬೇಕಾಗುತ್ತೆ, ಅಲ್ಲದೇ ಇಲ್ಲಿನ ರೈತರು ನಾಶವಾಗುವುದು ಖಂಡಿತ ಎಂದು ವಿರೋಧಿಸಿದ್ದಾರೆ.

ಅಂದು, ಇಂದು: ಡಿ.ಕೆ.ಶಿವಕುಮಾರ್ ಸಹೋದರರ ಡಬಲ್ ಸ್ಟ್ಯಾಂಡರ್ಡ್ಅಂದು, ಇಂದು: ಡಿ.ಕೆ.ಶಿವಕುಮಾರ್ ಸಹೋದರರ ಡಬಲ್ ಸ್ಟ್ಯಾಂಡರ್ಡ್

10 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡುತ್ತೇವೆ ಎಂದಿರೋದು ಸುಳ್ಳು, ಇದು ಕೇವಲ ಮತಬ್ಯಾಂಕ್ ಗೋಸ್ಕರ ಮಾಡಲಾಗುತ್ತಿದೆ. ಮಹಮ್ಮದಿಯರು ಹಾಗೂ ಕ್ರಿಶ್ಚಿಯನ್ನರ ಬಗ್ಗೆ ನನಗೆ ದ್ವೇಷವಿಲ್ಲ ಎಂದರು.

 I strongly Oppose The statue Of Jesus Christ: Kalika Swamy

ಡಿ.ಕೆ.ಶಿವಕುಮಾರ ಬಗ್ಗೆ ನನಗೆ ವೈಯಕ್ತಿಕವಾಗಿ ದ್ವೇಷವಿಲ್ಲ ಆದರೆ ಅವರು ಒಕ್ಕಲಿಗನಾಗಿ ಕಪಾಲನಾದ ಕಾಲಬೈರವೇಶ್ವರನ ಬದಲಾಗಿ ಏಸುವಿನ ಪ್ರತಿಮೆ ನಿರ್ಮಾಣ ಮಾಡ್ತಿರೋದನ್ನ ನಾನು ವಿರೋಧಿಸುತ್ತೇನೆ ಎಂದು ಋಷಿ ಕುಮಾರ ಸ್ವಾಮಿ ಹೇಳಿದರು.

ಕ್ರೈಸ್ತನ ಪ್ರತಿಮೆಯನ್ನೇ ಏಕೆ ನಿಲ್ಲಿಸುತ್ತಿದ್ದಾರೆ ಗೊತ್ತಿಲ್ಲ, ಸೋನಿಯಾ ಗಾಂಧಿ ಮೆಚ್ಚಿಸುವುದಕ್ಕೋ ಅಥವಾ ಕ್ರಿಶ್ಚಿಯನ್ನರ ಮೆಚ್ಚಿಸುವುದಕ್ಕೋ ಗೊತ್ತಿಲ್ಲ. ಇಲ್ಲಿ ಪ್ರತಿಮೆಯಾದರೆ ಪ್ರಾಂತ್ಯ ಉಳಿಯುವುದಿಲ್ಲ, ಹಿಂದೂ ಧರ್ಮ ನಾಶವಾಗುತ್ತೆ ಎಂದರು.

ಏಸು ಪ್ರತಿಮೆ ನಿರ್ಮಿಸಲು ಮುಂದಾದ ಡಿಕೆಶಿಗೆ ಬಿಎಸ್ವೈ ಪುತ್ರ ಕೇಳಿದ 3 ಪ್ರಶ್ನೆಗಳುಏಸು ಪ್ರತಿಮೆ ನಿರ್ಮಿಸಲು ಮುಂದಾದ ಡಿಕೆಶಿಗೆ ಬಿಎಸ್ವೈ ಪುತ್ರ ಕೇಳಿದ 3 ಪ್ರಶ್ನೆಗಳು

ಇದು ಸಾಮಾನ್ಯ ಕೆಲಸವಲ್ಲ, ಇಡೀ ವಿಶ್ವವನ್ನೇ ತಿರುಗಿಸುವ ಕೆಲಸವಿದು. ಪ್ರಪಂಚದ ನಾನಾ ಕಡೆಗಳಿಂದ ಕ್ರೈಸ್ತರು ಬಂದು ಇಲ್ಲಿ ನೆಲೆಸುತ್ತಾರೆ. ಮತಾಂತರಗೊಳಿಸುವ ಹುನ್ನಾರವಿದು, ಇದರ ವಿರುದ್ದ ಹೋರಾಟಕ್ಕೆ ಯಾರು ಬರದೇ ಇದ್ರೂ ಪರವಾಗಿಲ್ಲ ನಾನು ಏಕಾಂಗಿಯಾಗಿ ಎದೆ ಕೊಟ್ಟು ಹೋರಾಡುತ್ತೇನೆ ಎಂದು ಕಾಳಿಕಾ ಮಠದ ಋಷಿಕುಮಾರ ಸ್ವಾಮಿ ಹೇಳಿದರು.

English summary
Sri Rishikumara Swamy of Kalika Ashram has objected to For construction of a Christian statue at Harobele in Kanakapura Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X