ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ತಿಗಾಗಿ ಅಪ್ಪನನ್ನೇ ಮನೆಯಿಂದ ಹೊರ ಹಾಕಿದ ಸುಪುತ್ರ !

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜು. 08: ನಿನಗೆ ಇರುವ ಎಲ್ಲಾ ಆಸ್ತಿ ನನ್ನ ಹೆಸರಿಗೆ ಬರೆದುಕೊಡು ಎಂದು ಹೆದರಿಸಿ ಜಗಳ ಮಾಡುತ್ತಾನೆ. ಕಳೆದ 20 ವರ್ಷದಿಂದ ಗಂಡ ಹೆಂಡತಿಯನ್ನು ದೂರ ಮಾಡಿದ್ದಾನೆ. ನಾನು ಸಾಯುವ ವರೆಗೂ ನನ್ನ ಆಸ್ತಿಯನ್ನು ಯಾರಿಗೂ ಭಾಗ ಮಾಡಿಕೊಡುವುದಿಲ್ಲ. ಅವನಿಗೆ ಆಸ್ತಿಯೇ ಮುಖ್ಯ ಎನ್ನುವುದಾದರೆ ನನ್ನ ಸಾಯಿಸಿಬಿಡಲಿ !

ಆಸ್ತಿ ವ್ಯಾಮೋಹದಿಂದ ಜನ್ಮ ಕೊಟ್ಟ ತಂದೆಯನ್ನೇ ಮನೆಯಿಂದ ಹೊರ ಹಾಕಿ ವಿಕೃತಿ ಮೆರೆದಿದ್ದಾನೆ. ತನ್ನ ಮನೆಯಿಂದಲೇ ಹೊರ ಬಿದ್ದಿರುವ ವೃದ್ಧ ತಂದೆಯ ಮನದಾಳದ ನೋವಿನ ಮಾತುಗಳಿವು. ರಾಮನಗರ ಜಿಲ್ಲೆಯ ಸಿಂಗ್ರಿಭೋವಿದೊಡ್ಡಿ ಗ್ರಾಮದಲ್ಲಿ ತಿಮ್ಮಯ್ಯ ಎಂಬುವರ ಕಣ್ಣೀರ ಕಥೆ. ಆಸ್ತಿಯನ್ನು ಬರೆದುಕೊಟ್ಟಿಲ್ಲ ಎಂಬ ಕಾರಣಕ್ಕೆ ಜನ್ಮ ಕೊಟ್ಟ ತಂದೆಯನ್ನು ಸುಪುತ್ರನೊಬ್ಬ ಮನೆಯಿಂದ ಹೊರ ಹಾಕಿದ್ದಾನೆ. ಕೆಎಸ್ಆರ್ ಟಿ ಬಸ್ ಚಾಲಕನಾಗಿರುವ ಕುಮಾರ್ ತನ್ನ ತಂದೆಯನ್ನು ಮನೆಯಿಂದ ಹೊರಗೆ ಹಾಕಿ ವಿಕೃತಿ ಮೆರೆದಿದ್ದಾನೆ. . ಪ್ರತಿ ನಿತ್ಯ ಮದ್ಯ ಸೇವನೆ ಮಾಡಿಕೊಂಡು ಬರುವ ಕುಮಾರ್ ಆಸ್ತಿಗಾಗಿ ದಿನವೂ ತಂದೆಯ ಬಳಿ ಜಗಳ ಮಾಡಿದ್ದಾನೆ. ಇದೇ ವಿಚಾರವಾಗಿ ಬುಧವಾರವೂ ಜಗಳ ನಡೆದಿದ್ದು, ಮನೆಯಿಂದ ಹೊರ ಹಾಕಿದ್ದಾನೆ.

