ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಚಾಯತಿ ಚುನಾವಣೆ; ಗೆದ್ದ ಅಭ್ಯರ್ಥಿ ಅಸಿಂಧುಗೊಳಿಸಲು ಅರ್ಜಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಫೆಬ್ರವರಿ 1 : ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಯನ್ನು ಅಸಿಂಧುಗೊಳಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಸ್ವಯಂ ಘೋಷಣ ಪತ್ರದಲ್ಲಿ ದೋಷವಿದೆ ಎಂದು ಪರಾಜಿತ ಅಭ್ಯರ್ಥಿ ಕೋರ್ಟ್ ಮೊರೆ ಹೋಗಿದ್ದಾರೆ.

ಕನಕಪುರದ ದೊಡ್ಡಾಲಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಈ ಘಟನೆ ನಡೆದಿದೆ. ಇತ್ತೀಚಿಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ದೊಡ್ಡಾಲಹಳ್ಳಿಯ ಮೂರನೇ ಬ್ಲಾಕ್ ಸದಸ್ಯರಾಗಿ ದೇವರಾಜು ಡಿ. ಕೆ. ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಪಡೆಯಲು ಹಣ ವಿತರಣೆ! ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರ ಪಡೆಯಲು ಹಣ ವಿತರಣೆ!

ಚುನಾವಣೆಯಲ್ಲಿ ಇವರ ಅವರ ಆಯ್ಕೆಯನ್ನು ಆಸಿಂಧು ಗೊಳಿಸುವಂತೆ ಪರಾಜಿತ ಅಭ್ಯರ್ಥಿ ಶಿವರೇಣುಕಾ ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಚುನಾವಣೆಯಲ್ಲಿ ಶಿವರೇಣುಕಾಗಿಂತ ಹೆಚ್ಚಿನ ಮತ ಪಡೆದು ದೇವರಾಜು ಆಯ್ಕೆಯಾಗಿದ್ದರು.

ಪಂಚಾಯಿತಿ ಚುನಾವಣೆ; ಹರಕೆ ಹೊತ್ತ ಅಭ್ಯರ್ಥಿಯಿಂದ ಪಾದಯಾತ್ರೆ! ಪಂಚಾಯಿತಿ ಚುನಾವಣೆ; ಹರಕೆ ಹೊತ್ತ ಅಭ್ಯರ್ಥಿಯಿಂದ ಪಾದಯಾತ್ರೆ!

 Gram Panchayat Election Man Moves Court To Disqualify Winning Candidate

ಡಿ. ಕೆ. ದೇವರಾಜು ಗ್ರಾಮ ಪಂಚಾಯಿತಿ ಚುನಾವಣೆ ಸ್ಪರ್ಧೆಗೆ ಸಲ್ಲಿಸಿರುವ ನಾಮಪತ್ರದಲ್ಲಿ ತಪ್ಪಾಗಿ ಮತದಾರರ ಕ್ಷೇತ್ರ ಸಂಖ್ಯೆ ನಮೂದಿಸಿದ್ದಾರೆ. ಆಸ್ತಿ ಘೋಷಣೆ, ಆದಾಯ ಹಾಗೂ ವ್ಯವಹಾರ ಮಾಹಿತಿ ಅಪೂರ್ಣವಾಗಿ ನೀಡಿದ್ದಾರೆ. ಚುನಾವಣಾ ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿಲ್ಲ ಎಂದು ಶಿವರೇಣುಕಾ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ: ಬಿ.ಎಲ್.ಸಂತೋಷ್ ಟ್ವೀಟ್ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶ: ಬಿ.ಎಲ್.ಸಂತೋಷ್ ಟ್ವೀಟ್

 Gram Panchayat Election Man Moves Court To Disqualify Winning Candidate

Recommended Video

ನಿರ್ಮಲ ಸೀತಾರಾಮನ್ ಬಜೆಟ್ ಮಂಡಿಸುವಾಗ ಕ್ರಿಕೆಟ್ ಬಗ್ಗೆ ಹೇಳಿದ್ದೇನು | Oneindia Kannada

ಚುನಾವಣೆಯಲ್ಲಿ ಗೆದ್ದ ಡಿ. ಕೆ. ದೇವರಾಜು ಚುನಾವಣೆ ನಿಯಮ ಪಾಲನೆ ಮಾಡದೆ ಉಲ್ಲಂಘನೆ ಮಾಡಿವುದರಿಂದ ಅವರ ಗ್ರಾಮ ಪಂಚಾಯತಿ ಸದಸ್ಯತ್ವವನ್ನು ರದ್ದುಗೊಳಿಸಿ ಎರಡನೇ ಸ್ಥಾನದಲ್ಲಿರುವ ನನಗೆ ಅವಕಾಶ ಕಲ್ಪಿಸಬೇಕೆಂದು ಶಿವರೇಣುಕಾ ಕನಕಪುರ ನ್ಯಾಯಲಯದಲ್ಲಿ ಮನವಿ ಮಾಡಿದ್ದಾರೆ.

English summary
Shivarenuka who lost in gram panchayat election in Kanakapura Ramanagara moved court to qualify Devaraju D. K. who submitted fake affidavits during elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X