ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಚಾಯಿತಿ ಚುನಾವಣೆ; ರಾಮನಗರದಲ್ಲಿ ದಾಖಲೆಯ ಮತದಾನ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 23: ರಾಮನಗರ ಜಿಲ್ಲೆಯಲ್ಲಿ ನಡೆದ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಶೇ 90.03ರಷ್ಟು ಮತದಾನವಾಗಿದೆ. ರಾಮನಗರ ತಾಲೂಕಿನ 20 ಗ್ರಾಮ ಪಂಚಾಯತಿಗಳಲ್ಲಿ ಶೇ 91.56 ರಷ್ಟು, ಕನಕಪುರ ತಾಲೂಕಿನ 36 ಗ್ರಾಮ ಪಂಚಾಯತಿಗಳಲ್ಲಿ ಶೇ 89.07ರಷ್ಟು ಮತದಾನವಾಗಿದೆ.

ರಾಮನಗರ ತಾಲೂಕಿನ 20 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 359 ಸ್ಥಾನಗಳಲ್ಲಿ 2 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗದೇ ಖಾಲಿ ಉಳಿದಿತ್ತು. 26 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.331 ಸ್ಥಾನಗಳಿಗೆ 830 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದು ಅವರ ಭವಿಷ್ಯ ಮತಪತ್ರಗಳಲ್ಲಿ ದಾಖಲಾಗಿದೆ.

ರಾಮನಗರ: ಗ್ರಾ.ಪಂ ಚುನಾವಣೆ ಬಹಿಷ್ಕರಿಸಿದ ಸೌಲಭ್ಯ ವಂಚಿತ ಗ್ರಾಮಸ್ಥರುರಾಮನಗರ: ಗ್ರಾ.ಪಂ ಚುನಾವಣೆ ಬಹಿಷ್ಕರಿಸಿದ ಸೌಲಭ್ಯ ವಂಚಿತ ಗ್ರಾಮಸ್ಥರು

ಮತಪತ್ರಗಳಿರುವ ಬಾಕ್ಸ್‌ಗಳನ್ನು ಜೂನಿಯರ್ ಕಾಲೇಜಿನ ಭದ್ರತಾ ಕೊಠಡಿಯಲ್ಲಿ ಇಡಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಡಿಸೆಂಬರ್ 27ರಂದು ರಾಜ್ಯದಲ್ಲಿ 2ನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 30ರಂದು ಫಲಿತಾಂಶ ಪ್ರಕಟವಾಗಲಿದೆ.

ಪಂಚಾಯಿತಿ ಚುನಾವಣೆ; ಅಭ್ಯರ್ಥಿ ಚಿನ್ಹೆ ಬದಲು, ಮತದಾನ ಸ್ಥಗಿತ ಪಂಚಾಯಿತಿ ಚುನಾವಣೆ; ಅಭ್ಯರ್ಥಿ ಚಿನ್ಹೆ ಬದಲು, ಮತದಾನ ಸ್ಥಗಿತ

Gram Panchayat Election Ramanagara Voting Per Cent

ಕನಕಪುರ ತಾಲೂಕಿನ 36 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 612 ಸ್ಥಾನಗಳಲ್ಲಿ 1 ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಯಾಗದೇ ಖಾಲಿ ಉಳಿದಿದೆ. 121 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. 490 ಸ್ಥಾನಗಳಿಗೆ ಚುನಾವಣೆ ನಡೆದಿದೆ, 1157 ಅಭ್ಯರ್ಥಿಗಳು ಸ್ಪರ್ಧೆಮಾಡಿದ್ದರು.

ರಾಮನಗರ: ಕುತೂಹಲ ಕೆರಳಿಸಿದ್ದ ಬಿಡದಿ ಪುರಸಭೆ ಜೆಡಿಎಸ್ ಪಾಲುರಾಮನಗರ: ಕುತೂಹಲ ಕೆರಳಿಸಿದ್ದ ಬಿಡದಿ ಪುರಸಭೆ ಜೆಡಿಎಸ್ ಪಾಲು

ಹಾರೋಹಳ್ಳಿಯನ್ನು ಪಟ್ಟಣ ಪಂಚಾಯಿತಿಯಾಗಿ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ದ್ಯಾವಸಂದ್ರ, ಹಾರೋಹಳ್ಳಿ, ಕೊಳ್ಳಿಗಾನಹಳ್ಳಿ, ಟಿ. ಹೊಸಹಳ್ಳಿ ಹಾಗೂ ಕಗ್ಗಲಹಳ್ಳಿ ಗ್ರಾಮ ಪಂಚಾಯಿತಿಗಳನ್ನು ತಾತ್ಕಾಲಿಕವಾಗಿ ಚುನಾವಣೆ ಪ್ರಕ್ರಿಯೆಯಿಂದ ಕೈಬಿಡಲಾಗಿದೆ.

Recommended Video

9 ತಿಂಗಳ ಬಳಿಕ ದರ್ಶನ ನೀಡಿದ ಪುರಿ ಜಗನ್ನಾಥ ! | Oneindia Kannada

English summary
Gram Panchayat election Ramanagara taluk recorded 91.56 per cent voting and Kanakapura recorded 89.07 per cent of voting. Election counting will be held on December 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X