ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ; ಭಾರೀ ಮಳೆ, ಜೀವ ಕಳೆ ಪಡೆದ ಕಣ್ವ ನದಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ನವೆಂಬರ್ 16; ರಾಮನಗರ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರೇಷ್ಮೆ ನಗರಿ ಜಿಲ್ಲೆಯ ಬಹುತೇಕ ಕೆರೆಗಳು ಕೋಡಿ ಹರಿಯುತ್ತಿವೆ. ಮಳೆ ಪ್ರಮಾಣ ಹೆಚ್ಚಳ‌ವಾದ ಹಿನ್ನಲೆಯಲ್ಲಿ ಚನ್ನಪಟ್ಟಣ ತಾಲ್ಲೂಕಿನ ಜೀವನದಿ ಕಣ್ವದಲ್ಲಿ ಒಳಹರಿವು ಹೆಚ್ಚಳವಾಗಿದೆ.

ಚನ್ನಪಟ್ಟಣದ ಬಿ. ವಿ. ಹಳ್ಳಿ ಹೊಸ ಕೆರೆ ಮತ್ತು ಬಂಡೂರು ಕೆರೆ ಕೋಡಿ ಬಿದ್ದು ಹಳ್ಳ ಉಕ್ಕಿ‌ ಹರಿಯುತ್ತಿದ್ದು, ಹಳ್ಳದ ನೀರು ಕಣ್ವ ನದಿ ಸೇರುತ್ತಿದೆ. ಜೊತೆಗೆ ಕೋಡಂಬಳ್ಳಿ ಕೆರೆ, ಕೊಂಡಾಪುರ ಹೊಸಕೆರೆ, ಸೋಗಾಲ‌ ಕೆರೆ, ಹಾರೋಕೊಪ್ಪ ಕೆರೆ ಸೇರಿದಂತೆ ಹಲವು ಕೆರೆಗಳು ಕೋಡಿ ಹರಿಯುತ್ತಿವೆ. ಕೆರೆಗಳು ತುಂಬಿ ಹರಿದ ನೀರು ಕಣ್ವ ನದಿಗೆ ಸೇರುತ್ತಿರುವುದರಿಂದ ಅಂಬಾಡಹಳ್ಳಿ-ಎಲೆತೋಟದಹಳ್ಳಿ ರಸ್ತೆ ಸಂಪರ್ಕ ಕಡಿತ ಕಡಿತಗೊಂಡಿದೆ.

 ರಾಮನಗರ: ನಾಲ್ಕು ವರ್ಷಗಳ ಬಳಿಕ ನಲ್ಲಿಗುಡ್ಡೆ ಕೆರೆಯಲ್ಲಿ ಜಲಸಂಚಲನ ರಾಮನಗರ: ನಾಲ್ಕು ವರ್ಷಗಳ ಬಳಿಕ ನಲ್ಲಿಗುಡ್ಡೆ ಕೆರೆಯಲ್ಲಿ ಜಲಸಂಚಲನ

ಇದರಿಂದಾಗಿ ಈ ಭಾಗದ ಜನತೆ ಬಾಣಗಹಳ್ಳಿ-ಕೊಂಡಾಪುರ, ಹುಣಸನಹಳ್ಳಿ-ಕೋಡಂಬಳ್ಳಿ ರಸ್ತೆಯನ್ನು ಬಳಸಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅಂಬಾಡಹಳ್ಳಿ-ಎಲೆತೋಟದಹಳ್ಳಿ ಸಂಪರ್ಕ ರಸ್ತೆಗೆ ಕಣ್ವ ನದಿಗೆ ಅಡ್ಢಲಾಗಿ‌ ಕಿರು ಸೇತುವೆ ನಿರ್ಮಿಸಿಕೊಡಬೇಕೆಂದು ಗ್ರಾಮಸ್ಥರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ರಾಮನಗರ; ಮಳೆಯಿಂದ ಜೀವಕಳೆ ಪಡೆದ ಜಲಾಶಯ, ಕೆರೆ-ಕಟ್ಟೆ ರಾಮನಗರ; ಮಳೆಯಿಂದ ಜೀವಕಳೆ ಪಡೆದ ಜಲಾಶಯ, ಕೆರೆ-ಕಟ್ಟೆ

