ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ; ಸಚಿವ ಯೋಗೀಶ್ವರ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜುಲೈ 13; "ಬೆಂಗಳೂರಿನ ಸನಿಹದಲ್ಲಿರುವ ರಾಮನಗರ ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಗಳನ್ನು ಸಂಪರ್ಕಿಸುವ ಪ್ರವಾಸೋದ್ಯಮ ವಲಯವಾಗಿ ಅಭಿವೃದ್ಧಿ ಮಾಡಲು ಸರ್ಕಾರ ಮುಂದಾಗಿದೆ" ಎಂದು ಪ್ರವಾಸೋದ್ಯಮ ಸಚಿವ ಸಿ. ಪಿ. ಯೋಗೀಶ್ವರ್ ಹೇಳಿದರು.

ಮಂಗಳವಾರ ಶೀಲ್ಹಾಂದ್ರ ರೆಸಾರ್ಟ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, "ನೈಸರ್ಗಿಕವಾಗಿ ರಾಮನಗರ ಜಿಲ್ಲೆ ಹತ್ತು ಹಲವಾರು ಜಲಾಶಯ ಬೆಟ್ಟಗಳನ್ನ ಹೊಂದಿದೆ. ಪ್ರವಾಸೋದ್ಯಮಕ್ಕೆ ಮೂಲ ಸೌಲಭ್ಯ ಓದಗಿಸಲು ರೂಪರೇಷೆ ಸಿದ್ದಪಡಿಸಲಾಗಿದೆ" ಎಂದರು.

ರಾಮನಗರ; ನೀರಿನ ಪೈಪ್‌ನಲ್ಲಿ ಸಿಲುಕಿದ್ದ ರೈತನ ರಕ್ಷಣೆ ರಾಮನಗರ; ನೀರಿನ ಪೈಪ್‌ನಲ್ಲಿ ಸಿಲುಕಿದ್ದ ರೈತನ ರಕ್ಷಣೆ

"ಜಿಲ್ಲೆಯಲ್ಲಿ ಪ್ರಮುಖವಾಗಿ ಸಾವನದುರ್ಗದಲ್ಲಿ ಮೌಂಟ್ ಕ್ಲೈಂಬಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಪ್ರವಾಸಗರಿಗೆ ಭದ್ರತೆ ನೀಡಲಾಗುತ್ತದೆ. ಮಂಚನಬೆಲೆ ಜಲಾಶಯದಲ್ಲಿ 285 ಎಕರೆ ಗೋಮಾಳ ಇದೆ. ಜೊತೆಗೆ ಕಾವೇರಿ ನೀರಾವರಿ ನಿಗಮದ ಜಮೀನು ಸೇರಿಸಿ ರೆಸಾರ್ಟ್‌ ಮಾಡಲಾಗುವುದು. ಹೋಟೆಲ್, ಪಾರ್ಕ್ ನಿರ್ಮಾಣ ಮಾಡಲು ರೂಪರೇಷೆ ತಯಾರು ಮಾಡಲಾಗಿದೆ" ಎಂದು ಸಚಿವರು ವಿವರಿಸಿದರು.

ರಾಮನಗರ; ಹೈನುಗಾರಿಕೆಗೆ ಮಾರಕವಾದ ಕಾಲುಬಾಯಿ ಜ್ವರ ರಾಮನಗರ; ಹೈನುಗಾರಿಕೆಗೆ ಮಾರಕವಾದ ಕಾಲುಬಾಯಿ ಜ್ವರ

Govt Ready For Tourism development Of Ramanagara Says CP Yogeshwar

"ರೇವಣಸಿದ್ದೇಶ್ವರ ಬೆಟ್ಟದಲ್ಲಿ ರೂಪ್ ವೇ ನಿರ್ಮಾಣ. ಕಣ್ವ ಜಲಾಶಯದಲ್ಲಿ ವಾಟರ್ ಸ್ಟೋರ್ಟ್ ನಿರ್ಮಾಣ ಮಾಡುವ ಮೂಲಕ ರಾಜಧಾನಿಗೆ ಹತ್ತಿರ ಇರುವ ರಾಮನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಇಲಾಖೆ ಮುಂದಾಗಿದೆ" ಎಂದು ತಿಳಿಸಿದರು.

ರಾಮನಗರ; ಜನ ಮೆಚ್ಚುವ ಕೆಲಸ ಮಾಡಿದ ಬೆಂಗಳೂರು ನಿವಾಸಿ ರಾಮನಗರ; ಜನ ಮೆಚ್ಚುವ ಕೆಲಸ ಮಾಡಿದ ಬೆಂಗಳೂರು ನಿವಾಸಿ

"ಎಲ್ಲಾ ಪ್ರವಾಸಿ ತಾಣಗಳನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುತ್ತೇವೆ. ಮೂಲಭೂತ ಸೌಕರ್ಯ ಒದಗಿಸುವಷ್ಟು ಹಣ ಇಲಾಖೆಯಲ್ಲಿ ಇದೆ. ನಮ್ಮ ಪ್ರವಾಸಿ ತಾಣಗಳಲ್ಲಿ ಕೆಲವಷ್ಟು ಸುರಕ್ಷತೆ ಇಲ್ಲ ಎಂದು ಜನರು ಬರುತ್ತಿಲ್ಲ. ಪರಿಸರಕ್ಕೆ ಧಕ್ಕೆ ಆಗದಂತೆ ಅಭಿವೃದ್ಧಿ ಮಾಡಲಾಗುವುದು" ಎಂದು ಸ್ಪಷ್ಟಪಡಿಸಿದರು.

Recommended Video

ಕ್ರಿಕೆಟ್ ಇತಿಹಾಸದ ಕಡಿಮೆ ಅವಧಿಯ ಪಂದ್ಯ:ಕೇವಲ 7 ರನ್ ಗಳಿಸಿ All out ಆದ ಟೀಮ್ | Oneindia Kannada

"ಎಲ್ಲಾ ಇಲಾಖೆಯಲ್ಲಿ ಇರುವಂತೆ ನಮ್ಮ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದೆ. ಕೆಲವು ಸಿಬ್ಬಂದಿಗಳನ್ನು ಈಗಾಗಲೇ ಖಾಸಗಿಯಾಗಿ ನೇಮಕ ಮಾಡಿಕೊಂಡಿದ್ದೇವೆ. ನಮ್ಮ ಸಂಸ್ಕೃತಿ ತಿಳಿಸುವ ಅನೇಕ ಸ್ಥಳಗಳನ್ನ ಜನರು ನೋಡಿಲ್ಲ. ಹಾಗಾಗಿ ನಮ್ಮ ಶಾಲಾ ಮಕ್ಕಳಿಗೆ ಪ್ರವಾಸಿ ತಾಣಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆ ರೂಪಿಸಲಾಗುತ್ತಿದೆ" ಎಂದರು.

English summary
Karnataka government ready for the development of tourism of the Ramanagara district said tourism minister C. P. Yogeshwar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X