ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರದಲ್ಲಿ ಮಗನ ನೆನಪಿನಲ್ಲಿ RSS ಕಚೇರಿ ನಿರ್ಮಾಣಕ್ಕೆ 4 ಕೋಟಿ ನಿವೇಶನ ದಾನ ನೀಡಿದ ತಂದೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 26: ರಾಷ್ಟ್ರೀಯ ಸ್ವಯಂ ಸೇವಕನಾಗಿದ್ದ ತಮ್ಮ ಪುತ್ರನ ಅಗಲಿಕೆ ನೋವಿನ ನಡುವೆಯೂ ತಂದೆಯೊಬ್ಬರು ತಮ್ಮ ನಾಲ್ಕು ಕೋಟಿ ಮೌಲ್ಯದ ನಿವೇಶನವನ್ನು ಜಿಲ್ಲಾ ಆರ್‌ಎಸ್‌ಎಸ್ ಕಚೇರಿ ನಿರ್ಮಾಣಕ್ಕೆ ದಾನವಾಗಿ ನೀಡಿದ್ದಾರೆ.
HDFC ಬ್ಯಾಂಕಿನಲ್ಲಿ ನೌಕರಿ ಮಾಡಿಕೊಂಡು ಜೊತೆಗೆ ಸ್ವಯಂ ಸೇವಕನಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ವರದರಾಜು, ತಮ್ಮ 30ನೇ ವಯಸ್ಸಿನಲ್ಲೇ ಹೃದಯಘಾತದಿಂದ ಮೃತಪಟ್ಟಿದ್ದರು. ಜನಸೇವೆಯತ್ತ ಹೆಚ್ಚು ಆಸಕ್ತಿ ಹೊಂದಿದ್ದ ವರದರಾಜು ತಂದೆ ತನ್ನ ಮಗನ ಆದರ್ಶವನ್ನು ಎತ್ತಿಹಿಡಿಯುವ ಕೆಲಸ ಮಾಡಿದ್ದಾರೆ.

ಚನ್ನಪಟ್ಟಣ: ಬಿಜೆಪಿ ಸೈನಿಕನ ವೇಗಕ್ಕೆ ಬ್ರೇಕ್ ಹಾಕಲು ಜೆಡಿಎಸ್ ಯುವರಾಜನ ಎಂಟ್ರಿಚನ್ನಪಟ್ಟಣ: ಬಿಜೆಪಿ ಸೈನಿಕನ ವೇಗಕ್ಕೆ ಬ್ರೇಕ್ ಹಾಕಲು ಜೆಡಿಎಸ್ ಯುವರಾಜನ ಎಂಟ್ರಿ

ಕಳೆದ 2018ರಲ್ಲಿ ಮೃತಪಟ್ಟ ವರದರಾಜನ ನೆನಪಿನಲ್ಲಿ ಆತನ ತಂದೆ ರಾಮಚಂದ್ರಪ್ಪ, ಆರ್.ಎಸ್.ಎಸ್ ಜಿಲ್ಲಾ ಕಛೇರಿ ನಿರ್ಮಾಣ ಮಾಡಲು ಪಟ್ಟಣದ ಹೃದಯ ಭಾಗದಲ್ಲಿರುವ ಸುಮಾರು 4 ಕೋಟಿ ಮೌಲ್ಯದ 10 ಕುಂಟೆ ನಿವೇಶವನ್ನು ಕೊಡುಗೆಯಾಗಿ ನೀಡಿದ್ದಾರೆ. ವರದರಾಜು ತಂದೆ ರಾಮಚಂದ್ರಪ್ಪನವರ ಔದಾರ್ಯತೆಯನ್ನು ಕಂಡ ಸ್ವಯಂಸೇವಕರು, ಸಂಘದ ಪ್ರೇರಣೆ ಎಂದರೆ ಇದೇ ಇರಬೇಕು. ಅದಕ್ಕಾಗಿಯೇ ಹಿರಿಯರು ಸಂಘ ಕಾರ್ಯವೆಂದರೆ ರಾಮ ಕಾರ್ಯ, ದೇಶ ಕಾರ್ಯ ಎಂದು ಹೇಳಿ ಶ್ಲಾಘಿಸಿದ್ದಾರೆ.

