ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರನ್ನು ಒದ್ದುಕೊಂಡು ಕುಳಿತುಕೊಳ್ಳುತ್ತಿದ್ದ ಸಿದ್ದರಾಮಯ್ಯ; ಎಚ್‌ಡಿಕೆ ಆರೋಪ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್ 25: "ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಕಟ್ಟಿದ್ದೇ ನಾನು ಅಂತಾರೆ. ಬ್ಯಾನರ್‌ನಲ್ಲಿ ಫೋಟೋ ಇಲ್ಲ ಅಂತ ಕಾರ್ಯಕ್ರಮಕ್ಕೆ ಬರಲಿಲ್ಲ. ಇನ್ನು ಮುಖ್ಯಮಂತ್ರಿಗಿರಿಯನ್ನು ಬೇರೆಯವರಿಗೆ ಬಿಟ್ಟುಕೊಡುತ್ತಾರಾ?," ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು.

ಕಾಲಿನ ಮೇಲೆ ಕಾಲು ಹಾಕಿಕ್ಕೊಂಡು ಮಾಜಿ ಪ್ರಧಾನಿ ದೇವೇಗೌಡರನ್ನು ಒದ್ದುಕೊಂಡು ಕುಳಿತುಕೊಳ್ಳುತ್ತಿದ್ದರು. ಇದನ್ನೆಲ್ಲಾ ನೋಡಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್‌ಡಿಕೆ ವಾಗ್ದಾಳಿ ನಡೆಸಿದರು.

ಮೈಸೂರು ಜಿಲ್ಲಾ‌ ಪತ್ರಕರ್ತರ ಸಂಘದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, "ಜೆಡಿಎಸ್ ಫ್ಯಾಮಿಲಿ ಪಾರ್ಟಿ. ಜೆಡಿಎಫ್ ಅಂತೀರಲ್ಲ. ವರುಣಾದಲ್ಲಿ ನೀವು ಏನು ಮಾಡಿದಿರಿ ಸಿದ್ದರಾಮಯ್ಯ? ಬಾದಾಮಿಯಲ್ಲಿ ನೀವು ನಿಂತಾಗ ಚಾಮುಂಡೇಶ್ವರಿ ಯಾರಾದರೂ ಮುಸಲ್ಮಾನರಿಗೆ ಬಿಟ್ಟು ಕೊಡಬಹುದಿತ್ತಲ್ಲ ಸ್ವಾಮಿ," ಎಂದು ಕುಮಾರಸ್ವಾಮಿ ಟಾಂಗ್ ನೀಡಿದರು.

Mysuru: Former CM HD Kumarasamy Expressed Outrage Against Opposition Leader Siddaramaiah For Family Politics

"ಜೆಡಿಎಫ್ ಅಂತೀರಲ್ಲ ವರಣಾದಲ್ಲಿ ನಿಷ್ಠಾವಂತ ಕಾರ್ಯಕರ್ತರ ಇರಲಿಲ್ಲವೆ? ನಮ್ಮದು ಫ್ಯಾಮಿಲಿ ಪಾರ್ಟಿ ಅಂತೀರ, ನಿಮ್ಮ ಮಗನನ್ನು ವರಣಾದಲ್ಲಿ ನಿಲ್ಲಿಸಿದರಲ್ಲ. ನಿಮ್ಮದು ಯಾವ ಪಾರ್ಟಿ? ನಿಮ್ಮದು ಫ್ಯಾಮಿಲಿ ಪಾರ್ಟಿ ಅಲ್ವಾ?," ಎಂದು ಪ್ರಶ್ನಿಸಿದರು.

"ವರುಣಾದಲ್ಲಿ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರು ಇರಲಿಲ್ಲವಾ? ಎಲ್ಲರ ಮನೆ ದೋಸೆನೂ ತೂತೆ ಇದನ್ನು ಅರ್ಥ ಮಾಡಿಕೊಳ್ಳಬೇಕು ಸಿದ್ದರಾಮಯ್ಯ," ಎಂದು ವಿಪಕ್ಷ ನಾಯಕರನ್ನು ತರಾಟೆ ತೆಗೆದುಕೊಂಡರು.

"ಎಲ್ಲಾ ಪಕ್ಷಗಳೂ ಉಪ ಚುನಾವಣೆಯಲ್ಲಿ ಪೈಪೋಟಿ ನಡೆಸುತ್ತಿವೆ. ರಾಜ್ಯದ ಹಲವಾರು ಪ್ರದೇಶದಲ್ಲಿ ದೊಡ್ಡಮಟ್ಟದ ಅಕಾಲಿಕ ಮಳೆ ಆಗುತ್ತಿದೆ. ಈಗ ವಿಧಾನಸೌಧದ ಕಚೇರಿಗಳು ಬೀಗ ಹಾಕಿವೆ. ಮಂತ್ರಿಗಳು ಒಂದೊಂದು ಬೂತ್‌ನಲ್ಲಿ ಕುಳಿತಿದ್ದಾರೆ. ವಿರೋಧ ಪಕ್ಷಕ್ಕೂ ನಾವೇನು ಕಡಿಮೆ‌ ಇಲ್ಲ ಅಂತ ಬೂತ್‌ನಲ್ಲಿ ಬೀಡುಬಿಟ್ಟಿದ್ದಾರೆ. ನಾವು ಕೂಡ ಪ್ರಚಾರದಲ್ಲಿ ಭಾಗಿಯಗುತ್ತಿದ್ದೇನೆ. ಆದರೆ ಸರ್ಕಾರ ಜನರ ಸಮಸ್ಯೆ ಮರೆತಿದ್ದಾರೆ," ಎಂದು ಎಚ್‌ಡಿಕೆ ಆರೋಪಿಸಿದರು.

