ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್; ರಾಮನಗರಕ್ಕೆ 2 ಅಂಬ್ಯುಲೆನ್ಸ್ ಕೊಟ್ಟ ಎಚ್‌ಡಿಕೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ 25; ರಾಮನಗರ ಜಿಲ್ಲೆಯಲ್ಲಿ ಅಂಬ್ಯುಲೆನ್ಸ್ ಕೊರತೆ ಗಮನಿಸಿದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಜಿಲ್ಲಾ ಆರೋಗ್ಯ ಇಲಾಖೆಗೆ ಎರಡು ಅಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ.

Recommended Video

ರಾಮನಗರಕ್ಕೆ ನೇರವಾದ HDK ಕುಟುಂಬ! | Nikhil Kumaraswamy | Oneindia Kannada

ಮಂಗಳವಾರ ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿ ಅವರಣದಲ್ಲಿ ಎರಡು ಅಂಬ್ಯುಲೆನ್ಸ್‌ಗಳ ಕೀಯನ್ನು ಎಚ್. ಡಿ. ಕುಮಾರಸ್ವಾಮಿ ಪುತ್ರ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್‌ಗೆ ಹಸ್ತಾಂತರ ಮಾಡಿದರು.

ರಾಮನಗರ: ಸ್ವಂತ ಹಣದಲ್ಲಿ ಆಕ್ಸಿಜನ್ ಪೈಪ್‌ಲೈನ್ ಅಳವಡಿಸಿದ ಸರ್ಕಾರಿ ವೈದ್ಯರಾಮನಗರ: ಸ್ವಂತ ಹಣದಲ್ಲಿ ಆಕ್ಸಿಜನ್ ಪೈಪ್‌ಲೈನ್ ಅಳವಡಿಸಿದ ಸರ್ಕಾರಿ ವೈದ್ಯ

ಈ ಸಂದರ್ಭ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, "ಕೊರೊನಾ ಪೀಡಿತರ ಅನುಕೂಲಕ್ಕೆ ಸ್ವಂತ ಹಣದಿಂದ 2 ಅಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ್ದು ಸಾರ್ವಜನಿಕ ಸೇವೆಗೆ ಎರಡು ಜೀವ ರಕ್ಷಕ ವಾಹನ ಲಭ್ಯವಿರಲಿದೆ" ಎಂದು ಹೇಳಿದರು.

ರಾಮನಗರ; ಜಿಲ್ಲಾ ಆಸ್ಪತ್ರೆಗೆ 10 ದಿನದಲ್ಲಿ ಆಕ್ಸಿಜನ್ ಟ್ಯಾಂಕ್ ರಾಮನಗರ; ಜಿಲ್ಲಾ ಆಸ್ಪತ್ರೆಗೆ 10 ದಿನದಲ್ಲಿ ಆಕ್ಸಿಜನ್ ಟ್ಯಾಂಕ್

HD Kumaraswamy Donates Ambulances To Ramanagara

"ಎರಡು ಅಂಬ್ಯುಲೆನ್ಸ್ ಸಂಪೂರ್ಣ ಖರ್ಚು, ವೆಚ್ಚವನ್ನು ಭರಿಸಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಕೋವಿಡ್ ಎರಡನೇ ಅಲೆಯಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಜಿಲ್ಲೆಯಲ್ಲಿಯೂ ಸಹ ಹಲವಾರು ಜನ ಸಾವನ್ನಪ್ಪಿದ್ದಾರೆ" ಎಂದರು.

ರಾಮನಗರ; ಕೋವಿಡ್ ಸೋಂಕಿತರ ಚಿಕಿತ್ಸೆಗೆ 600 ಹಾಸಿಗೆ ಮೀಸಲು ರಾಮನಗರ; ಕೋವಿಡ್ ಸೋಂಕಿತರ ಚಿಕಿತ್ಸೆಗೆ 600 ಹಾಸಿಗೆ ಮೀಸಲು

"ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಅಂಬ್ಯುಲೆನ್ಸ್ ಇಲ್ಲದೇ ತೊಂದರೆ ಪಡುತ್ತಿದ್ದರು. ಆದ್ದರಿಂದ ಎಚ್. ಡಿ. ಕುಮಾರಸ್ವಾಮಿ ಜನರ ಅನುಕೂಲಕ್ಕಾಗಿ ಅಂಬ್ಯುಲೆನ್ಸ್‌ಗಳನ್ನು ನೀಡಿದ್ದಾರೆ" ಎಂದು ತಿಳಿಸಿದರು.

English summary
Former CM and Chennapatna JD(S) MLA H. D. Kumaraswamy donated two ambulances to Ramanagara district health department to fight against Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X