ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಪಿ ಯೋಗೇಶ್ವರ್‌ಗೆ ಕುಮಾರಸ್ವಾಮಿ ಕೊಟ್ಟ ಸಲಹೆ ಏನು?

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 22; "ಈ ಹಿಂದೆ ಏತ ನೀರಾವರಿ ಯೋಜನೆಯಲ್ಲಿ ಹಣ ಗೋಲ್ ಮಾಲ್ ಮಾಡಿದ್ದಾರೆ. ಕಳಪೆ ಪೈಪ್ ಹಾಕಿ ಹಣ ಮಾಡಿ ಇದೀಗ ಅದರ ಹೊಣೆಯನ್ನು ನನ್ನ ಮೇಲೆ ಹಾಕಿದ್ದಾರೆ. ಈ ಕೆಲಸವನ್ನು ರಾಜ್ಯದಲ್ಲಿ ಮಾಡಬೇಡಿ. ಒಳ್ಳೆ ರೀತಿ ಕೆಲಸ ಮಾಡಿ ಕ್ಷೇತ್ರದ ಹೆಸರು ಉಳಿಸಿಕೊಳ್ಳಿ" ಎಂದು ಚನ್ನಪಟ್ಟಣ ಶಾಸಕ ಎಚ್. ಡಿ. ಕುಮಾರಸ್ವಾಮಿ ಸಚಿವ ಸಿ. ಪಿ. ಯೋಗೇಶ್ವರ್‌ಗೆ ಸಲಹೆ ನೀಡಿದರು.

ಶುಕ್ರವಾರ ಚನ್ನಪಟ್ಟಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಭವನದ ಉದ್ಘಾಟನೆ ನಡೆಯಿತು. ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಸಚಿವ ಯೋಗೇಶ್ವರ್ ಬೆಂಬಲಿಗರು ಈಗ ಉದ್ಘಾಟನೆ ಬೇಡ ಎಂದು ಕಾರ್ಯಕ್ರಮದ ಬಗ್ಗೆ‌ ಅಪಸ್ವರ ಎತ್ತಿದ್ದರು.

ಅಂಬೇಡ್ಕರ್ ಭವನ ಉದ್ಘಾಟನೆ; ಮಾಜಿ ಸಿಎಂ V/S ಹಾಲಿ ಸಚಿವರ ಪ್ರತಿಷ್ಠೆ! ಅಂಬೇಡ್ಕರ್ ಭವನ ಉದ್ಘಾಟನೆ; ಮಾಜಿ ಸಿಎಂ V/S ಹಾಲಿ ಸಚಿವರ ಪ್ರತಿಷ್ಠೆ!

ಎಚ್. ಡಿ. ಕುಮಾರಸ್ವಾಮಿ ಅವರು ಮಾತನಾಡಿ, "ಸಚಿವರು ರಾಜ್ಯಕ್ಕೆ ಸಚಿವರಷ್ಟೇ ಅವರು ಚನ್ನಪಟ್ಟಣದ ಒಂದು ಅಂಗ ಅಷ್ಟೆ. ಚನ್ನಪಟ್ಟಣದಲ್ಲಿ ಶಾಸಕನಾಗಿ ಹೆಚ್ಚಿನ ಅಧಿಕಾರ ನನಗಿದೆ. ಲಘುವಾಗಿ ಮಾತನಾಡುವುದನ್ನು ಅವರು ಬಿಡಬೇಕು" ಎಂದರು.

ಕುಮಾರಸ್ವಾಮಿ V/S ಯೋಗೇಶ್ವರ ಮಾತಿನ ಮಲ್ಲಯುದ್ಧ! ಕುಮಾರಸ್ವಾಮಿ V/S ಯೋಗೇಶ್ವರ ಮಾತಿನ ಮಲ್ಲಯುದ್ಧ!

