ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ; ಚನ್ನಪಟ್ಟಣದಲ್ಲಿ ಆನೆ ದಾಳಿಗೆ ಮನೆ, ಬೆಳೆ ನಾಶ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ 01; ಕಾಡಾನೆಗಳ ಹಿಂಡು ರೈತರ ಜಮೀನುಗಳ ಮೇಲೆ ದಾಳಿ ಇಟ್ಟು ಬೆಳೆ ನಾಶ ಮಾಡುತ್ತಿರುವ ಘಟನೆಗಳು ರೇಷ್ಮೆ ನಗರಿಯಾದ ರಾಮನಗರದಲ್ಲಿ ನಡೆಯುತ್ತಲೇ ಇವೆ. ಇದೀಗ ರೈತರ ಮನೆಗಳ ಮೇಲೂ ಕೂಡ ಆನೆಗಳು ದಾಳಿ ಮಾಡುತ್ತಿವೆ.

ಆನೆಗಳ ದಾಳಿಯಿಂದಾಗಿ ಕಾಡಂಚಿನ ಗ್ರಾಮದ ರೈತರು ಪ್ರತಿನಿತ್ಯ ಜೀವವನ್ನು ಬಿಗಿಹಿಡಿದು ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆನೆಗಳ ಕಾಟದಿಂದ ಮುಕ್ತಿ ನೀಡಲು ಶಾಶ್ವತ ವ್ಯವಸ್ಥೆ ಮಾಡಬೇಕು ಎಂದು ಜನರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ರಾಮನಗರ; ಸೇತುವೆ ಬಿದ್ದು 5 ತಿಂಗಳಾದರೂ ದುರಸ್ತಿಯೇ ಆಗಿಲ್ಲ ರಾಮನಗರ; ಸೇತುವೆ ಬಿದ್ದು 5 ತಿಂಗಳಾದರೂ ದುರಸ್ತಿಯೇ ಆಗಿಲ್ಲ

ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಸಿಂಗರಾಜಿಪುರ ಗ್ರಾಮದ ಕಲಾವತಿ ಎಂಬ ರೈತ ಮಹಿಳೆಯ ಮನೆ ಮೇಲೆ ಶನಿವಾರ ತಡರಾತ್ರಿ ಆನೆಗಳು ದಾಳಿ ಮಾಡಿವೆ. 4 ರಿಂದ 5 ಆನೆಗಳ ದಾಳಿಗೆ ಕಬ್ಬಿಣದ ಗೇಟ್, ಕಾಂಪೌಂಡ್, ಸಿಮೆಂಟ್ ಶೀಟ್‌ ಕಿತ್ತು ಹೋಗಿದೆ. ಮನೆಗೆ ಹಾನಿಯಾಗಿದೆ.

ತುಮಕೂರು ಮಠದ ಆನೆ ಕಿಡ್ನಾಪ್ ಯತ್ನ; ಏನಿದು ವೈರಲ್ ಸುದ್ದಿ! ತುಮಕೂರು ಮಠದ ಆನೆ ಕಿಡ್ನಾಪ್ ಯತ್ನ; ಏನಿದು ವೈರಲ್ ಸುದ್ದಿ!

ಮನೆಯಲ್ಲಿ ರೇಷ್ಮೆ ಸಾಕಾಣಿಕೆಗೆ ಇಟ್ಟಿದ್ದ ರೇಷ್ಮೆಯ ಚಂದ್ರಿಕೆಗಳನ್ನು ಸಹ ಆನೆಳು ನಾಶಪಡಿಸಿವೆ. ಇದರಿಂದ ಸಾವಿರಾರು ರೂಪಾಯಿ ಮೌಲ್ಯದ ರೇಷ್ಮೆ ಗೂಡು ಸಹ ನಷ್ಟವಾಗಿದೆ. ಇದೀಗ ಮಹಿಳೆ ಮನೆ ಹಾಗೂ ರೇಷ್ಮೆ ಗೂಡನ್ನು ಕಳೆದುಕೊಂಡು ಕಂಗಲಾಗಿದ್ದಾರೆ.

ವಿಡಿಯೋ; ಶಾಲೆ ಆರಂಭ, ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಆನೆ ವಿಡಿಯೋ; ಶಾಲೆ ಆರಂಭ, ವಿದ್ಯಾರ್ಥಿಗಳಿಗೆ ಸ್ವಾಗತ ಕೋರಿದ ಆನೆ

ಬೆಳಗ್ಗೆ 8 ಗಂಟೆಗೆ ಬಂದಿದ್ದ ಆನೆಗಳು

ಬೆಳಗ್ಗೆ 8 ಗಂಟೆಗೆ ಬಂದಿದ್ದ ಆನೆಗಳು

ಸಿಂಗರಾಜಿಪುರ ಗ್ರಾಮದ ವ್ಯಾಪ್ತಿಯಲ್ಲಿ ಗಜಪಡೆಗಳು ರೈತರ ಜಮೀನಿಗೆ ನುಗ್ಗಿ ಬೆಳೆಗಳನ್ನು ನಾಶ ಪಡಿಸುತ್ತಲೇ ಇವೆ. ಮಾವು, ತೆಂಗು, ಬಾಳೆ ಸೇರಿದಂತೆ ವಿವಿಧ ಬೆಳೆಗಳ ಮೇಲೆ ನಿರಂತರವಾಗಿ ಆನೆಗಳು ದಾಳಿ ಮಾಡುತ್ತಿವೆ. ಕಳೆದ ಮೂರು ದಿನಗಳ ಹಿಂದೆ ಬೆಳಗ್ಗೆ 8 ಗಂಟೆ ಸಮಯದಲ್ಲೇ ಆನೆಗಳು ಗ್ರಾಮದ ಒಳಗೆ ಪ್ರವೇಶ ಮಾಡಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದವು.

