• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐಎಂಎ ಹಗರಣ; ಎಚ್. ಡಿ. ಕುಮಾರಸ್ವಾಮಿ ಸ್ಪಷ್ಟನೆ

By ರಾಮನಗರ ಪ್ರತಿನಿಧಿ
|

ರಾಮನಗರ, ಫೆಬ್ರವರಿ 21; " ಐಎಂಎ ಹಗರಣದಲ್ಲಿ ನನ್ನ ಪಾತ್ರ ಇಲ್ಲ. ನಾನು ಸಿಎಂ ಆಗಿದ್ದ ಅವಧಿಯಲ್ಲಿ ಈ ಹಗರಣ ಹೊರ ಬಂದಿತ್ತು. ಸಿಸಿಬಿಗೆ ಈ ಹಗರಣದ ತನಿಖೆ ನಡೆಸುವಂತೆ ನಾನೇ ಆದೇಶ ಮಾಡಿದ್ದೆ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ರಾಮನಗರದಲ್ಲಿ ಭಾನುವಾರ ಮಾತನಾಡಿದ ಅವರು, 'ಹಗರಣದ ತನಿಖೆಗೆ ಆದೇಶ ನೀಡಿದಾಗಲೇ ಆತ ದೇಶ ಬಿಟ್ಟು ದುಬೈಗೆ ಪರಾರಿಯಾಗಿದ್ದ. ನಮ್ಮ ಅಧಿಕಾರಿಗಳು ಹಗರಣದ ಆರೋಪಿಯನ್ನ ಬಂಧಿಸಿ ಕರೆತಂದಿದ್ದರು" ಎಂದರು.

ಐಎಂಎ ವಂಚನೆ : ಹಾಕಿದ್ದು ಇಷ್ಟು! ಬರೋದು ಎಷ್ಟು? ನೀವೇ ಲೆಕ್ಕ ಹಾಕಿಐಎಂಎ ವಂಚನೆ : ಹಾಕಿದ್ದು ಇಷ್ಟು! ಬರೋದು ಎಷ್ಟು? ನೀವೇ ಲೆಕ್ಕ ಹಾಕಿ

"ವಿಚಾರಣೆ ವೇಳೆ ಕುಮಾರಸ್ವಾಮಿ ಅವರಿಗೆ ಸೇರಬೇಕು ಅಂತಾ ಹಣ ಸಂಗ್ರಹಣೆ ಮಾಡಿದ್ದರಂತೆ. ಆ ಹಣ ಕುಮಾರಸ್ವಾಮಿಗೆ ಸೇರಿಲ್ಲಾ ಎಂಬ ಚರ್ಚೆ ನಡೆಯುತ್ತಿದೆ. ಯಾರ ಮೇಲೆ ಬೇಕಾದರೂ ಕ್ರಮ ಕೈಗೊಳ್ಳಲಿ ಜನರ ಹಣವನ್ನು ಲೂಟಿ ಮಾಡಿದವರಿಗೆ ಈ ಕ್ಷಣದ ತನಕ ನಾನು ರಕ್ಷಣೆ ಕೊಟ್ಟವನಲ್ಲ" ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಜನರಿಗೆ ಐಎಂಎ ಠೇವಣಿ ಯಾವಾಗ ವಾಪಸ್ ಕೊಡ್ತೀರಿ?: ಹೈಕೋರ್ಟ್ ಜನರಿಗೆ ಐಎಂಎ ಠೇವಣಿ ಯಾವಾಗ ವಾಪಸ್ ಕೊಡ್ತೀರಿ?: ಹೈಕೋರ್ಟ್

"ರೋಷನ್‌ ಬೇಗ್ ಒಂದು ಬಾರಿ ಸಂಜೆ ವೇಳೆಗೆ ಕೃಷ್ಣ ಕಚೇರಿಯಲ್ಲಿದ್ದಾಗ ಒಂದು ಇಫ್ತಿಯಾರ್ ಕೂಟ ಇದೆ ಬರಬೇಕೆಂದು ಹಠ ಹಿಡಿದಿದ್ದರು. ಕಚೇರಿಯಿಂದ ನಾನು ಅಲ್ಲಿಗೆ ಹೋಗಿದ್ದೆ. ಆ ವೇಳೆಗೆ ಅಲ್ಲಿ ಇಬ್ಬರು ವ್ಯಕ್ತಿಗಳು ಇದ್ದರು. ಅವರು ಯಾರು? ಅಂತಾ ನನಗೆ ಗೊತ್ತಿರಲಿಲ್ಲ" ಎಂದು ಕುಮಾರಸ್ವಾಮಿ ತಿಳಿಸಿದರು.

