ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಹೊರವಲಯದಲ್ಲಿ ಹೊತ್ತಿ ಉರಿದ ಅಗರಬತ್ತಿ ಕಾರ್ಖಾನೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 29: ಅಗರಬತ್ತಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ನಷ್ಟವಾಗಿರುವ ಘಟನೆ ನಡೆದಿದೆ. ರಾಮನಗರ ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ತರುಳು ಗ್ರಾಮದ ಬಳಿ ಈ ಘಟನೆ ನಡೆದಿದೆ.

ಶುಕ್ರವಾರ ತರಳು ಹಾಗೂ ಗುಳೈಕ್ ಗ್ರಾಮಗಳ ನಡುವಿನ ಕಗ್ಗಲಿಪುರ-ಬನ್ನೇರಘಟ್ಟ ಮುಖ್ಯ ರಸ್ತೆಯಲ್ಲಿನ ಅಗರಬತ್ತಿ ಕಾರ್ಖಾನೆಯಲ್ಲಿ ಸುಮಾರು 12 ಗಂಟೆ ವೇಳೆಗೆ ಬೆಂಕಿ‌ ಕಾಣಿಸಿಕೊಂಡಿದೆ. ತಕ್ಷಣ ಬೆಂಕಿ ಕಾರ್ಖಾನೆ ತುಂಬಾ ಹಬ್ಬಿದೆ.

ಲಸಿಕೆಗಳು ಸುರಕ್ಷಿತ: ಬೆಂಕಿ ಅವಘಡದ ಬಳಿಕ ಅದಾರ್ ಸ್ಪಷ್ಟನೆಲಸಿಕೆಗಳು ಸುರಕ್ಷಿತ: ಬೆಂಕಿ ಅವಘಡದ ಬಳಿಕ ಅದಾರ್ ಸ್ಪಷ್ಟನೆ

ಬೆಂಕಿ ಮತ್ತು ಹೊಗೆಯನ್ನು ನೋಡಿದ ಕಾರ್ಖಾನೆಯಲ್ಲಿದ್ದ ಎಲ್ಲಾ ಸಿಬ್ಬಂದಿಗಳು ತಕ್ಷಣ ಹೊರ ಬಂದಿದ್ದಾರೆ. ನೋಡ ನೋಡುತ್ತಲೇ ಬೆಂಕಿ ಇಡೀ ಕಾರ್ಖಾನೆಯನ್ನೆ ಆವರಿಸಿ ಸುತ್ತಮತ್ತಲೂ ದಟ್ಟ ಹೊಗೆ ಆವರಿಸಿತ್ತು.

ಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅನಾಹುತ: 10 ಶಿಶುಗಳ ಸಜೀವ ದಹನಆಸ್ಪತ್ರೆಯಲ್ಲಿ ಭೀಕರ ಬೆಂಕಿ ಅನಾಹುತ: 10 ಶಿಶುಗಳ ಸಜೀವ ದಹನ

Fire Accident In Agarbatti Factory

ಬೆಂಕಿ ಅವಘಡಕ್ಕೆ ಕಾರಣ ಶಾರ್ಟ್ ಸರ್ಕ್ಯೂಟ್ ಎಂದು ಶಂಕಿಸಲಾಗಿದೆ. ಕಾರ್ಖಾನಯಲ್ಲಿ ಅಗರಬತ್ತಿ ತಯಾರಿಕೆ ಕಚ್ಚಾ ಸಾಮಾಗ್ರಿಗಳನ್ನು ಸಂಗ್ರಹ ಮಾಡಲಾಗಿತ್ತು. ಯಂತ್ರಗಳಿಗೂ ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ರಾಮನಗರ; ಹೊತ್ತಿ ಉರಿದ ಬ್ಯಾಟರಿ ತಯಾರಿಕಾ ಕಾರ್ಖನೆ ರಾಮನಗರ; ಹೊತ್ತಿ ಉರಿದ ಬ್ಯಾಟರಿ ತಯಾರಿಕಾ ಕಾರ್ಖನೆ

ಅಗ್ನಿ ದುರಂತ ಸಂಭವಿಸಿದ ವಿಷಯ ತಿಳಿಯುತ್ತಿದಂತೆ 5 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಸಂಪೂರ್ಣ ಕಾರ್ಖಾನೆ ಸುಟ್ಟ ಕರಕಲಾಗಿದೆ.

ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ. ಕಾರ್ಮಿಕರು ಹೊರಗೋಡಿ ಬಂದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.

English summary
Fire accident in agarbatti factory in Ramanagara, Kaggalipura police station limits. 5 fire engine control the fire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X