ಮಾಗಡಿ ಶಾಸಕ ಎ. ಮಂಜುನಾಥ್ ವಿರುದ್ಧ ಪುರಸಭೆ ಸದಸ್ಯರು ಗರಂ
ರಾಮನಗರ,ಜು4: ಮಾಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಿಡದಿ ಪುರಸಭೆಗೆ ಸರ್ಕಾರದಿಂದ ಮಂಜೂರಾಗಿರುವ ಅನುದಾನವನ್ನು ಹಂಚಿಕೆ ಮಾಡುವ ವಿಚಾರದಲ್ಲಿ ಶಾಸಕ ಎ. ಮಂಜುನಾಥ್ ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಉಮೇಶ್ ಆರೋಪಿಸಿದ್ದಾರೆ.
ಬಿಡದಿ ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಶಾಸಕ ಎ.ಮಂಜುನಾಥ್ ಸ್ವಪಕ್ಷೀಯರಿಗೆ ಮಾತ್ರ ಹೆಚ್ಚಿನ ಅನುದಾನ ಹಂಚಿಕೆ ಮಾಡಿ, ವಿರೋಧ ಪಕ್ಷದ ಸದಸ್ಯರಿಗೆ ಯಾವುದೇ ಅನುದಾನ ನೀಡದೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನೀಚ ಬುದ್ದಿಯ ಬಿಡು ನಾಲಿಗೆ' ಎಂದು ಬುದ್ಧಿವಾದ ಹೇಳಿದ ಅನಿತಾ ಕುಮಾರಸ್ವಾಮಿ
ಕಳೆದ ಕೆಲ ತಿಂಗಳ ಹಿಂದೆ ಬಿಡದಿ ಪುರ ಸಭೆಯ 23 ವಾರ್ಡ್ಗಳಿಗೆ ನಡೆದ ಚುನಾವಣೆಯಲ್ಲಿ ಶಾಸಕ ಎ. ಮಂಜುನಾಥ್ ಬೆಂಬಲಿತ, ಜೆಡಿಎಸ್ನ 14 ಸದಸ್ಯರು ಹಾಗೂ ಕಾಂಗ್ರೆಸ್ ಬೆಂಬಲಿತ 9 ಸದಸ್ಯರು ಚುನಾಯಿತರಾಗಿದ್ದಾರೆ. ಆದರೆ ನೂತನ ಸದಸ್ಯರು ಪುರಸಭೆಯಲ್ಲಿ ಕಾರ್ಯಾರಂಭ ಮಾಡಲು ಸಾಧ್ಯವಾಗಿಲ್ಲ.
ಪುರಸಭೆಯಲ್ಲಿ ಚುನಾಯಿತ ಸದಸ್ಯರ ಕಮಿಟಿ ಇಲ್ಲದ ಕಾರಣ ಸರ್ಕಾರದಿಂದ ಪುರಸಭೆಗೆ ಬರುವ ಅನುದಾನ ಹಂಚಿಕೆಯ ಜವಾಬ್ದಾರಿ ಕ್ಷೇತ್ರ ಶಾಸಕರದ್ದಾಗಿದೆ. ಹಾಗಾಗಿ, 15 ನೇ ಹಣಕಾಸು ಯೋಜನೆಯಡಿ ಸುಮಾರು 94 ಲಕ್ಷ ರೂಪಾಯಿ ಅನುದಾನವನ್ನು ಜೆಡಿಎಸ್ ಸದಸ್ಯರಿಗೆ ಹಂಚಿಕೆ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಸದಸ್ಯರಿಗೆ ಕೇವಲ 20 ಲಕ್ಷ ರೂಪಾಯಿ ಹಂಚಿಕೆ ಮಾಡುವ ಮೂಲಕ ಶಾಸಕ ಎ. ಮಂಜುನಾಥ್ ಪಕ್ಷಪಾತ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟನೆ ನೀಡಿದ ಅಭಿಷೇಕ್ ಅಂಬರೀಶ್
ಸಮಾನ ಹಂಚಿಕೆ ಮಾಡಲು ಆಗ್ರಹ; ಇನ್ನೂ ಎಸ್.ಎಫ್.ಸಿ ಯಡಿ 13 ಕೋಟಿ ರೂಪಾಯಿ ಅನುದಾನದಲ್ಲಿ, 11 ಕೋಟಿ, 60 ಲಕ್ಷ ರೂಪಾಯಿಯ ಸಿಂಹ ಪಾಲು ಹಣವನ್ನು ಸ್ವ ಪಕ್ಷೀಯ ಸದಸ್ಯರು ಗೆದ್ದಿರುವ 14 ವಾರ್ಡ್ ಗಳಿಗೆ ಹಂಚಿದ್ದಾರೆ. ಪಟ್ಟಣಕ್ಕೆ ಅಗತ್ಯವಾದ ಬೀದಿ ದೀಪಗಳ ನಿರ್ವಹಣೆಯಲ್ಲು ಶಾಸಕರು ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ 9 ಪುರಸಭೆಯ ಸದಸ್ಯರು ಆರೋಪ ಮಾಡಿದರು.
