ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರ ಡಿಸಿ ಹೆಸರಲ್ಲಿ ನಕಲಿ ಇಮೇಲ್ ಸಂದೇಶ: ಎಚ್ಚರಿಕೆ ನೀಡಿದ ಡಿಸಿ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ನವೆಂಬರ್ 23: ರಾಮನಗರ ಜಿಲ್ಲಾಧಿಕಾರಿ ಹೆಸರಿನಲ್ಲಿ ಮತ್ತೊಂದು ನಕಲಿ ಐಡಿಯಿಂದ ಇ-ಮೇಲ್ ಕಳುಹಿಸುತ್ತಿರುವುದು ಬೆಳಕಿಗೆ ಬಂದಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಅವರು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಇಮೇಲ್ ಖಾತೆ ತೆರೆದು ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳಿಗೆ ಸೋಮವಾರ (ನ.23) ತಪ್ಪು ಸಂದೇಶ ಬರುವಂತಹ ಇಮೇಲ್ ಕಳುಹಿಸಿರುವುದು ಅವರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಂಥವರ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೈಸೂರಿನಲ್ಲಿ ನಕಲಿ ಪತ್ರಕರ್ತನ ವಿರುದ್ಧ ಎಫ್‌ಐಆರ್ಮೈಸೂರಿನಲ್ಲಿ ನಕಲಿ ಪತ್ರಕರ್ತನ ವಿರುದ್ಧ ಎಫ್‌ಐಆರ್

ಅಧಿಕೃತ ಐಡಿ: ಜಿಲ್ಲಾಧಿಕಾರಿಯವರ ಅಧಿಕೃತ ಇಮೇಲ್ ಐಡಿ ಮೂಲಕ ಇ-ಮೇಲ್ ಕಳಿಸಲಾಗುತ್ತದೆ. ಸದರಿ ಐಡಿಯಿಂದ ಬರುವ ಸಂದೇಶಗಳನ್ನು ಹೊರತುಪಡಿಸಿ ಇನ್ನಾವುದೇ ಐಡಿಗಳಿಂದ ಬರುವಂತಹ ಸಂದೇಶ/ಮಾಹಿತಿಗಳನ್ನು ಪರಿಗಣಿಸಬಾರದು ಎಂದು ಜಿಲ್ಲಾಧಿಕಾರಿಗಳು ಕೋರಿದ್ದಾರೆ.

Ramanagar: Fake Email In The Name Of DC Archana

ಅಧಿಕೃತ ಇ-ಮೇಲ್ ಐಡಿ ಹೊರತುಪಡಿಸಿ ಇನ್ನಾವುದೇ ನಕಲಿ ಅಥವಾ ಅನಧಿಕೃತ ಐಡಿಗಳಿಂದ ಸಂದೇಶ ಇಲ್ಲವೇ ಮಾಹಿತಿ ಬಂದಲ್ಲಿ ಕೂಡಲೇ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಹೆಸರು ಬಳಸಿಕೊಂಡು ಹೊಸದಾಗಿ ಮತ್ತೊಂದು ನಕಲಿ ಇ-ಮೇಲ್ ಖಾತೆ ತೆರೆಯುವುದು ಇಲ್ಲವೇ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶಗಳನ್ನು ರವಾನಿಸುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

English summary
Ramanagar dc archana warned of legal action for fake account emails in her name
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X