ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ ಜಿ.ಪಂ ನೂತನ ಅಧ್ಯಕ್ಷರ ನೇಮಕ: ಸಾಮಾಜಿಕ ಅಂತರ ಮರೆತ ಕಾಂಗ್ರೆಸ್ ಮುಖಂಡರು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ‌, ಸೆಪ್ಟೆಂಬರ್ 11: ರಾಮನಗರ ಜಿಲ್ಲಾ ಪಂಚಾಯತ್ ನೂತನ ಅಧ್ಯಕ್ಷರಾಗಿ ಕೂಟಗಲ್ ಜಿ.ಪಂ ಕ್ಷೇತ್ರದ ಸದಸ್ಯ ಎಚ್.ಎನ್ ಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅಧಿಕಾರ ಸಿಕ್ಕ ಮರು ಘಳಿಗೆಯಲ್ಲಿ ನೂತನ ಅಧ್ಯಕ್ಷರು ಸೇರಿದಂತೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಕೋವಿಡ್-19 ನಿಯಮಗಳನ್ನು ಗಾಳಿಗೆ ತೂರಿದರು.

ನನಗೆ ನಶೆ ಬರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದೇಕೆ ಕುಮಾರಸ್ವಾಮಿ?ನನಗೆ ನಶೆ ಬರಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದೇಕೆ ಕುಮಾರಸ್ವಾಮಿ?

ಮಾಗಡಿ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಎಚ್.ಸಿ ಬಾಲಕೃಷ್ಣ ಸಹೋದರ ಎಚ್.ಎನ್ ಅಶೋಕ್ ಅವರು, ಡಿಕೆಶಿ ಸಹೋದರ ಬೆಂಬಲದೊಂದಿಗೆ ಇಂದು ನಡೆದ ಚುನಾವಣೆಯಲ್ಲಿ ಜಿ.ಪಂ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Ramanagara: HN Ashok Unanimously Chosen As A Ramanagara Zilla Panchayat President

ಅಧ್ಯಕ್ಷರಿಗೆ ಶುಭ ಕೋರಲು ಗುಂಪುಗುಂಪಾಗಿ ಯಾವುದೇ ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಇಲ್ಲದೇ ನೂರಾರು ಜನ ಒಂದೆಡೆ ಸೇರಿ ಕೊರೊನಾ ನಿಯಮ ಉಲ್ಲಂಘನೆ ಮಾಡಿದರು.

ಪಂಚಾಯತ್ ಸಭಾಂಗಣದಲ್ಲಿ ಹಾರ-ತುರಾಯಿ ಹಿಡಿದು ಗುಂಪುಗುಂಪಾಗಿ ಸೇರಿದ ಅಭಿಮಾನಿಗಳಿಗೆ ಬುದ್ಧಿ ಹೇಳಬೇಕಾದ ಅಧ್ಯಕ್ಷರೇ ಸ್ವತಃ ಮಾಸ್ಕ್ ಧರಿಸದೇ, ಸಾಮಾಜಿಕ‌ ಅಂತರವನ್ನೂ ಪಾಲಿಸಲಿಲ್ಲ. ಇನ್ನು ಕೋವಿಡ್-19 ನಿಯಮಗಳನ್ನು ಅನುಷ್ಠಾನಕ್ಕೆ ತಂದು, ಪರಿಸ್ಥಿತಿ ನಿರ್ವಹಿಸುವಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಸಂಪೂರ್ಣ ವಿಫಲರಾದರು.

Ramanagara: HN Ashok Unanimously Chosen As A Ramanagara Zilla Panchayat President

Recommended Video

China ವಿರುದ್ಧ Siachen ನಲ್ಲಿ ನಮ್ಮ ಯೋಧರಿಗೆ ಎದುರಾಯ್ತು ದೊಡ್ಡ ಸಂಕಷ್ಟ. | Oneindia Kannada

ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಎಚ್.ಎನ್ ಅಶೋಕ್, ""ಕೋವಿಡ್-19 ಸಂಕಷ್ಟದ ಕಾಲದಲ್ಲಿ ಜಿಲ್ಲಾ ಪಂಚಾಯತ್ ಆಡಳಿತವನ್ನು ಸಮರ್ಥವಾಗಿ ನಡೆಸುವುದಾಗಿ'' ವಿಶ್ವಾಸ ವ್ಯಕ್ತಪಡಿಸಿದರು. ಅಧಿಕಾರ ಸ್ವೀಕರಿಸಿದ ಕ್ಷಣದಲ್ಲೇ ಕೋವಿಡ್-19 ನಿಯಮಗಳನ್ನೇ ಗಾಳಿ ತೋರಿರುವ ಬಗ್ಗೆ ಮಾಧ್ಯಮಗಳು ಗಮನ ಸೆಳೆದಾಗ, ""ಹೌದು, ತಪ್ಪಾಗಿದೆ ಪ್ರೀತಿಯನ್ನು ವ್ಯಕ್ತಪಡಿಸುವ ಬರದಲ್ಲಿ ಲೋಪವಾಗಿದೆ, ಕ್ಷಮಿಸಿ'' ಎಂದು ವಿಷಾದ ವ್ಯಕ್ತಪಡಿಸಿದರು.

English summary
HN Ashok has been unanimously elected as the new President of Ramanagar Zilla Panchayat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X