ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅದೃಷ್ಟದಿಂದಲೇ ನಾನು ಎರಡು ಬಾರಿ ಸಿಎಂ ಆದೆ: ಎಚ್‌ಡಿಕೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜುಲೈ 27: "ಅದೃಷ್ಟದಿಂದಲೇ ನಾನು ಎರಡು ಬಾರಿಯೂ ರಾಜ್ಯದ ಸಿಎಂ ಆಗಿದ್ದೇನೆ,'' ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ರಾಮನಗರದ ಶಕ್ತಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‌ಡಿಕೆ, "ಜೆಡಿಎಸ್‍ಗೆ ಮುಂದೆ ಒಳ್ಳೆಯ ಭವಿಷ್ಯವಿದೆ ಎಂಬ ವಿಶ್ವಾಸ ನನಗಿದೆ. ನಾನು ಎರಡು ಬಾರಿ ಸಿಎಂ ಅಗಿದ್ದರೂ ಅದೃಷ್ಟದಿಂದಲೇ ಆಗಿದ್ದೇನೆ. ಜನರ ಆರ್ಶೀವಾದದಿಂದ ನಾನು ಸಿಎಂ ಆಗಲಿಲ್ಲ. ತಾಯಿ ಚಾಮುಂಡೇಶ್ವರಿ ನನಗೆ ಅಧಿಕಾರ ಕೊಡ್ತಾಳೆ. ರಾಜ್ಯದ ಜನರ ಪರವಾಗಿ ಜೆಡಿಎಸ್ ಮುಂದೆ ಕೆಲಸ ಮಾಡಲಿದೆ,'' ಎಂದು ತಿಳಿಸಿದರು.

"ಜೆಡಿಎಸ್ ಮುಗಿದೇ ಹೋಯ್ತು ಎನ್ನುವವರಿಗೆ ಮುಂದೆ ಉತ್ತರ ಸಿಗಲಿದೆ. ತಾಯಿ ಚಾಮುಂಡೇಶ್ವರಿ ಜೆಡಿಎಸ್‍ಗೆ ಅಧಿಕಾರ ಕೊಡ್ತಾಳೆ ಎನ್ನುವ ವಿಶ್ವಾಸವಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

Ramanagara: I Got Chief Minister Post Twice By Luck Only: Former CM HD Kumaraswamy

ಬಿಜೆಪಿ ಪಕ್ಷದ ನೂತನ ಸಿಎಂ ಆಯ್ಕೆ ವಿಚಾರ ಮಾತನಾಡಿದ ಮಾಜಿ ಸಿಎಂ ಎಚ್‌ಡಿಕೆ, "ಅದು ಅವರ ಪಕ್ಷದ ಆಂತರಿಕ ವಿಚಾರ. ಅದರ ಬಗ್ಗೆ ಯಾವುದೇ ಮಾಹಿತಿ ನನಗೆ ತಿಳಿದಿಲ್ಲ. ಈಗಾಗಲೇ ಪ್ರಧಾನಿ ಮೋದಿಯವರು ರಾಜ್ಯದ ಬಗ್ಗೆ ಮಾಹಿತಿ ಪಡೆದಿರುತ್ತಾರೆ. ಹಾಗಾಗಿ ಯಾರು ಸಿಎಂ ಆಗಬೇಕೆಂದು ಅವರ ಪಕ್ಷ ನಿರ್ಧಾರ ಮಾಡುತ್ತದೆ,'' ಎಂದು ಅಭಿಪ್ರಾಯಪಟ್ಟರು.

ಬಿ.ಎಸ್. ಯಡಿಯೂರಪ್ಪ ಪರವಾಗಿ ಮಾತನಾಡಿದ ಕಾಂಗ್ರೆಸ್ ನಾಯಕರ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, "ಇದು ಒಂದು ಸಮುದಾಯದ ಓಲೈಕೆಗಾಗಿ ಮಾಡುತ್ತಿರುವ ಪ್ರಯತ್ನವಾಗಿದೆ. ಈಗಾಗಲೇ ಮುಂದಿನ ಸಿಎಂ ಕುರ್ಚಿಗೆ ಟವೆಲ್ ಹಾಕಿರುವವರು ಹೇಳುತ್ತಾರೆ. ಈಗಿದ್ದ ಸಿಎಂ ಭ್ರಷ್ಟರು, ಮುಂದೆ ಬರುವವರು ಭ್ರಷ್ಟರೇ?,'' ಎಂದು ಟಾಂಗ್ ಕೊಟ್ಟಿದ್ದಾರೆ.

Ramanagara: I Got Chief Minister Post Twice By Luck Only: Former CM HD Kumaraswamy

Recommended Video

ಬಸವರಾಜ್ ಬೊಮ್ಮಾಯಿ ರಾಜಕೀಯ ಜೀವನ | Oneindia Kannada

"ಜೆಡಿಎಸ್ ಪಕ್ಷ ಈ ಬೆಳವಣಿಗೆಯನ್ನು ಲಾಭದ ಬಗ್ಗೆ ಚಿಂತನೆ ಮಾಡಲ್ಲ. ಜನರ ಪರವಾಗಿ ಸರ್ಕಾರ ಚಿಂತಿಸಲಿ ಎಂದು ಹೇಳುತ್ತೇನೆ. ಈ ಬೆಳವಣಿಗೆಯಿಂದ ಜನರಿಗೆ ತೊಂದರೆಯಾಗಬಾರದು ಎಂದು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ಗೆ ಟಾಂಗ್ ಕೊಟ್ಟಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಹಾಗೂ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಚಾಮುಂಡೇಶ್ವರಿ ದರ್ಶನ ಪಡೆದರು.

English summary
I got Chief Minister post twice from Luck only, Former CM HD Kumaraswamy said In Ramanagara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X