ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'7 ಶಾಸಕರನ್ನು ಮಡಿ ಮಾಡಿಕೊಂಡು ಕಾಂಗ್ರೆಸ್ ಸೇರಿಸಿಕೊಂಡರಾ?'

By ರಾಮನಗರ ಪ್ರತಿನಿಧಿ
|
Google Oneindia Kannada News

Recommended Video

7 ಶಾಸಕರಿಗೆ ವಾರ್ನಿಂಗ್ ಕೊಟ್ಟು ರಾಹುಲ್ ಗಾಂಧಿಯನ್ನ ತರಾಟೆಗೆ ತೆಗೆದುಕೊಂಡ ಗೌಡ್ರು | Oneindia Kannada

ರಾಮನಗರ, ಏಪ್ರಿಲ್ 13: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಾವು ಸ್ವಚ್ಛವಾಗಿದ್ದೇವೆ ಎನ್ನುತ್ತಾರೆ. ಆದರೆ ಏಳು ಶಾಸಕರು ಈ ಹಿಂದೆ ಬಿಜೆಪಿ ಸರಕಾರದಲ್ಲಿ ಮಂತ್ರಿಗಳಾಗಿದ್ದವರು. ಈಗ ಅವರನ್ನು ಮಡಿ ಹಾಗೂ ಶುದ್ಧಿ ಮಾಡಿಕೊಂಡು ಪಕ್ಷಕ್ಕೆ ಸೇರಿಸಿಕೊಂಡರಾ? ಅಥವಾ ಕಾಂಗ್ರೆಸ್ ಸೇರಿದ ಮೇಲೆ ಅವರೆಲ್ಲ ಜಾತ್ಯತೀತ ನಾಯಕರಾದರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರಶ್ನೆ ಮಾಡಿದ್ದಾರೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ರಾಮನಗರದಲ್ಲಿ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಮತ್ತು ಬೆಂಬಲಿಗರನ್ನು ಜೆಡಿಎಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕದ ತೆಲುಗು ಜನಗಳು ಜೆಡಿಎಸ್‌ಗೆ ಬೆಂಬಲಿಸಲು ಕೆಸಿಆರ್‌ ಕರೆಕರ್ನಾಟಕದ ತೆಲುಗು ಜನಗಳು ಜೆಡಿಎಸ್‌ಗೆ ಬೆಂಬಲಿಸಲು ಕೆಸಿಆರ್‌ ಕರೆ

ಬಾಯಿಗೆ ಬಂದಂತೆ ಮಾತನಾಡುವುದು ಬಿಟ್ಟು ಯೋಗ್ಯ ಆಡಳಿತ ನೀಡಿದ್ದೇವೆ. ಉತ್ತಮ ಪ್ಯಾಕೇಜ್ ನೀಡಿದ್ದೇವೆ. ಅದಕ್ಕೆ ಮತ ನೀಡಿ ಎಂದು ಜನರಲ್ಲಿ ಕೇಳಿ. ರಾಜ್ಯವನ್ನ ಹೇಗೆಲ್ಲ ಲೂಟಿ ಮಾಡಿದ್ದಿರಿ, ಎಲ್ಲಿ ಎಲ್ಲಿ ಅಕ್ರಮಗಳನ್ನು ಮಾಡಿದ್ದಿರಿ ಎಲ್ಲವೂ ನನಗೆ ಗೊತ್ತಿದೆ. ಸಮಯ ಬಂದಾಗ ಎಲ್ಲವನ್ನೂ ಬಿಚ್ಚಿಡುತ್ತೇನೆ ಎಂದು ಗೌಡರು ಗುಡುಗಿದರು.

How Rahul Gandhi allowed 7 JDS MLAs to join Congress?: Deve Gowda

ಇನ್ನು ರಾಹುಲ್ ಕರೆದು ಟಿಕೆಟ್ ನೀಡಿರುವ ಏಳು ಶಾಸಕರ ಜಾತಕವೂ ಗೊತ್ತಿದೆ. ಅವರು ನನಗೆ ಎಷ್ಟು ಕಿರುಕುಳ ಕೊಟ್ಟಿದ್ದಾರೆ ಎಂಬುದು ನನಗೆ ನೆನಪಿದೆ. ಎಲ್ಲೆಂದರಲ್ಲಿ ಮಾತನಾಡುವುದನ್ನು ಮಾರ್ಯಾದೆಯಿಂದ ನಿಲ್ಲಿಸಿ, ಯೋಗ್ಯವಾದ ಮಾತನಾಡಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಏಳು ಶಾಸಕರಿಗೆ ಎಚ್ಚರಿಕೆ ನೀಡಿದರು.

English summary
Karnataka Assembly Elections 2018: How AICC president Rahul Gandhi allowed 7 JDS MLA's to join Congress? asked former prime minister HD Deve Gowda in Channapatna, Ramanagara district. JDS 7 rebel MLA's troubled me and will disclose all their details in right time, Deve Gowda further added.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X