• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೇಕೆದಾಟು ಅಣೆಕಟ್ಟು ಯೋಜನೆಗಾಗಿ ರೈತರ ಪಾದಯಾತ್ರೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜುಲೈ 15: ಮೇಕೆದಾಟು ಅಣೆಕಟ್ಟು ಯೋಜನೆ ಅನುಷ್ಠಾನಕ್ಕೆ ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳು ವಿರೋಧ ವ್ಯಕ್ತಪಡಿಸಿದ ಬೆನ್ನಲೇ ಮೇಕೆದಾಟು ಹೋರಾಟವನ್ನು ತೀವ್ರಗೊಳಿಸಲು ಹೋರಾಟಗಾರು ಮುಂದಾಗಿದ್ದು, ಈ ನಿಟ್ಟಿನಲ್ಲಿ ಆರು ಜಿಲ್ಲೆಯ ರೈತರು ಸೇರಿ "ಕರ್ನಾಟಕ ರಾಜ್ಯ ಮೇಕೆದಾಟು ಹೋರಾಟ ಸಮಿತಿ' ಅಸ್ತಿತ್ವಕ್ಕೆ ಬಂದಿದೆ.

ಮೇಕೆದಾಟು ಯೋಜನೆ ವ್ಯಾಪ್ತಿಯ ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಜಿಲ್ಲೆಗಳ ರೈತ ಮುಖಂಡರು ಗುರುವಾರ ರಾಮನಗರದಲ್ಲಿ ಸಭೆ ಸೇರಿ ಹೋರಾಟ ತೀವ್ರಗೊಳಿಸುವ ನಿಟ್ಟಿನಲ್ಲಿ ವಿಧಾನಸೌಧ ಚಲೋ ಪಾದಯಾತ್ರೆ ಘೋಷಣೆ ಮಾಡಿದ್ದಾರೆ.

ಮೇಕೆದಾಟು ಯೋಜನೆ ಶೀಘ್ರವಾಗಿ
ರಾಮನಗರದ ಎಪಿಎಂಸಿ ಮಾರುಕಟ್ಟೆಯ ರೈತ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು, ಆಗಸ್ಟ್‌ 3 ರಿಂದ 7 ರವರೆಗೆ ರೈತರಿಂದ ಬೃಹತ್ ಪಾದಯಾತ್ರೆ ಮಾಡಲಾಗುವುದು, ಕನಕಪುರದ ಮೇಕೆದಾಟಿನಿಂದ ಬೆಂಗಳೂರಿನ ವಿಧಾನಸೌಧವರೆಗೆ ಪಾದಯಾತ್ರೆ ನಡೆಸಲಾಗುತ್ತೆ, 5 ದಿನಗಳ ಕಾಲ ಪಾದಯಾತ್ರೆ ನಡೆಸಲು ರೈತರು ಸಭೆಯಲ್ಲಿ ತೀರ್ಮಾನ ಮಾಡಿದರು.

"ಪಾದಯಾತ್ರೆಯಲ್ಲಿ ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಜಿಲ್ಲೆಗಳಿಂದ ರೈತ ಮುಖಂಡರು, ಕನ್ನಡಪರ ಸಂಘಟನೆಯ ಕಾರ್ಯಕರ್ತರು ಸೇರಿದಂತೆ ಸುಮಾರು 10 ಸಾವಿರ ಮಂದಿ ಭಾಗವಹಿಸಲಿದ್ದಾರೆ,'' ಎಂದು ಹೋರಾಟ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ತಿಳಿಸಿದರು.

Ramanagara: Farmers Protest On Foot To Bengaluru For Mekedatu Dam Project
   Rahul Gandhi's Tweet, ಭಾರತ ಚೀನಾ ಗಡಿಯಲ್ಲಿ ಏನು ನಡೆಯುತ್ತಿದೆ | Oneindia Kannada

   "ಈಗಾಗಲೇ ಮೇಕೆದಾಟು ಮಹತ್ತರ ಯೋಜನೆಗೆ ಸರ್ವೋಚ್ಛ ನ್ಯಾಯಾಲಯದ ಹಸಿರು ಪೀಠ ನೀಡಿರುವ ಅನುಮತಿ ಹಾಗೂ ಕಾವೇರಿ ಜಲ ಆಯೋಗದ ಸಹಮತವೂ ಇರುವ ಕಾರಣ ರಾಜ್ಯ ಸರ್ಕಾರ ಕೇವಲ ಮಾತುಕತೆ, ಪತ್ರ ವ್ಯವಹಾರವೆಂದು ಕಾಲಹರಣ ಮಾಡುವ ಬದಲಾಗಿ ಶೀಘ್ರವಾಗಿ ಅಣೆಕಟ್ಟು ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ ಮಾಡಿ ಅಡಿಗಲ್ಲು ಇಡಬೇಕು,'' ಎಂದು ರೈತ ಮುಖಂಡರು ಸರ್ಕಾರವನ್ನು ಒತ್ತಾಯಿಸಿದರು.

   English summary
   For implementing the Mekedatu Dam Project, Karnataka State Mekedatu Fighters Committee has been formed by six district farmers.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X