HD Kumaraswamy Suggestion To Minister CP Yogeshwar

"ಇತರ ಮಾತನಾಡಿದರೆ ನನ್ನ ಮೇಲೆ ಅಭಿಮಾನ ಇರುವ ಜನರು ಇನ್ನಷ್ಟು ಬಿಗಿ ಆಗುತ್ತಾರೆ. ನಿಮ್ಮ ಇಲಾಖೆಯನ್ನು ಸರಿಯಾಗಿ ನಡೆಸುವುದನ್ನು ಕಲಿತುಕೊಳ್ಳಿ, ಗುಣತ್ಮಕವಾಗಿ ಕೆಲಸ ಮಾಡಿ" ಎಂದು ಸಿ. ಪಿ. ಯೋಗೇಶ್ವರ್‌ಗೆ ಸಲಹೆ ನೀಡಿದರು.

ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿ.ಪಿ ಯೋಗೇಶ್ವರ್ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿ.ಪಿ ಯೋಗೇಶ್ವರ್

ವೇದಿಕೆ ಕಾರ್ಯಕ್ರಮ; ಅಂಬೇಡ್ಕರ್ ಭವನದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, "15 ವರ್ಷಗಳ ನಂತರ ಈ‌ ಭವನ ಉದ್ಘಾಟನೆ ಕಂಡಿದೆ. ಶಾಸಕರು, ಸಂಸದರು, ಸಮಾಜ ಕಲ್ಯಾಣ ಇಲಾಖೆ ಅನುದಾನ ಬಳಸಿಕೊಳ್ಳಲಾಗಿದೆ" ಎಂದರು.

"ಈ ಭವನವನ್ನು ರಾಜಕೀಯವಾಗಿ ಬಳಸಿಕೊಳ್ಳುವುದಿಲ್ಲ. ನಾನು ಕ್ಷೇತ್ರದ ಶಾಸಕನಾದ ಮೇಲೆ ಭವನ ಉದ್ಘಾಟನೆ ಮಾಡಲು ಶ್ರಮ ವಹಿಸಿದ್ದೇನೆ. ಚುನಾವಣೆ ನಂತರ ರಾಜಕೀಯ ಮುಖ್ಯವಲ್ಲ. ಕ್ಷೇತ್ರದ ಮತದಾರರ ಅಭಿವೃದ್ಧಿ ಮುಖ್ಯ. ಬಿಜೆಪಿ ಸರ್ಕಾರದ ಕೆಲ ಸಚಿವರ ಜೊತೆ ನಾನು ಉತ್ತಮ ಬಾಂಧವ್ಯ ಹೊಂದಿದ್ದೇನೆ" ಎಂದು ಹೇಳಿದರು.

Recommended Video

ಶಿವಮೊಗ್ಗದಲ್ಲಿ ನಡೆದ ದುರಂತಕ್ಕೆ ಕಾರಣರಾದವರ ಮೇಲೆ ಕಠಿಣ ಕ್ರಮ ಶತಸಿದ್ಧ- ಸಚಿವ Sriramulu | Oneindia Kannada

"ನಾನು ಯಾವ ಗುತ್ತಿಗೆದಾರರ ಬಳಿ‌ ಕಮಿಷನ್ ಹಣ ಕೇಳಿಲ್ಲ. ಗುಣಮಟ್ಟದ ಕೆಲಸವಾಗಬೇಕು ಅಷ್ಟೆ. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಿಮ್ಮ ಜೊತೆ ನಾನು ಇರುತ್ತೇನೆ. ಚುನಾವಣೆ ಬಂದಾಗ ಮಾತ್ರ ರಾಜಕೀಯ ಮಾಡೋಣ. ಶ್ರೀರಾಮುಲು ಅವರು ಈ ಕಾರ್ಯಕ್ರಮಕ್ಕೆ ಬರುವುದಕ್ಕೂ ಒತ್ತಡ ಇತ್ತು" ಎಂದು ಕುಮಾರಸ್ವಾಮಿ ತಿಳಿಸಿದರು.

English summary
Verbal war continue between minister C. P. Yogeshwar and Chennapatna MLA H. D. Kumaraswamy. Here are the suggestion to C. P. Yogeshwar by Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X