Father who donated 4 Crore rupees site to build RSS office in memory of his dead son in Ramnagar

ನೇತ್ರದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ:
2018ರಲ್ಲಿ ರಾಮನಗರದ ಚಾಮುಂಡೇಶ್ವರಿ ಬಡಾವಣೆ ನಿವಾಸಿ ವರದರಾಜು ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯದಲ್ಲಿ ಕೊನೆಯುಸಿರು ಎಳೆದಿದ್ದರು. ಅವರು ಪತ್ನಿ ನವ್ಯ, ತಂದೆ ರಾಮಚಂದ್ರಪ್ಪ, ತಾಯಿ ಹಾಗೂ ಅಪಾರ ಬಂಧುಗಳನ್ನು ಅರಲಿದ್ದರು. ವರದರಾಜು ಕಣ್ಣುಗಳನ್ನು ಬಿಡದಿಯ ಡಾ.ರಾಜ್ ನೇತ್ರ ಸಂಗ್ರಹ ಕೇಂದ್ರಕ್ಕೆ ದಾನ ಮಾಡುವ ಮೂಲಕ ಕುಟುಂಬ ಸದಸ್ಯರು ಆತನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಆರ್ಎಸ್ಎಸ್ ಜಿಲ್ಲಾ ಕಛೇರಿ ನಿರ್ಮಾಣಕ್ಕೆ ಶಂಕುಷ್ಥಾಪನೆ:
ಸ್ವಯಂ ಸೇವಕ ವರದರಾಜು ಸ್ಮರಣಾರ್ಥ, ಭೂಮಿಯನ್ನು ಕೊಡುಗೆಯಾಗಿ ನೀಡಿದ ವರದರಾಜು ತಂದೆ ರಾಮಚಂದ್ರಪ್ಪ ಹಾಗೂ ಸಂಘದ ಹಲವಾರು ಪ್ರಮುಖರೊಂದಿಗೆ ಎಂಎಚ್ ಕಾಲೇಜು ಸಮೀಪ ರಾಮನಗರ ಜಿಲ್ಲಾ ಆರ್ಎಸ್ಎಸ್ ಜಿಲ್ಲಾ ಕಛೇರಿ ನಿರ್ಮಾಣಕ್ಕೆ ಶಂಕುಷ್ಥಾಪನೆ ನೆರವೇರಿಸಿದರು.
ಕಳೆದ 97 ವರ್ಷಗಳಿಂದ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉದ್ದೇಶವನ್ನು ಮೆಚ್ಚಿ ಬೆಂಬಲ ನೀಡುವವರ ಸಂಖ್ಯೆ ಹೆಚ್ಚಿದೆ ಎಂಬುದಕ್ಕೆ ಸ್ವಯಂ ಸೇವಕ ವರದರಾಜು ತಂದೆ ರಾಮಚಂದ್ರಪ್ಪ ಸಾಕ್ಷಿಯಾಗಿದ್ದಾರೆ ಎಂದು ಆರ್ಎಸ್ಎಸ್ ದಕ್ಷಿಣ ಕ್ಷೇತ್ರ ಕಾರ್ಯವಾಹಕ ಎನ್. ತಿಪ್ಪೇಸ್ವಾಮಿ ಶ್ಲಾಘಿಸಿದ್ದಾರೆ.
ನಗರದ ಎಂಎಚ್ ಕಾಲೇಜು ಸಮೀಪ ಆರ್ಎಸ್ಎಸ್ ಜಿಲ್ಲಾ ಕಾರ್ಯಾಲಯ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ತಿಪ್ಪೇಸ್ವಾಮಿ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಕೆ.ಟಿ. ಥಾಮಸ್ ಅವರು ಸೇನೆಯ ನಂತರ ದೇಶವನ್ನು ಸುರಕ್ಷಿತವಾಗಿಡುವ ಕೆಲಸವನ್ನು ಆರ್‌ಎಸ್‌ಎಸ್ ಮಾಡುತ್ತಿದೆ ಎಂದು ಹೇಳಿದರು.