ಪುರಸಭೆ ವ್ಯಾಪ್ತಿಯಲ್ಲಿ 2 ಕೋಟಿ ಅನುದಾನವನ್ನು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಿಟ್ಟಿರುವ ಅನುದಾನವನ್ನು ಇದುವರೆಗೆ ಬಳಕೆ ಮಾಡಿಲ್ಲಾ, ಆ ಹಣ ಬಳಕೆ ಆಗದ್ದಿದ್ದರೆ ವಾಪಸ್ ಸರ್ಕಾರಕ್ಕೆ ಹೋಗುತ್ತದೆ. ಶಾಸಕರ ತಮ್ಮ ವೈಯಕ್ತಿಕ ಅನುದಾನವಾಗಿದ್ದರೆ ನಾವು ಪ್ರಶ್ನೆ ಮಾಡುತ್ತಿರಲಿಲ್ಲ. ಸರ್ಕಾರದಿಂದ ಪುರಸಭೆಗೆ ಬಂದಿರುವ ಅನುದಾನವನ್ನು ತಾರತಮ್ಯ ಮಾಡದೆ ಎಲ್ಲ ವಾರ್ಡ್ ಗಳ ಸದಸ್ಯರಿಗೂ ಸಮಾನ ಹಂಚಿಕೆ ಮಾಡಬೇಕೆಂದು ಕಾಂಗ್ರೆಸ್ ಪುರಸಭೆಯ ಸದಸ್ಯರು ಆಗ್ರಹಿಸಿದರು.

ಮಲತಾಯಿ ಧೋರಣೆ; ಪುರಸಭೆಯ ಅನುದಾನ ಹಂಚಿಕೆಯಲ್ಲಿ ನಡೆದಿರುವ ತಾರತಮ್ಯದ ಬಗ್ಗೆ, ಈಗಾಗಲೇ ಉಪ ವಿಭಾಗಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಸಂಸದ ಡಿ. ಕೆ. ಸುರೇಶ್ ಅವರ ಗಮನಕ್ಕೆ ತರಲಾಗಿದೆ. ಕೂಡಲೇ ಶಾಸಕ ಎ.ಮಂಜುನಾಥ್ ಹಾಗೂ ಪುರಸಭೆ ಅಧಿಕಾರಿಗಳು ತಮ್ಮ ಮಲತಾಯಿ ಧೋರಣೆಯನ್ನು ಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಡದಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜು, "ಶಾಸಕರಿಗೆ ಎಲ್ಲ ವಾರ್ಡ್ ಗಳಲ್ಲಿಯೂ ಮತದಾರರು ಮತ ನೀಡಿದ್ದಾರೆ. ಕಾಂಗ್ರೆಸ್ ನಿಂದ ಆಯ್ಕೆಯಾದ ಸದಸ್ಯರ ವಾರ್ಡ್ ಗಳಿಗೆ ಹಣ ಬಿಡುಗಡೆಯಲ್ಲಿ ತಾರತಮ್ಯ ಮಾಡುತ್ತಾರೆ. ಸರ್ಕಾರದಿಂದ ಬರುವ ಅನುದಾನವನ್ನು ರಾಜಕೀಯ ಮರೆತು ಸಮಾನವಾಗಿ ಹಂಚಿಕೆ ಮಾಡಿ ಎಲ್ಲರನ್ನು ಸಮಾನವಾಗಿ ನೋಡಿ" ಎಂದು ಶಾಸಕರಿಗೆ ಮನವಿ ಮಾಡಿದರು.
ಪುರಸಭೆಗೆ ಬೀಗ; ಶನಿವಾರ ಪುರಸಭೆ ವ್ಯಾಪ್ತಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನಾ ಸಭೆಗೆ ಪುರಸಭಾ ಸದಸ್ಯರು, ಆಶ್ರಯ ಸಮಿತಿ ಸದಸ್ಯರಿಗೆ ಆಹ್ವಾನ ನೀಡುವ ಅಧಿಕಾರಿಗಳು ವಿಧಾನ ಪರಿಷತ್ತು ಸದಸ್ಯರನ್ನು ಕರೆಯುವ ಸೌಜನ್ಯ ನಿಮಗಿಲ್ಲ. ಸಿ.ಎಂ.ಲಿಂಗಪ್ಪ ಅವರ ಕೊಡುಗೆ ಕ್ಷೇತ್ರಗಳ ಜನರಿಗೆ ತಿಳಿದಿದೆ ಎಂದ ಅವರು ಶಾಸಕರ ಈ ಧೋರಣೆಯನ್ನು ಕಾಂಗ್ರೆಸ್ ಪಕ್ಷದ ಮುಖಂಡರುಗಳ ಪರವಾಗಿ ಖಂಡಿಸುತ್ತೇನೆ. ಶಾಸಕರು ನಡೆದಿರುವ ತಪ್ಪುಗಳನ್ನು ಸರಿಪಡಿಸದಿದ್ದರೆ ಪುರಸಭೆಗೆ ಬೀಗ ಜಡಿಯುವ ಕೆಲಸ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.