ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಜನ ಮುಳುಗಿದ್ದರೆ, ಬಿಜೆಪಿ ನಾಯಕರಿಗೆ ನೃತ್ಯದ ವಿಕೃತಿ ಎಂದು ಡಿಕೆ ಸುರೇಶ್ ಸಿಡಿಮಿಡಿ

By ರಾಮನಗರ, ಪ್ರತಿನಿಧಿ
|
Google Oneindia Kannada News

ರಾಮನಗರ, ಸೆಪ್ಟೆಂಬರ್ 10: ಕರ್ನಾಟಕದ ಎಲ್ಲಾ ಕಡೆ ಪ್ರವಾಹವಾಗಿ ಸಾಕಷ್ಟು ಅನಾಹುತಗಳಾಗುತ್ತಿದ್ದು, ಮನೆ, ಜಮೀನುಗಳು ಮುಳುಗಿ ಹಲವೆಡೆ ಪ್ರಾಣ ಹಾನಿ ಸಂಭವಿಸಿದೆ. ಅದರೆ ಬಿಜೆಪಿ ಪಕ್ಷದವರು ವೇದಿಕೆ ಮೇಲೆ ನೃತ್ಯ ಮಾಡುವ ಮೂಲಕ ವಿಕೃತಿ ಮೆರೆಯುತ್ತಿದ್ದಾರೆ ಎಂದು ಬೆಂಗಳೂರು ಲೋಕಸಭಾ ಸದಸ್ಯ ಡಿ.ಕೆ.ಸುರೇಶ್ ಕಿಡಿ ಕಾರಿದರು.

ಶನಿವಾರ ಜಿಲ್ಲೆಯಲ್ಲಿ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಬಿಜೆಪಿ ಹಮ್ಮಿಕೊಂಡಿರುವ ಜನಸ್ಪಂದನ ಕಾರ್ಯಕ್ರಮದ ವಿರುದ್ಧ ಹರಿ ಹಾಯ್ದರು. ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ರಣ ಮಳೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

Breaking: ಧಮ್‌ ಇದ್ದರೆ 'ಕಮಲ' ಅರಳುವುದನ್ನು ನಿಲ್ಲಿಸಿ: ಕಾಂಗ್ರೆಸ್‌ಗೆ ಬೊಮ್ಮಾಯಿ ಸವಾಲುBreaking: ಧಮ್‌ ಇದ್ದರೆ 'ಕಮಲ' ಅರಳುವುದನ್ನು ನಿಲ್ಲಿಸಿ: ಕಾಂಗ್ರೆಸ್‌ಗೆ ಬೊಮ್ಮಾಯಿ ಸವಾಲು

ಜನರ ಜೀವವಷ್ಟೇ ಉಳಿದಿದ್ದು, ಜೀವನ ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದೆ. ಜನರು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಜನಸ್ಪಂದನೆ ಕಾರ್ಯಕ್ರಮ ಮಾಡೋದು ಎಷ್ಟು ಸರಿ.? ಎಂದು ಪ್ರಶ್ನೆ ಮಾಡಿದ್ದಾರೆ.

How BJP leaders dancing on Janotsava programme, DK Suresh questioned

ಬಿಜೆಪಿಯವರಲ್ಲಿ ಇದೆಂಥಾ ವಿಕೃತಿ?:
ಒಂದು ಕಡೆ ಜನ ಸಾವು ನೋವಿಂದ ನರಳುತ್ತಿದ್ದರೆ, ಮತ್ತೊಂದು ಕಡೆ ಬಿಜೆಪಿ ಪಕ್ಷದ ನಾಯಕರು ವೇದಿಕೆ ಮೇಲೆ ನೃತ್ಯ ಮಾಡಿ ಸಂಭ್ರಮಿಸುತ್ತಿದ್ದಾರೆ. ಜನ ನೋವಿನಲ್ಲಿ ಇರುವಾಗ ನೃತ್ಯಮಾಡಿ ಸಂತೋಷ ಪಡುವುದು ಎಂಥಾ ವಿಕೃತಿ. ಇದನ್ನು ರಾಜ್ಯದ ಜನರು ಕೂಡಾ ಗಮನಿಸಬೇಕು. ವಿಕೃತಿ ಮೆರೆದಿರುವ ಬಿಜೆಪಿ ವರ್ತನೆಯನ್ನು ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ಆರ್ ಎಸ್ಎಸ್ ಮುಖ್ಯಸ್ಥರು ವಿಶ್ಲೇಷಣೆ ಮಾಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ವ್ಯಂಗ್ಯವಾಡಿದರು. ಈ ಜನಸ್ಪಂದೆನೆ ಕಾರ್ಯಕ್ರಮದ ವೇದಿಕೆಯಲ್ಲಿ ನೃತ್ಯ ಮಾಡುವ ಮೂಲಕ ಅವರ ಸರ್ಕಾರದ ಯೋಗ್ಯತೆಯನ್ನು ತೋರಿಸಿದ್ದಾರೆ. ಜನರಿಗೆ ಸ್ವಂದಿಸದೇ ವಿಕೃತಿ ಮೆರಯುತ್ತಿರುವ ಇವರಿಗೆ ಅಧಿಕಾರ ಯಾಕೆ ಬೇಕು, ಮೂದಲು ರಾಜಿನಾಮೆ ಕೊಟ್ಟು ತೊಲಗಲಿ. ಇದಕ್ಕೆ ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕರು ಉತ್ತರ ಕೊಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದರು.

