ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರದಲ್ಲಿ ಸಚಿವ- ಸಂಸದರ ಗಲಾಟೆ ಕುರಿತು ವರದಿ ಕೇಳಿದ ಗೃಹ ಸಚಿವ

|
Google Oneindia Kannada News

ರಾಮನಗರ, ಜನವರಿ 3: ರಾಮನಗರ ಜಿಲ್ಲಾಡಳಿತ ಭವನದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಮತ್ತು ಸಂಸದ ಡಿ.ಕೆ. ಸುರೇಶ್ ನಡುವೆ ಗಲಾಟೆ ನಡೆದಿದೆ.

ರಾಮನಗರದ ಗಲಾಟೆ ಕುರಿತು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ರಾಮನಗರದ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿಗಳ ಘನ ಉಪಸ್ಥಿತಿಯಲ್ಲಿಯೇ, ಸಚಿವರ ಮೇಲೆ ಕಾಂಗ್ರೆಸ್ ನಾಯಕರ ಅನಾಗರಿಕ ವರ್ತನೆಯನ್ನು ಖಂಡಿಸುತ್ತೇನೆ ಎಂದು ತಿಳಿಸಿದ್ದಾರೆ.

ಹೇಸಿಗೆ ಹುಟ್ಟಿಸುವ ರಾಜಕೀಯಕ್ಕೆ ಸಾಕ್ಷಿಯಾದ ಸಿಎಂ ಬೊಮ್ಮಾಯಿ ಇದ್ದ ವೇದಿಕೆ!ಹೇಸಿಗೆ ಹುಟ್ಟಿಸುವ ರಾಜಕೀಯಕ್ಕೆ ಸಾಕ್ಷಿಯಾದ ಸಿಎಂ ಬೊಮ್ಮಾಯಿ ಇದ್ದ ವೇದಿಕೆ!

ಕಾಂಗ್ರೆಸ್ ನಾಯಕರ ಇಂದಿನ ದುಂಡಾವರ್ತನೆಯನ್ನು ಜನರು ಸಹಿಸುವುದಿಲ್ಲ. ಇಂದಿನ ಘಟನೆಯ ಬಗ್ಗೆ ರಾಮನಗರ ಜಿಲ್ಲಾ ಪೊಲೀಸರಿಂದ ವರದಿ ಕೇಳಿದ್ದೇನೆ. ಡಾ. ಅಶ್ವತ್ಥ ನಾರಾಯಣ ಮೇಲೆ ಸಿಎಂ ಸಮ್ಮುಖದಲ್ಲಿಯೇ ಹಲ್ಲೆಗೆ ಪ್ರಯತ್ನಿಸುವ ಮೂಲಕ ಕಾಂಗ್ರೆಸ್ ತನ್ನ ನಿಜ ಸ್ವರೂಪವಾದ ಗೂಂಡಾ ಸಂಸ್ಕೃತಿಯನ್ನು ಮತ್ತೊಮ್ಮೆ ರಾಜ್ಯದಲ್ಲಿ ಅನಾವರಣಗೊಳಿಸಿದೆ ಎಂದು ಹೇಳಿದ್ದಾರೆ.

Ramanagara: Home Minister Araga Jnanendra has Ask Report From Police On Uproar of MP and Minister

ಕಾಂಗ್ರೆಸ್ ಮುಖಂಡರ ವರ್ತನೆಗೆ ಸಚಿವ ಸಿ.ಸಿ. ಪಾಟೀಲ್ ಖಂಡನೆ
ಇಂದು ರಾಮನಗರ ಜಿಲ್ಲೆಯಲ್ಲಿ ಜನಪರ ಕಾರ್ಯಕ್ರಮವನ್ನು ಸರ್ಕಾರ ಆಯೋಜಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ತೋರಿದ ವರ್ತನೆ ಅವರಿಗೆ ಗೌರವ ತರುವಂತದ್ದಲ್ಲ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಖಂಡಿಸಿದ್ದಾರೆ.

ಮುಖ್ಯಮಂತ್ರಿಗಳು ಮತ್ತು ಸಚಿವರಾದ ಡಾ. ಅಶ್ವತ್ಥ ನಾರಾಯಣ ಅವರು ಭಾಗವಹಿಸಿದ ಕಾರ್ಯಕ್ರಮದ ವೇದಿಕೆಯಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಎಸ್. ರವಿ ಅಗೌರವ ಪ್ರದರ್ಶಿಸಿ ಅಶ್ವತ್ಥ ನಾರಾಯಣ ಮಾತಿಗೆ ಭಂಗ ತರಲು ಯತ್ನಿಸಿದ್ದು ಖಂಡನೀಯ. ಕಾಂಗ್ರೆಸ್‌ನಲ್ಲಿ ವಿವೇಕ ಮತ್ತು ವಿವೇಚನೆ ಇವೆರಡೂ ಅಧೋಗತಿಗೆ ಇಳಿಯುತ್ತಿರುವುದಕ್ಕೆ ಈ ಅಹಿತಕರ ಘಟನೆಯೇ ಸಾಕ್ಷಿಯಾಗಿದೆ ಎಂದಿದ್ದಾರೆ.

