ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರಕ್ಕೆ ದೇವೇಗೌಡ್ರ ಕುಟುಂಬದ ಕೊಡುಗೆ ಶೂನ್ಯ: ಡಿ.ಕೆ.ಸುರೇಶ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ.5 : ಎಚ್.ಡಿ.ಕುಮಾರಸ್ವಾಮಿ ಒರ್ವ ಸ್ವಯಂ ಘೋಷಿತ ಮುಖ್ಯಮಂತ್ರಿ. ಅವರು ತಮ್ಮ ಅಧಿಕಾರವಧಿಯಲ್ಲಿ ರಾಮನಗರ ಜಿಲ್ಲೆಯ ನೀರಾವರಿ ಮತ್ತು ಕ್ಷೇತ್ರದ ಅಭಿವೃದ್ಧಿ ಮಾಡಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಅರೋಪಿಸಿದರು.

ರಾಮನಗರ ಜಿಲ್ಲೆಯ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ‌.ಬಾಲಕೃಷ್ಣ ಪರವಾಗಿ ಅಬ್ಬರದ ಪ್ರಚಾರ‌ ನಡೆಸಿ ಮಾತನಾಡಿದ ಅವರು ಕೂಟಗಲ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದರು.

ಟಾರೋ ಕಾರ್ಡ್ ಭವಿಷ್ಯ: ಮಾಗಡಿ ಲಡಾಯಿಯಲ್ಲಿ ಗೆಲುವು ಯಾರಿಗೆ?ಟಾರೋ ಕಾರ್ಡ್ ಭವಿಷ್ಯ: ಮಾಗಡಿ ಲಡಾಯಿಯಲ್ಲಿ ಗೆಲುವು ಯಾರಿಗೆ?

ಕುಮಾರಸ್ವಾಮಿ ಸಿಎಂ ಆಗಿದ್ದಾಗ ಜಿಲ್ಲೆಯ ನೀರಾವರಿ ಯೋಜನೆ ಬಗ್ಗೆ ಚರ್ಚೆ ಮಾಡಿಲ್ಲ. ರಾಮನಗರ ಕ್ಷೇತ್ರದ ಅಭಿವೃದ್ದಿ ವಿಚಾರವಾಗಿ ಒಂದೇ ಒಂದು ಸಭೆ ನಡೆಸಿಲ್ಲ. ಈ ಜಿಲ್ಲೆ ಕುಮಾರಸ್ವಾಮಿಯವರನ್ನು ಸಿಎಂ ಮಾಡಿದೆ. ಅವರ ತಂದೆ ದೇವೇಗೌಡರನ್ನ ಪ್ರಧಾನಿ ಮಾಡಿದೆ. ಆದರೆ ಜಿಲ್ಲೆಗೆ ಅವರ ಕುಟುಂಬದ ಕೊಡುಗೆ ಶೂನ್ಯ ಎಂದು ಸುರೇಶ್ ಆರೋಪಿಸಿದರು.

HD Kumaraswamy is a self proclaimed chief minister

ಅಪ್ಪ ಮಕ್ಕಳ‌ ಶೂನ್ಯ ಸಾಧನೆಗಾಗಿ ಈ ಬಾರಿ ಅವರನ್ನ, ಅವರ ಪಕ್ಷವನ್ನ ತಿರಸ್ಕರಿಸಿ ಮಾಗಡಿ ಕ್ಷೇತ್ರದಲ್ಲಿ ಎಚ್.ಸಿ.ಬಾಲಕೃಷ್ಣ ಅವರನ್ನು ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಸಚಿವ ರೇವಣ್ಣ ಅವರನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ನನ್ನ ಎದುರಾಳಿ ಜೆಡಿಎಸ್ ಪಕ್ಷ, ಅದನ್ನು ಸೋಲಿಸುವುದೇ ಗುರಿ: ಬಾಲಕೃಷ್ಣನನ್ನ ಎದುರಾಳಿ ಜೆಡಿಎಸ್ ಪಕ್ಷ, ಅದನ್ನು ಸೋಲಿಸುವುದೇ ಗುರಿ: ಬಾಲಕೃಷ್ಣ

ಜಿಲ್ಲೆಯಲ್ಲಿ ಎಚ್ ಡಿಕೆಮತ್ತು ಡಿಕೆಶಿ ಇಬ್ಬರು ರಾಜಕೀಯ ಒಳ ಒಪ್ಪಂದ ಮಾಡಿಕೊಂಡಿದ್ದಾರೆಂಬ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್, ಯೋಗೇಶ್ವರ್ ಸೋಲಿನ ಹತಾಶೆಯಿಂದ ಮಾತಾಡಿದ್ದಾರೆ. ನಾವು ಯಾವತ್ತು ರಾಜಕೀಯ ಒಪ್ಪಂದ ಮಾಡಿಕೊಂಡಿಲ್ಲ. ಮುಂದೆಯೂ ಮಾಡಿಕೊಳ್ಳುವುದಿಲ್ಲ ಅದೆಲ್ಲ ಸಿಪಿವೈ ಭ್ರಮೆ ಎಂದು ಟೀಕಿಸಿದರು.

HD Kumaraswamy is a self proclaimed chief minister

ಚನ್ನಪಟ್ಟಣದಲ್ಲಿ ಈ ಬಾರಿ ಎಚ್.ಎಂ.ರೇವಣ್ಣ ಗೆದ್ದು ಮತ್ತೆ ಮಂತ್ರಿಯಾಗ್ತಾರೆ ಎಂದು ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಎಚ್.ಸಿ.ಬಾಲಕೃಷ್ಣ ಬಳಿಯಿದೆಯಂತೆ ನಿಖಿಲ್ ಗೌಡರ ಕ್ಯಾಸೆಟ್!ಎಚ್.ಸಿ.ಬಾಲಕೃಷ್ಣ ಬಳಿಯಿದೆಯಂತೆ ನಿಖಿಲ್ ಗೌಡರ ಕ್ಯಾಸೆಟ್!

ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಚುನಾವಣೆ ಮುಗಿಯುವವರೆಗೂ ಯಾವುದೇ ಹೆಳಕೆ ನೀಡುವುದಿಲ್ಲ. ಚುನಾವಣೆ ಮಗಿದ ನಂತರ ಅದಕ್ಕೆ ಉತ್ತರ ನೀಡುತ್ತೆನೆ. ಈಗ ಅದರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ. ಅವರು ಫಿಲ್ಮ್ ಆಕ್ಟರ್ ಫಿಲ್ಮ ಡೈಲಾಗ್ ಹೊಡೆದು ಹೋಗಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸಿದರು.

English summary
Karnataka assembly elections 2018: MP DK suresh did campaign for Magadi assembly constituency congress candidate HC Balakrishna. After that he speaking about HD Kumaraswamy. He is a self proclaimed chief minister. In kumaraswamy government Ramanagara Irrigation field have not been developed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X