How BJP leaders dancing on Janotsava programme, DK Suresh questioned

ಪ್ರತಾಪ್ ಸಿಂಹರಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ:
ಇತ್ತೀಜಿಗೆ ಸುರಿದ ಬಾರಿ ಮಳೆಗೆ ದಶಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಂಟಾದ ಅವಾಂತರಕ್ಕೆ ಕೆರೆ ಹಾಗೂ ರಾಜಕಾಲುವೆ ಒತ್ತುವರಿ ಕಾರಣ ಎಂದು ಪ್ರತಾಪ್ ಸಿಂಹ ಹೇಳಿಕೆ ಕೊಟ್ಟಿದ್ದಾರೆ. ಈ ಹೇಳಿಕೆಗೆ ತಿರುಗೇಟು ನೀಡಿದ ಸಂಸದ ಡಿ.ಕೆ.ಸುರೇಶ್, ಮೈಸೂರು ಸಂಸದರು ದಯವಿಟ್ಟು ಮೈಸೂರು ಕೊಡಗಿನಲ್ಲಿ ಏನು ಮಾಡಬೇಕೋ ಅದನ್ನು ಮಾಡಲಿ ಎಂದರು. ಅನಾವಶ್ಯಕವಾಗಿ ಎಲ್ಲಾ ನಂದೆ ಎನ್ನುವ ಹಾಗೆ ನಮ್ಮ ಕೇತ್ರಗಳಲ್ಲಿ ಮೂಗು ತೂರಿಸಲು ಬರಬೇಡಿ. ನಮ್ಮ ಕ್ಷೇತ್ರಗಳ ನಿಮ್ಮದೇನಾದ್ರೂ ಇದ್ರೆ ಬನ್ನಿ, ನಾನು ಬರುತ್ತೇನೆ. ಎಲ್ಲಾ ವಿಚಾರಗಳನ್ನು ಜನರ ಮುಂದೆ ಇಡೋಣ. ಜನ ಕೇಳಿದ್ದಕ್ಕೆ ನಾವು, ನೀವು ಉತ್ತರ ಹೇಳೋಣ ಎಂದು ಸವಾಲ್ ಹಾಕಿದರು.

ದಶಪಥ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಾಗಾರಿ ಬಗ್ಗೆ ಟೀಕೆ ಮಾಡುವ ಡಿಕೆ ಸಹೋದರರು ಮೊದಲು ಕನಕಪುರ ರಸ್ತೆ ಸರಿ ಮಾಡಿಸಿ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ಸಂಸದ ಡಿ.ಕೆ.ಸುರೇಶ್ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು. ನಾನು ನಿಮ್ಮಿಂದ ಪಾಠ ಕಲಿಯುವ ಅವಶ್ಯಕತೆ ಇಲ್ಲ. ನಿಮ್ಮ ನಾಯಕರ ಸಲಹೆಗಳ ಅವಶ್ಯಕತೆಯೂ ಇಲ್ಲ. ನನಗೆ ನನ್ನದೇ ಜನರ ಸಲಹೆ, ಮಾರ್ಗದರ್ಶನ ಇದೆ. ನಿಮ್ಮ ಸಲಹೆಳು ನನಗೆ ಬೇಕಾಗಿಲ್ಲ ಎಂದರು.

How BJP leaders dancing on Janotsava programme, DK Suresh questioned

ನೆರೆಗೆ ದಶಪಥ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ಕಾರಣ:
ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದಾರೆ. ಎಲಿವೇಷನ್ ರೋಡ್ ಹಾಗೂ ಅದರ ಕೆಳಭಾಗದಲ್ಲೂ ನೀರು ನಿಂತಿದೆ. ಕಾಲುವೆ ಸರಿಯಾಗಿ ಮಾಡದೆ ಅವರಿಗೆ ಬೇಕಾದ ಜಾಗದಲ್ಲಿ ಅಂಡರ್ ಪಾಸ್ ಮಾಡಿದ್ದಾರೆ. ಗ್ರಾಮಗಳ ಚರಂಡಿಗಳನ್ನು ಹೆದ್ದಾರಿ ಗುತ್ತಿಗೆದಾರರು ಮುಚ್ವಿದ್ದಾರೆ. ಇದರಿಂದ ಸಾಕಷ್ಟು ನಷ್ಟವಾಗಿದೆ. ಅವರಿಗೆ ಸೂಕ್ತ ಪರಿಹಾರವನ್ನು ಗುತ್ತಿಗೆದಾರರು ಅಥವಾ ಕೇಂದ್ರ ಸರ್ಕಾರ ನೀಡಬೇಕು. ಅಲ್ಲದೇ ಹೆದ್ದಾರಿಯ ತಿರುವುಗಳಲ್ಲಿ ಸರಿಯಾದ ಲೆವೆಲ್ ನೀಡಿಲ್ಲ ಹಾಗಾಗಿ ಲಾರಿ ಬಸ್ ಗಳು ರಸ್ತೆಯಲ್ಲಿ ನಿಯಂತ್ರಣ ಕಳೆದುಕೊಂಡು ಮೊಗಚಿ ಬೀಳುತ್ತಿವೆ. ಎಲ್ಲೆಲ್ಲಿ ಅವೈಜ್ಞಾನಿಕ ಕಾಮಾಗಾರಿ ನಡೆದಿದೆ ಅದನ್ನು ಆದಷ್ಟು ಬೇಗ ಸರಿ ಮಾಡಬೇಕು ಎಂದು ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದರು.

English summary
Amid Bengaluru Flood Situation How BJP leaders dancing on Janotsava programme, DK Suresh questioned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X