ಇರುವ ಆಸ್ತಿ ನನಗೆ ಬರೆದುಕೊಡು ಎಂದು ಕುಮಾರ್ ತನ್ನ ತಂದೆ ತಿಮ್ಮಯ್ಯನ ಮೇಲೆ ಪದೇ ಪದೇ ಜಗಳ ಮಾಡಿದ್ದಾನೆ. ನೀನು ಆಸ್ತಿ ಬರೆದುಕೊಟ್ಟಿಲ್ಲ ಎಂದರೆ ಮನೆಯಲ್ಲಿ ಇರಬೇಡ ಎಂದು ತಂದೆ ತಿಮ್ಮಯ್ಯನನ್ನು ಹೊರ ಹಾಕಿದ್ದಾನೆ. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ತಿಮ್ಮಯ್ಯ, ಪದೇ ಪದೇ ನನ್ನ ಮೇಲೆ ಜಗಳ ಮಾಡುತ್ತಾನೆ. ಕಳೆದ 20 ವರ್ಷಗಳಿಂದಲೂ ಗಂಡ ಹೆಂಡತಿಯನ್ನ ದೂರ ಮಾಡಿದ್ದಾರೆ. ನಾನು ಸಾಯುವವರೆಗೂ ನನ್ನ ಆಸ್ತಿಯನ್ನು ಭಾಗ ಮಾಡುವುದಿಲ್ಲ ಎಂದು ತಿಮ್ಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಹಲವು ತಿಂಗಳಿನಿಂದ ಮನೆಯಲ್ಲಿ ಆಸ್ತಿ ವಿಚಾರವಾಗಿ ಜಗಳವಾಗುತ್ತಿದೆ. ತಿಮ್ಮಯ್ಯ ಅವರು ಮೂರು ಜನ ಮಕ್ಕಳು ಬೇರೆ ಬೇರೆ ಮನೆಗಳಲ್ಲಿ ವಾಸ ಮಾಡಿಕೊಂಡಿದ್ದಾರೆ. ತಾನು ಕಷ್ಟಪಟ್ಟು ಕಟ್ಟಿರುವ ಮನೆಯಲ್ಲೇ ಒಬ್ಬೊಂಟಿಯಾಗಿ ಜೀವನ ನಡೆಸುತ್ತಿದ್ದ ತಿಮ್ಮುಯ್ಯನಿಗೆ ಮಗ ಕುಮಾರ್ ಮಾತ್ರ ನಿತ್ಯ ಕಿರುಕುಳ ನೀಡಿ ಇದೀಗ ಬೀದಿಪಾಲು ಮಾಡಿದ್ದಾನೆ.

Heart Breaking Story Of Old age person, who lost shelter in own house !

Recommended Video

Amavasya ದಿನ ಮಗು ಹುಟ್ಟಿದರೆ ಶುಭವಾಗುತ್ತಾ ಅಥವಾ ಅಶುಭದ ಸೂಚನೆಯಾ?? | Oneindia Kannada

ಮನೆಯಿಂದ ತಂದೆಯನ್ನು ಹೊರ ಹಾಕಿರುವುದನ್ನು ಕುಮಾರ ಪತ್ನಿ ಸಮರ್ಥಿಸಿಕೊಂಡಿದ್ದಾರೆ. ನನ್ನ ಮಾವ ನನಗೆ ಬಾಯಿಗೆ ಬಂದ ಹಾಗೇ ಮಾತನಾಡುತ್ತಾರೆ. ಸೊಸೆ ಎಂದು ಕಾಣದೇ ಅವಾಚ್ಯ ಪದಗಳಿಂದ ನಿಂದಿಸುತ್ತಾರೆ. ಇದೇ ವಿಚಾರಕ್ಕೆ ನಿನ್ನೆ ಜಗಳವಾಗಿತ್ತು. ಮಾವ ಮಾತನಾಡಿದ ಮಾತುಗಳನ್ನ ಗಂಡನಿಗೆ ಹೇಳಿದೆ. ಇದರಿಂದ ಕೋಪ ಗೊಂಡ ನನ್ನ ಪತಿ ತನ್ನ ತಂದೆಗೆ ಹೊಡೆದಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ವೃದ್ದಾಪ್ಯದಲ್ಲಿ ಮಕ್ಕಳು ಅಪ್ಪ ಅಮ್ಮನಿಗೆ ಆಶ್ರಯವಾಗಬೇಕಾದ ಸಮಯದಲ್ಲಿ ತಂದೆಯನ್ನೇ ಆಸ್ತಿಗೋಸ್ಕರ ಮನೆಯಿಂದ ಹೋರ ಹಾಕುವ ಪ್ರಯತ್ನ ಮಾಡಿರುವುದು ನಿಜಕ್ಕೂ ವಿಪರ್ಯಾಸ. ಮಾಧ್ಯಮಗಳ ಮೂಲಕ ಘಟನೆಯನ್ನು ಗಮನಿಸಿದ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

English summary
Ramanagara police have filed a Sumo to case against a son who had expelled his father from his home after he refused to give the property.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X