ಕೊಳವೆ ಬಾವಿಗಳಲ್ಲಿ ಉಕ್ಕುತ್ತಿರುವ ನೀರು

ಕೊಳವೆ ಬಾವಿಗಳಲ್ಲಿ ಉಕ್ಕುತ್ತಿರುವ ನೀರು

ಹಾರೋಕೊಪ್ಪ ಕೆರೆ ಕೋಡಿ ಹತ್ತಿರ ಇರುವ ಅಂಬಾಡಳ್ಳಿ ಗ್ರಾಮದ ಕುಡಿಯುವ ನೀರಿನ ಕೊಳವೆ ಬಾವಿಯಿಂದ ನೀರು ಸ್ವಯಂ ಪ್ರೇರಿತವಾಗಿ ಉಕ್ಕಿ ಹರಿಯುತ್ತಿದ್ದು, ಇದನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ. ಕಣ್ಣ-ಶಿಂಷಾ ಏತ ನೀರಾವರಿ, ಗರಕಳ್ಳಿ, ಸಾಮಂದಿಪುರ ಏತ ನೀರಾವರಿ ಮತ್ತು ಶಿಂಷಾ-ಕೋಡಂಬಳ್ಳಿ, ಸಿಂಗರಾಜಪುರ ಏತ ನೀರಾವರಿ ಮೂಲಕ ಹತ್ತಾರು ಕೆರೆಗಳಿಗೆ ನೀರು ತುಂಬಿಸಲಾಗುತ್ತಿತ್ತು.

ಕೊಳವೆ ಬಾವಿಗಳಿಗೆ ಜೀವ ಕಳೆ ಬಂದಿದೆ

ಕೊಳವೆ ಬಾವಿಗಳಿಗೆ ಜೀವ ಕಳೆ ಬಂದಿದೆ

ಈಗ ಬೀಳುತ್ತಿರುವ ಬಾರಿ ಮಳೆಯಿಂದಾಗಿ ಹಳ್ಳ-ಕೊಳ್ಳಗಳಲ್ಲಿ ನೀರು ಹರಿದು ಕೆರೆ ಕೋಡಿ ಹರಿಯುತ್ತಿವೆ. ಇದರಿಂದ ಕೆರೆ ಕೋಡಿಯಿಂದ ಹೊರ ಬಂದ ನೀರು ಕಣ್ವ ನದಿಗೆ ಹರಿಯುತ್ತಿದ್ದು, ನದಿಗೆ ಹತ್ತಾರು ವರ್ಷಗಳ ನಂತರ ಜೀವ ಕಳೆ ಬಂದಿದೆ. ಜೊತೆಗೆ ಈಗ ಬೀಳುತ್ತಿರುವ ಮಳೆಯಿಂದಾಗಿ ನರೇಗಾ ಯೋಜನೆಯಡಿ ನಿರ್ಮಿಸಿದ ಚನ್ನಪಟ್ಟಣ ತಾಲೂಕಿನ ನೂರಾರು ಚೆಕ್ ಡ್ಯಾಂಗಳು ತುಂಬಿಕೊಂಡು ನಳನಳಿಸುತ್ತಿವೆ. ಇನ್ನಷ್ಟು ಚೆಕ್ ಡ್ಯಾಂಗಳು ಕಳಪೆ ಕಾಮಗಾರಿಯಿಂದ ಹಾನಿಗೊಳಗಾಗಿವೆ.