40ಕ್ಕೂ ಹೆಚ್ಚು ವಿಭಾಗಗಳಲ್ಲಿ ಆರ್ಎಸ್ಎಸ್ ಕಾರ್ಯ:
ಆರ್‌ಎಸ್‌ಎಸ್ ದೇಶದಲ್ಲಿ ವಿವಿಧ ಭಾಗಗಳಲ್ಲಿ 40ಕ್ಕೂ ಹೆಚ್ಚು ವಿಭಾಗಗಳಲ್ಲಿ ಕೆಲಸ ಮಾಡುತ್ತಿದೆ. ಯಾರೂ ಸಹ ಸನಿಹಕ್ಕೆ ಹೋಗಲು ಸಾಧ್ಯವಾಗದವರ ಬಳಿಗೆ ತೆರಳಿ ಅಭಿವೃದ್ಧಿಗೆ ಶ್ರಮಿಸುತ್ತಿದೆ. ದೇಶ ವಾಸಿಗಳಿಗೆ ಶಿಕ್ಷಣ, ಸಾಹಿತ್ಯ, ಸಾಮಾಜಿಕ ನೆರವು ಹೀಗೆ ಎಲ್ಲವನ್ನೂ ಒದಗಿಸುತ್ತಿದೆ. ಇದರ ಪರಿಣಾಮ ಇಂದು ಆರ್‌ಎಸ್‌ಎಸ್‌ನ ಧೈಯೋದ್ದೇಶಗಳನ್ನು ಮೆಚ್ಚಿ ಈ ಸಂಘಟನೆಗೆ ಬೆಂಬಲ ನೀಡುವವರ ಸಂಖ್ಯೆಯೂ ಹೆಚ್ಚಿದೆ ಎಂದರು.
ಇತ್ತೀಚೆಗೆ ಗುಜರಾತ್‌ನಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಪ್ರಕಟಗೊಂಡ ವರದಿಯಂತೆ ದೇಶದಲ್ಲಿ ಕೊರೊನಾ ಸಂದರ್ಭದಲ್ಲಿಯೂ 6500 ಶಾಖೆ ಆರಂಭವಾಗಿವೆ. ದೇಶದಲ್ಲಿ ಸುಮಾರು 60 ಸಾವಿರ ಶಾಖೆಗಳಿವೆ. ಇದಕ್ಕೆ ಆರ್‌ಎಸ್‌ಎಸ್ ವಿಚಾರಧಾರೆಯನ್ನು ಎಲ್ಲ ವರ್ಗದವರು ಇಂದು ಮೆಚ್ಚುತ್ತಿರುವುದೇ ಕಾರಣವಾಗಿದೆ ಎಂದರು.
ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯ ಕಾರ್ಯವಾಹಕ ಜಯಪ್ರಕಾಶ್, ಕಾರ್ಯಾಲಯ ನಿರ್ಮಾಣಕ್ಕೆ ಭೂಮಿಯನ್ನು ಕೊಡುಗೆ ನೀಡಿದ ರಾಮಚಂದ್ರಪ್ಪ, ಯೋಜನಾ ಪ್ರಾಧಿಕಾರಗಳ ಅಧ್ಯಕ್ಷರಾದ ಮುರಳೀಧರ್, ಜಗನ್ನಾಥ್, ಮಲವೇಗೌಡ ಹಾಗೂ ಹಲವರು ಭಾಗವಹಿಸಿದ್ದರು.

English summary
Father who donated 4 Crore rupees site to build RSS office in memory of his dead son in Ramnagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X