Mysuru: Former CM HD Kumarasamy Expressed Outrage Against Opposition Leader Siddaramaiah For Family Politics

ಜಮೀರ್‌ಗೆ ಟಾಂಗ್
ಎಚ್.ಡಿ. ಕುಮಾರಸ್ವಾಮಿ ಬಿಜೆಪಿಯಿಂದ ಸೂಟ್‌ಕೇಸ್ ತೆಗೆದುಕೊಂಡು ಅಭ್ಯರ್ಥಿ ಹಾಕಿದ್ದಾರೆ ಎಂದು ಆರೋಪ ಮಾಡಿದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ತಿರುಗೇಟು ನೀಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಆನೆ ಹೋಗುತ್ತಿದ್ದರೆ ನಾಯಿ ಬೊಗಳುತ್ತವೆ, ಇದಕ್ಕೆ ಉತ್ತರ ಕೊಡುವುದಕ್ಕೆ ಆಗುತ್ತಾ?.

"ನಾನು ಕಂಡವರ ಸೂಟ್‌ಕೇಸ್‌ಗೆ ಕೈ ಹಾಕಿದ್ದೇನೆ ಅಂತ ಇಟ್ಟುಕೊಳ್ಳೋಣ. ನಾಳೆ ದೇವೆಗೌಡರು ಸೂಟ್‌ಕೇಸ್ ತೆಗೆದುಕೊಳ್ಳೋಕೆ ಬಂದಿದ್ದಾರೆ ಅಂತಾರೆ. ನಾಲಿಗೆ ಇದೆ ಅಂತ ಹೊಲಸು ಮಾತನಾಡಿದರೆ ಅದಕ್ಕೆ ಉತ್ತರ ಕೊಡುವುದಕ್ಕೆ ಆಗುತ್ತಾ,?" ಎಂದು ಮಾತಿನ ಚಾಟಿ ಬೀಸಿದರು.

"ನನ್ನ ಲೆವೆಲ್‌ಗೆ ಜಮೀರ್ ಅಹ್ಮದ್ ಬಗ್ಗೆ ಮಾತನಾಡಬೇಕಾ? ನಾನು ಕಾಲೇಜಿನಲ್ಲಿ ಓದುತ್ತಿರುವ ಸಂದರ್ಭದಲ್ಲಿ ನಾಲ್ಕು ವಾರ್ಡ್‌ಗಳಲ್ಲಿ ಕಸದ ಟೆಂಡರ್ ತೆಗೆದುಕೊಂಡೆ. ಕಸದ ಟೆಂಡರ್ ತೆಗೆದುಕೊಂಡು ವೃತ್ತಿ ಮಾಡುತ್ತಿದ್ದೆ. ದೇವೆಗೌಡರು ಬೇಡ ಅಂದಾಗ ಅದನ್ನು ಬಿಟ್ಟೆ. ಮೈಸೂರಿನಲ್ಲಿ ಚಿತ್ರದ ಹಂಚಿಕೆದಾರನಾಗಿ ಕೆಲಸ ಮಾಡಿದೆ. ನಾನು ನನ್ನ ತಂದೆ‌ ನೆರಳಲ್ಲಿ ಬೆಳೆಯಲಿಲ್ಲ. ಬಡ್ಡಿಗೆ ದುಡ್ಡು ತೆಗೆದುಕೊಂಡು ದುಡಿದಿದ್ದೇನೆ," ಎಂದರು.

Recommended Video

ಛೇ!!ಟೀಮ್ ಇಂಡಿಯಾ ಸೋತಿದ್ದಕ್ಕೆ ಪಾಕಿಸ್ತಾನ ಇಷ್ಟು ಕೆಳಮಟ್ಟಕ್ಕೆ ಇಳಿಬಾರ್ದಿತ್ತು | Oneindia Kannada

"ನಾನು ತಂದೆಯ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಇಂದಿನ‌ ರಾಜಕಾರಣಿಗಳ ರೀತಿ ಹಣ ಮಾಡಿಲ್ಲ. ಕುಮಾರಸ್ವಾಮಿ ಹಿನ್ನೆಲೆ ಇವರುಗಳಿಗೇನು ಗೊತ್ತು. ಸಿನಿಮಾ ದುಡ್ಡನ್ನು ಕಾವೇರಿ ಹೋರಾಟಕ್ಕೆ ಕೊಟ್ಟಿದ್ದೇನೆ, ಇದು ನನ್ನ ಬದುಕು," ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್‌ಗೆ ತಿರುಗೇಟು ನೀಡಿದರು.

English summary
Congress Why not gave ticket to the Muslims in Chamundeshwari constituency, Former CM HD Kumaraswamy questioned.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X