ಅಧಿಕಾರಿಗಳಿಂದ ಪರಿಹಾರದ ಭರವಸೆ

ಅಧಿಕಾರಿಗಳಿಂದ ಪರಿಹಾರದ ಭರವಸೆ

ಪ್ರತಿ ಬಾರಿ ಆನೆ ದಾಳಿಯಾದ ಸಮಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ನೀಡುವ ಭರವಸೆ ನೀಡುತ್ತಾರೆ. ಆದರೆ ಆನೆ ದಾಳಿ ತಡೆಗೆ ಶಾಶ್ವತ ಪರಿಹಾರಬೇಕು. ಹಾಗಾಗಿ ಕ್ಷೇತ್ರದ ಶಾಸಕರು ಇತ್ತ ಗಮನಕೊಟ್ಟು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಬೇಕು ಎಂದು ಸ್ಥಳೀಯರು ಆಗ್ರಹ ಪಡಿಸಿದ್ದಾರೆ.

ವೈಜ್ಞಾನಿಕ ಪರಿಹಾರಕ್ಕೆ ಆಗ್ರಹ

ವೈಜ್ಞಾನಿಕ ಪರಿಹಾರಕ್ಕೆ ಆಗ್ರಹ

ಆನೆಗಳ ಕಾಟ ವಿಪರೀತವಾಗಿದ್ದು ರೈತರ ಬೆಳೆದ ಫಸಲು ಆನೆಗಳ ದಾಳಿಯಿಂದ ನಾಶವಾಗುತ್ತಿದೆ. ಆನೆ ದಾಳಿಗೆ ಹಾಳಾದ ಬೆಳೆಗೆ ಅರಣ್ಯ ಇಲಾಖೆ ವೈಜ್ಞಾನಿಕ ಪರಿಹಾರ ನೀಡುತ್ತಿಲ್ಲ. ಸರ್ಕಾರ ನೀಡುವ ಪರಿಹಾರ ಯಾವುದಕ್ಕೂ ಸಾಕಾಗುತ್ತಿಲ್ಲ. ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡುವಂತೆ ಸರ್ಕಾರ ಮತ್ತು ಅರಣ್ಯಾಧಿಕಾರಗಳನ್ನು ರೈತರು ಆಗ್ರಹಿಸಿದರು.

ಆನೆಗಳು ಕಾಡಿನಿಂದ ನಾಡಿಗೆ ಬರದಂತೆ ಮಾಡಲು ಕೈಗೊಂಡ ಸರ್ಕಾರದ ಕ್ರಮಗಳು ವಿಫಲವಾಗಿವೆ. ಆನೆ ದಾಳಿಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿರುವ ರೈಲು ಹಳಿಯ ಬೇಲಿ ಯೋಜನೆಯ ಅನುಷ್ಠಾನ ಮಾಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಫಲ ಕೊಡದ ಸರ್ಕಾರದ ಕ್ರಮಗಳು

ಫಲ ಕೊಡದ ಸರ್ಕಾರದ ಕ್ರಮಗಳು

ಆನೆ ದಾಳಿ ತಡೆಯುವ ನಿಟ್ಟಿನಲ್ಲಿ ನಿರ್ಮಿಸಿದ ಆನೆ ಕಂದಕ, ಸೋಲಾರ್ ಬೇಲಿ ಸೇರಿದಂತೆ ಯಾವುದೇ ಕ್ರಮಗಳು ಆನೆ ದಾಳಿ ತಡೆಗಟ್ಟುವಲ್ಲಿ ವಿಫಲವಾಗಿದೆ. ಇನ್ನೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೈಲು ಕಂಬಿ ಬೇಲಿ ಪರಿಚಯಿಸಿದ್ದು ಪರಿಣಾಮಕಾರಿಯಾಗಿತ್ತು ಹಾಗೂ ಯೋಜನೆ ಅನುಷ್ಟಾನಕ್ಕೆ 100 ಕೋಟಿ ಅನುದಾನ ಮೀಸಲಿಟ್ಟಿತ್ತು. ಎಚ್. ಡಿ. ಕುಮಾರಸ್ವಾಮಿ ರಾಮನಗರ ಜಿಲ್ಲಾಧಿಕಾರಿ ಕಛೇರಿಯಲ್ಲಿ ಸಭೆ ನಡೆಸಿ ರೈಲಿ ಕಂಬಿ ಬೇಲಿ ನಿರ್ಮಾಣ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಿ ಹಲವು ತಿಂಗಳುಗಳೇ ಕಳೆದರು ಆನೆ ದಾಳಿಗೆ ಕಡಿವಾಣ ಬಿದ್ದಿಲ್ಲ.

Recommended Video

Virat Kohli ಐವತ್ತು ರನ್ ಗಳಿಸಿದಾಗ Shami ಮಾಡಿದ್ದೇನು | Oneindia Kannada

English summary
Crop and house damaged due to elephant attack in Ramanagara district Chennapatna. Villagers upset with the forest department officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X