ಮಳೆ ಅವಾಂತರದ ಪರಿಹಾರಕ್ಕೆ ರೈತರ ಆಗ್ರಹ

ಮಳೆ ಅವಾಂತರದ ಪರಿಹಾರಕ್ಕೆ ರೈತರ ಆಗ್ರಹ

ಬಂಡೂರು ಕೆರೆ ಮತ್ತು ಬಿ. ವಿ. ಹಳ್ಳಿ ಕೆರೆ ಕೋಡಿ ಬಿದ್ದಿರುವುದರಿಂದ ನೂರಾರು ಎಕರೆ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಷ್ಟವಾಗಿದೆ. ಅಲ್ಲದೇ ಸಾಕಷ್ಟು ಭೂ ಸವಕಳಿ ಉಂಟಾಗಿ ಲಕ್ಷಾಂತರ ರೂ ನಷ್ಟವಾಗಿದೆ. ಸೋಮವಾರ ರಾತ್ರಿ‌ ಸುರಿದ ಮಳೆಗೆ ವಿರೂಪಾಕ್ಷಿಪುರ ಹಾಗೂ ಬಿ. ವಿ. ಹಳ್ಳಿ ಕೆರೆ ತುಂಬಿ ಕೋಡಿ ಹೊಡೆದ ಪರಿಣಾಮ ಕೆ. ಜಿ. ಮಹಡಿ ಗ್ರಾಮದಲ್ಲಿ ಜಮೀನಿಗೆ ನೀರು ನುಗ್ಗಿ ರೈತರು‌ ಬೆಳೆದಿದ್ದ ರಾಗಿ, ತೆಂಗು, ಭತ್ತ, ಬಾಳೆ ಬೆಳೆ ಸಂಪೂರ್ಣ ನಾಶವಾಗಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗಿದೆ ರೈತರ ಪರಿಸ್ಥಿತಿ.

ಜಿಲ್ಲಾಡಳಿತದಿಂದ ಪರಿಹಾರಕ್ಕೆ ಆಗ್ರಹ

ಜಿಲ್ಲಾಡಳಿತದಿಂದ ಪರಿಹಾರಕ್ಕೆ ಆಗ್ರಹ

ಮನೆ ಮುಂದೆ ಹಾಕಿದ ತೆಂಗಿನಕಾಯಿ ಹಾಗೂ ಗೊಬ್ಬರದ ಮೂಟೆಗಳು ನೀರುಪಾಗಿವೆ. ಇನ್ನೂ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರೀಶಿಲನೆ ಮಾಡಿದರು. ರೈತರಿಗೆ ಸೂಕ್ತ ಪರಿಹಾರ ನೀಡುವ ಭರವಸೆವನ್ನು ನೀಡಿದ್ದಾರೆ. ರೈತರಿಗೆ ಮಳೆಯಿಂದ ಆಗಿರುವ ಆಗಿರುವ ನಷ್ಟಕ್ಕೆ ನೆರೆ ಪರಿಹಾರ ಯೋಜನೆಯಡಿ ತಾಲೂಕು ಮತ್ತು ಜಿಲ್ಲಾಡಳಿತ ನೈಜ ಸ್ಥಿತಿ ಅನುಸರಿಸಿ ಸೂಕ್ತ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.

ಮಳೆಯಿಂದ ಕೆರೆಯಂತಾದ ಹೆದ್ದಾರಿ

ಮಳೆಯಿಂದ ಕೆರೆಯಂತಾದ ಹೆದ್ದಾರಿ

ಮಂಗಳವಾರ ಮಧ್ಯಾಹ್ನ ಸುರಿದ ಸತತ ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿ ಕೆರೆಯಂತಾಗಿ ದ್ವಿಚಕ್ರ ವಾಹನ ಸಂಚಾರರ ಪರದಾಟ ನಡೆಸಿದರು. ಸತತ 2 ಗಂಟೆಗಳ ಕಾಲ ಸುರಿದ ಮಳೆಯಿಂದಾಗಿ ಅವಾಂತರ‌ ಸೃಷ್ಟಿಯಾಗಿತ್ತು.ರಾಷ್ಟ್ರೀಯ ಹೆದ್ದಾರಿ 275ರ ಬೆಂಗಳೂರು-ಮೈಸೂರು ಹೆದ್ದಾರಿಯ ಜಾನಪದ ಲೋಕದ ಮುಂಭಾಗದಲ್ಲಿ ಹೆದ್ದಾರಿಯಲ್ಲಿ ನೀರು ತುಂಬಿ ವಾಹನ ಸವಾರರು ವಾಹನ ಚಲಾಯಿಸುವ ವೇಳೆ ಹೈರಾಣದಾರು.

Recommended Video

Bangalore Weather Forecast - ಇನ್ನೂ ಮೂರು ದಿನ ಮಳೆ | Oneindia Kannada

English summary
Due to heavy rain in Ramanagara district. Inflow to Kanva river increased. Crop damaged due to rain water.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X