ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಭೀತಿಗೆ ದೇವರ ಮೊರೆ: ಕನಕಪುರದಲ್ಲಿ ಸಾಮಾಜಿಕ ಅಂತರವಿಲ್ಲ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ 14: ಕೊರೊನಾ ವೈರಸ್ ಭೀತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂಬ ಕಟ್ಟುನಿಟ್ಟಿನ ಆದೇಶವಿದ್ದರೂ, ಗ್ರಾಮಸ್ಥರು ಸಾಮೂಹಿಕವಾಗಿ ಒಂದೇ ಕಡೆ ಸೇರಿ ದೇವರ ಮೊರೆ ಹೋಗಿದ್ದಾರೆ. ಇದರಿಂದಾಗಿ ಲಾಕ್ ಡೌನ್ ಉಲ್ಲಂಘನೆ ಮಾಡಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಗಡಿ ಗ್ರಾಮ ಕೊಳಗೊಂಡನಹಳ್ಳಿಯಲ್ಲಿ ನಡೆದಿದೆ.

Recommended Video

ಗ್ರೀನ್ ಝೋನ್ ನಲ್ಲಿರುವ ರಾಮನಗರದಲ್ಲಿ ಆತಂಕ! ಈ ಟೈಮ್ ನಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಬೇಕಿತ್ತಾ! | Ramanagara

ದೇಶದಲ್ಲೇ ಕೊರೊನಾ ಹಾಟ್ ಸ್ಪಾಟ್ ಮೊದಲ ಸ್ಥಾನದಲ್ಲಿರುವ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಗ್ರಾಮವೇ ಕೊಳಗೊಂಡನಹಳ್ಳಿ. ಗ್ರಾಮದ ಜನರು ತಮ್ಮ ಗ್ರಾಮಕ್ಕೆ ಕೊರೊನಾ ಮಹಾಮಾರಿ ಬರದಿರಲಿ ಎಂದು ಇಡೀ ರಾತ್ರಿ ಮೆರವಣಿಗೆ ಮತ್ತು ಗ್ರಾಮದ ಎಲ್ಲಾ ಬೀದಿಗಳಲ್ಲಿ ಪಂಜು ಹಿಡಿದು ದೇವರ ಪೂಜೆ ಮಾಡಿದ್ದಾರೆ.

ಕಾಂಗ್ರೆಸ್ ಸೇರಿ ತಪ್ಪು ಮಾಡಿದೇನಾ ಎಂದ ಮಾಜಿ ಶಾಸಕ ಬಾಲಕೃಷ್ಣಕಾಂಗ್ರೆಸ್ ಸೇರಿ ತಪ್ಪು ಮಾಡಿದೇನಾ ಎಂದ ಮಾಜಿ ಶಾಸಕ ಬಾಲಕೃಷ್ಣ

ಬೆಳಿಗ್ಗೆ ಗ್ರಾಮದ ಮಹಿಳೆಯರೆಲ್ಲ ತಂಬಿಟ್ಟಿನ ಆರತಿ ತಲೆಯ ಮೇಲೆ ಹೊತ್ತು ಪ್ರದಕ್ಷಿಣೆ ಹಾಕಿ ಸಾಮೂಹಿಕವಾಗಿ ಒಂದೆಡೆ ಸೇರಿ ದೇವರಿಗೆ ಪೂಜೆ ಸಲ್ಲಿಸಿ ನಮ್ಮ ಗ್ರಾಮ ಕೊರೊನಾ ಭೀತಿಯಿಲ್ಲದೇ ಕ್ಷೇಮವಾಗಿರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

Festival Celebration In Kanakapura With No Social Distance

ಕೊಳಗೊಂಡನಹಳ್ಳಿ ಜನರು ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಸಾಮಾಜಿಕ ಅಂತರವಿಲ್ಲದೇ ಸಾಮೂಹಿಕವಾಗಿ ಒಂದು ಕಡೆ ಸೇರಿ ಪೂಜೆ ಮಾಡಿದ ಕಾರಣ ಕೊರೊನಾ ಸೋಂಕು ಹರಡುವ ಭೀತಿಯಿಂದ ಅಕ್ಕ ಪಕ್ಕದ ಗ್ರಾಮಗಳಲ್ಲಿ ಇದೀಗ ಒಂದು ತರದ ಭಯದ ವಾತಾವರಣ ಮನೆ ಮಾಡಿದೆ.

ರಾಮನಗರಕ್ಕೆ ನಮ್ಮ ಕುಟುಂಬ ಯಾವತ್ತೂ ಚಿರಋಣಿ ಎಂದ ಶಾಸಕಿರಾಮನಗರಕ್ಕೆ ನಮ್ಮ ಕುಟುಂಬ ಯಾವತ್ತೂ ಚಿರಋಣಿ ಎಂದ ಶಾಸಕಿ

ಒಂದು ಮೂಲದ ಪ್ರಕಾರ ಸ್ಥಳೀಯ ಗ್ರಾಮ ಪಂಚಾಯತಿ ಪಿಡಿಒ ಅನುಮತಿ ಪಡೆದು ಜಾತ್ರೆ ನಡೆಸಿರುವ ಬಗ್ಗೆ ಮಾತು ಕೇಳಿ ಬರುತ್ತಿವೆ. ಅಲ್ಲದೇ ಪೊಲೀಸರಿಗೂ ಈ ಬಗ್ಗೆ ಮಾಹಿತಿ ಇದ್ದರೂ ಸುಮ್ಮನಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಕೂಡಲೇ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ ಕರ್ತವ್ಯ ಲೋಪ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.

Festival Celebration In Kanakapura With No Social Distance

ಇಲ್ಲಿಯವರಗೆ ಹಸಿರು ವಲಯದಲ್ಲಿದ್ದ ರಾಮನಗರ ಜಿಲ್ಲೆಗೆ ಇದೀಗ ಕೊಳಗೊಂಡನಹಳ್ಳಿ ಜನರು ಸಾಮೂಹಿಕವಾಗಿ ಸೇರಿ ಹಬ್ಬ ಆಚರಿಸಿದ ಕಾರಣ ಕೊರೊನಾ ಮಹಾಮಾರಿ ವಕ್ಕರಿಸಿಬಿಡುತ್ತಾ ಎಂಬ ಆತಂಕ ಜನರನ್ನು ಕಾಡುತ್ತಿದೆ.

English summary
The villagers collectively join together In Kanakapura Taluk, Ramanagara District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X