ಐಎಂಎ ಪ್ರಕರಣದಲ್ಲಿ ನಿಂಬಾಳ್ಕರ್ ವಿರುದ್ಧ ಯಾಕೆ ಶಿಸ್ತು ಕ್ರಮವಿಲ್ಲ ?ಐಎಂಎ ಪ್ರಕರಣದಲ್ಲಿ ನಿಂಬಾಳ್ಕರ್ ವಿರುದ್ಧ ಯಾಕೆ ಶಿಸ್ತು ಕ್ರಮವಿಲ್ಲ ?

"ರೋಷನ್‌ ಬೇಗ್ ಅವರು ಇವರು ಮಹಾನ್ ದಾನಿಗಳು ಶಿಕ್ಷಣ ಸಂಸ್ಥೆಗಳಿಗೆ ಇವರಿಂದ ಧಾನ ಧರ್ಮ ಮಾಡಿದ್ದಾರೆ ಅಂತಾ ಹೇಳಿದ್ದರು. ಅಲ್ಲಿಯ ವರೆಗೆ ಆತಾ ಯಾರು? ಅಂತಾನೆ ಗೊತ್ತಿರಲಿಲ್ಲ. ನಾನೇ ತನಿಖೆಗೆ ಆದೇಶ ಮಾಡಿದ ಮೇಲೆ ನನ್ನ ಪಾತ್ರ ಎಲ್ಲಿ ಇರುತ್ತದೆ?" ಎಂದು ಪ್ರಶ್ನಿಸಿದರು.

ಮೀಸಲಾತಿ; ಒಕ್ಕಲಿಗರಿಗೆ ಮೀಸಲಾತಿ ಬೇಕು ಎಂಬ ನಡೆಯುತ್ತಿರುವ ಚರ್ಚೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಮೀಸಲಾತಿ ಹೋರಾಟ ಬಂದಾಗ ಮಾತನಾಡೋಣ. ಇದು ಎಲ್ಲೊ ಒಂದು ಕಡೆ ದಾರಿ ತಪ್ಪಿ ಹೋಗುತ್ತಿರುವ ಸನ್ನಿವೇಶಗಳು. ಇಂತಹ ವಿಷಯಗಳ ಮುಖಾಂತರ ರಾಜಕೀಯ ದುರ್ಬಳಕೆ ಮಾಡಿಕೊಳ್ಳೊದು ಇಲ್ಲಾ, ರಾಜಕೀಯವಾಗಿ ಸ್ಥಾನಮಾನ ಪಡೆಯಲು ಒಂದು ವರ್ಗ ಹೊರಟಿದೆ" ಎಂದರು.

"ಇಂತಹ ಹೋರಾಟದಲ್ಲಿ ಭಾಗಿಯಾಗವನು ನಾನಲ್ಲ. ಇಂತಹ ವಿಷಯಗಳನ್ನು ಸಮಾಜದಲ್ಲಿ ಇಕ್ಕಟ್ಟಿಗೆ ಸಿಲುಕಿಸಿ ಸಂಘರ್ಷ ಉಂಟು ಮಾಡಲು ಹೋಗುವವನು ನಾನಲ್ಲ. ಆ ಸಮಯ ಬಂದಾಗ ಚರ್ಚೆ ಮಾಡೋಣ" ಎಂದು ಕುಮಾರಸ್ವಾಮಿ ತಿಳಿಸಿದರು.

English summary
Former chief minister H. D. Kumaraswamy clarification on IMA scam. I have ordered for CCB probe when scam come to light said Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X