ಸಾರ್ವಜನಿಕ ಹಿತಾಸಕ್ತಿಯ ಕಾರ್ಯಕ್ರಮಗಳಲ್ಲಿ ಈ ರೀತಿಯ ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಅಥವಾ ತೋಳ್ಬಲಕ್ಕೆ ಮುಂದಾದರೆ ಸಾರ್ವಜನಿಕರೇ ತಕ್ಕಶಾಸ್ತಿ ಮಾಡುತ್ತಾರೆ ಎಂಬ ಎಚ್ಚರ ಅಗತ್ಯ ಎಂದು ಸಚಿವ ಸಿ.ಸಿ. ಪಾಟೀಲ್ ಹೇಳಿದ್ದಾರೆ.

Ramanagara: Home Minister Araga Jnanendra has Ask Report From Police On Uproar of MP and Minister

ರಾಮನಗರ ಗಲಾಟೆಗೆ ಮಾಜಿ ಸಿಎಂ ಎಚ್‌ಡಿಕೆ ಪ್ರತಿಕ್ರಿಯೆ
ರಾಮನಗರ ಜಿಲ್ಲೆ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಡಿ.ಕೆ. ಸುರೇಶ್- ಸಚಿವ ಅಶ್ವತ್ಥ ನಾರಾಯಣ ಕಿತ್ತಾಟ ವಿಚಾರದ ಕುರಿತು ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ರಾಮನಗರ ಜಿಲ್ಲೆ ಮಾಡಿದವನು, ಜಿಲ್ಲೆಯ ಅಭಿವೃದ್ಧಿ ಮಾಡಿದವನು ನಾನು ಇಲ್ಲಿದ್ದೀನಿ, ಅವರು ವೇದಿಕೆ ಮೇಲೆ ಕಿತ್ತಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಾನು ಮುಖ್ಯಮಂತ್ರಿಯಾಗಿದ್ದಾಗ 2016ರಲ್ಲಿ ರಾಜೀವ್ ಗಾಂಧಿ ಹೆಲ್ತ್ ಯೂನಿವರ್ಸಿಟಿ ಅನುಮೋದನೆ ಮಾಡಿದ್ದೆ. ರಾಮನಗರ ಜಿಲ್ಲೆಗೆ ನರ್ಸಿಂಗ್ ಮೆಡಿಕಲ್ ಕಾಲೇಜು ಮಂಜೂರು ಮಾಡಿದ್ದೆ. 360 ಕೋಟಿ ರೂ. ಅನುದಾನವನ್ನೂ ಬಿಡುಗಡೆ ಮಾಡಿದ್ದೆ. ಆದರೆ ನಮ್ಮ ಸರ್ಕಾರ ಇಳಿಯುತ್ತಿದ್ದಂತೆಯೇ ಎಲ್ಲವನ್ನೂ ನಿಲ್ಲಿಸಿಬಿಟ್ಟರು. 8 ವರ್ಷ ಬಿಜೆಪಿ ಸರ್ಕಾರ ಅಧಿಕಾರ ಮಾಡಿದೆ, 5 ವರ್ಷ ಕಾಂಗ್ರೆಸ್‌ ಸರ್ಕಾರ ಇತ್ತು. ಅವರಿಬ್ಬರೂ ಏನು ಮಾಡಿದರು? ನಾನು ಅನುಮೋದನೆ ಮಾಡಿದ್ದ ಆಸ್ಪತ್ರೆ ಕಟ್ಟಿಸಿದ್ದರೆ ಕೋವಿಡ್ ಸಂದರ್ಭದಲ್ಲಿ ಎಷ್ಟು ಪ್ರಾಣ ಉಳಿಸಬಹುದಿತ್ತು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

Ramanagara: Home Minister Araga Jnanendra has Ask Report From Police On Uproar of MP and Minister

ರಾಮನಗರ ಜಿಲ್ಲೆಯಲ್ಲಿ ಪ್ರತಿಭಟನೆ, ಆಕ್ರೋಶ
ಸಚಿವ ಅಶ್ವತ್ಥ ನಾರಾಯಣ್ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಚಿವ ಅಶ್ವತ್ಥ ನಾರಾಯಣ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ಸಿಎಂ ಇರುವ ವೇದಿಕೆಯಲ್ಲಿ‌ ಡಿ.ಕೆ. ಸುರೇಶ್ ವಿರುದ್ಧ ಏಕವಚನದಲ್ಲಿ ಮಾತನಾಡಿದ ಆರೋಪದ ಮೇರೆಗೆ ಸಚಿವ ಅಶ್ವತ್ಥ ನಾರಾಯಣರವರ ಭಾವಚಿತ್ರಕ್ಕೆ ಬೆಂಕಿ‌ ಹಚ್ಚಿ ಚನ್ನಪಟ್ಟಣ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Recommended Video

'ಡಿಸೈನ್ ವೀರರಿಗೆ' ನಮ್ಮ ನೆಲ, ನಮ್ಮ ಜಲ ಈಗ ನೆನಪಾಗಿದೆ: ಡಿಕೆ ಸಹೋದರರ ವಿರುದ್ಧ ಕುಮಾರಸ್ವಾಮಿ ಕಿಡಿ | Oneindia Kannada

English summary
Home Minister Araga Jnanendra has Ask report from police on uproar of MP DK Suresh and Minister Ashwath Narayan in Ramanagara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X