ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರದ ಹೇಮಲತಾ ಹತ್ಯೆ; ತನಿಖೆ ರವಿ ಡಿ. ಚನ್ನಣ್ಣನವರ್ ಕೈಗೆ

|
Google Oneindia Kannada News

ರಾಮನಗರ, ಅಕ್ಟೋಬರ್ 14: ರಾಮನಗರದ 19 ವರ್ಷದ ವಿದ್ಯಾರ್ಥಿನಿ ಹೇಮಲತಾ ಸಾವಿನ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ ಕೈಗೆ ಈ ಪ್ರಕರಣದ ತನಿಖೆ ಬಂದಿದೆ.

ರಾಮನಗರ ಜಿಲ್ಲೆಯ ಕುದೂರು ಪೊಲೀಸ್ ಠಾಣೆಯಲ್ಲಿ ಹೇಮಲತಾ ನಾಪತ್ತೆ ಬಗ್ಗೆ ದೂರು ದಾಖಲಾಗಿತ್ತು. ಶವ ಪತ್ತೆಯಾದ ಬಳಿಕ ಕೊಲೆ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಮನಗರ ಎಸ್ಪಿ ಗಿರೀಶ್ ಅವರಿಗೆ ಕೋವಿಡ್ ಸೋಂಕು ತಗುಲಿದೆ.

ರಾಮನಗರದಲ್ಲಿ ನಾಪತ್ತೆಯಾಗಿದ್ದ 18ರ ಯುವತಿ ಶವವಾಗಿ ಪತ್ತೆ ರಾಮನಗರದಲ್ಲಿ ನಾಪತ್ತೆಯಾಗಿದ್ದ 18ರ ಯುವತಿ ಶವವಾಗಿ ಪತ್ತೆ

ಆದ್ದರಿಂದ, ಈ ಪ್ರಕರಣದ ತನಿಖೆಯನ್ನು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್‌ಗೆ ನೀಡಲಾಗಿದೆ. ಪೊಲೀಸರ ತಂಡ ರವಿ ಡಿ. ಚನ್ನಣ್ಣನವರ್ ನೇತೃತ್ವದಲ್ಲಿ ತನಿಖೆಯನ್ನು ಮುಂದುವರೆಸಲಿದೆ.

 ಮರ್ಯಾದಾ ಹತ್ಯೆ: ರಾಮನಗರದಲ್ಲಿ ಮಗಳ ಪ್ರೇಮಿಯನ್ನು ಕೊಂದ ತಂದೆ ಮರ್ಯಾದಾ ಹತ್ಯೆ: ರಾಮನಗರದಲ್ಲಿ ಮಗಳ ಪ್ರೇಮಿಯನ್ನು ಕೊಂದ ತಂದೆ

 Hemalatha Murder Case Ravi D Channannavar To Take Probe

ಅಕ್ಟೋಬರ್ 8ರ ಸಂಜೆ ಮೊದಲ ವರ್ಷ ಬಿ. ಕಾಂ ವಿದ್ಯಾರ್ಥಿನಿ ಹೇಮಲತಾ ನಾಪತ್ತೆಯಾಗಿದ್ದಳು. ಪೋಷಕರು ಕುದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಭಾನುವಾರ ವಿದ್ಯಾರ್ಥಿನಿ ಶವ ದೊಡ್ಡಪ್ಪನ ಜಮೀನಿನಲ್ಲಿ ಮಣ್ಣಿನಲ್ಲಿ ಹೂತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಮರ್ಯಾದಾ ಹತ್ಯೆಗೆ ತಿರುವು; ಅಮೃತಾ ತಂದೆ ಆತ್ಮಹತ್ಯೆಮರ್ಯಾದಾ ಹತ್ಯೆಗೆ ತಿರುವು; ಅಮೃತಾ ತಂದೆ ಆತ್ಮಹತ್ಯೆ

ಹೇಮಲತಾ ಬಟ್ಟೆಗಳು ಬೇರೆ ಕಡೆ ಪತ್ತೆಯಾಗಿತ್ತು. ಶವವನ್ನು ಎಳೆದು ತಂದು ಹೂತು ಹಾಕಿರುವುದು ಖಚಿತವಾಗಿತ್ತು, ಶವದ ಹಣೆ ಭಾಗದಲ್ಲಿ ಗಾಯದ ಗುರುತುಗಳು ಪತ್ತೆಯಾಗಿದ್ದವು. ಆದ್ದರಿಂದ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ಹೇಮಲತಾ ಪೋಷರು ಆಕೆಯ ಪ್ರಿಯಕರ ಪುನೀತ್ ಮೇಲೆ ಅನುಮಾ ವ್ಯಕ್ತಪಡಿಸಿದ್ದಾರೆ. ಅನ್ಯ ಜಾತಿಯ ಯುವಕನನ್ನು ಹೇಮಲತಾ ಪ್ರೀತಿಸುತ್ತಿದ್ದಳು. ಆದ್ದರಿಂದ, ಇದು ಮರ್ಯಾದಾ ಹತ್ಯಯೇ ಎಂದು ಸಹ ತನಿಖೆ ನಡೆಸಲಾಗುತ್ತಿದೆ. ದೊಡ್ಡಪ್ಪನ ಜಮೀನನಲ್ಲಿ ಶವ ಸಿಕ್ಕಿರುವುದು ಹಲವು ಅನುಮಾಕ್ಕೆ ಕಾರಣವಾಗಿದೆ.

ಸಾಮಾಜಿಕ ತಾಲತಾಣಗಳಲ್ಲಿ ಹೇಮಲತಾ ಸಾವಿನ ಕುರಿತು ಹಲವಾರು ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ. ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಲಾಗುತ್ತಿದೆ.

English summary
Bengaluru rural SP Ravi D. Channannavar to lead the police team which probing Ramanagar 1 year Bcom student Hemalatha murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X