• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಾಕ್ಟರ್ ಪರೇಡ್: "ಭೂಮಿ ಉಳುಮೆ ಮಾಡಲು ಡೀಸೆಲ್‌ಗೆ ಹಣ ಇಲ್ಲ''

By ರಾಮನಗರ ಪ್ರತಿನಿಧಿ
|

ರಾಮನಗರ, ಜನವರಿ 25: ನನ್ನ ರೈತರು ಟ್ರಾಕ್ಟರ್ ಗಳಲ್ಲಿ ಗಣರಾಜ್ಯ ದಿನದಂದು ಬೆಂಗಳೂರಿಗೆ ಬರುತ್ತಾರೆ ಎಂಬುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ನಮ್ಮ ರೈತರಿಗೆ ತಮ್ಮ ಭೂಮಿ ಉಳುಮೆ ಮಾಡಲು ಡೀಸೆಲ್‌ಗೆ ಹಣ ಇಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸರಕಾರ ಡೀಸೆಲ್ ಬೆಲೆಯನ್ನು 80 ರೂ. ಗಿಂತ ಹೆಚ್ಚು ಮಾಡಿದೆ. ನಮ್ಮ ರೈತರು ರಾಜ್ಯದ ನಾನಾ ಜಿಲ್ಲೆಗಳಿಂದ ಬೆಂಗಳೂರಿಗೆ ಬರಲು ಟ್ರಾಕ್ಟರ್‌ ಗಳಿಗೆ ಡಿಸೇಲ್ ಹಾಕುವಷ್ಟು ಕೇಂದ್ರ ಹಾಗೂ ರಾಜ್ಯ ಸರಕಾರ ಅರ್ಥಿಕ ಸಬಲರಾಗಿ ಇಟ್ಟಿದ್ದಾರಾ ಎಂದು ಪ್ರಶ್ನಿಸಿದರು.

ರೈತರ ಟ್ರಾಕ್ಟರ್ ಜಪ್ತಿ ಮಾಡಲಿ ಬಿಡಿಸಿಕೊಡಲು ನಾನೇ ಹೋಗ್ತಿನಿ! ರೈತರ ಟ್ರಾಕ್ಟರ್ ಜಪ್ತಿ ಮಾಡಲಿ ಬಿಡಿಸಿಕೊಡಲು ನಾನೇ ಹೋಗ್ತಿನಿ!

ಕೆಲವರು ರಾಜಕೀಯ ದುರ್ಬಳಕೆಗೆ ಇಂತಹ ರೈತ ಪ್ರತಿಭಟನೆಗಳನ್ನು ನಡೆಸುತ್ತಾರೆ. ಕೆಲವು ಪಟ್ಟಬದ್ಧ ಹಿತಾಸಕ್ತಿಗಳು ರೈತರನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿವೆ ಎಂದು ಆರೋಪಿಸಿದರು.

""ರಾಮನಗರದಲ್ಲಿ ಒಬ್ಬ ಕಾಂಗ್ರೆಸ್ ಪಕ್ಷದ ದಾನ ಶೂರ ಕರ್ಣ ಇದ್ದಾನೆ. ಆತ ರಾಮನಗರದ ರೈತರು ಟ್ರಾಕ್ಟರ್ ತನ್ನಿ, ನಾನು ಡೀಸೆಲ್ ಹಾಕಿಸುತ್ತೇನೆ ಅಂತಾ ಆಫರ್ ಕೊಟ್ಟಿದ್ದಾನೆ ಎಂಬ ಮಾಹಿತಿ ಇದೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಪ್ತ ಇಕ್ಬಾಲ್ ಹುಸೇನ್ ಗೆ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದರು.

   ಗಣರಾಜ್ಯೋತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಬ್ರೇಕ್- ರಾಜಧಾನಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ | Oneinda Kannada

   ಇದೇ ರೀತಿ ಕಾಂಗ್ರೆಸ್ ನಾಯಕರು ರೈತರಿಗೆ ಡಿಸೇಲ್ ಆಫರ್ ನೀಡುತ್ತಿರುವುದು ರಾಜ್ಯದ ಎಲ್ಲಾ ಕಡೆ ನಡೆಯುತ್ತಿದೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

   English summary
   Farmers has no money for plow their land, Former CM HD Kumaraswamy said that.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X