• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚನ್ನಪಟ್ಟಣ; ಕಾಡಾನೆ ದಾಳಿಗೆ ಮಹಿಳೆ ಬಲಿ, ಪರಿಹಾರಕ್ಕೆ ಜನರ ಪಟ್ಟು

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಆಗಸ್ಟ್‌, 09: ಜಿಲ್ಲೆಯಲ್ಲಿ ಮಾನವ ಮತ್ತು ಕಾಡುಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚಾಗಿದೆ. ಇತ್ತೀಚೆಗೆ ಸುರಿದ ಮಹಾಮಳೆಗೆ ಜಿಲ್ಲೆಯ ರೈತರು ಹೈರಾಣಗಿದ್ದರು. ಮಳೆ ಆರ್ಭಟದಿಂದ ನೊಂದ ರೈತರು ಚೇತರಿಸಿಕೊಳ್ಳುವ ಮುನ್ನವೇ ಕಾಡಾನೆಗಳ ಹಾವಳಿ ಹೆಚ್ಚಾಗಿದೆ.

ಚನ್ನಪಟ್ಟಣ ತಾಲೂಕಿನ ಚೆನ್ನಿಗನಹೊಸಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ 55 ವರ್ಷದ ಚನ್ನಮ್ಮ ಮೃತಪಟ್ಟಿದ್ದಾರೆ. ಮೃತ ವೃದ್ದೆಯನ್ನು ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನ ಅರ್ಚಕರಾಗಿರುವ ಚನ್ನಪ್ಪನವರ ಪತ್ನಿ ಎಂದು ಗುರುತಿಸಲಾಗಿದೆ.

ರಾಮನಗರ: ಮಳೆ, ನೆರೆ ಪರಿಹಾರ ವಿತರಿಸಿದ ಅಶ್ವಥ್ ನಾರಾಯಣರಾಮನಗರ: ಮಳೆ, ನೆರೆ ಪರಿಹಾರ ವಿತರಿಸಿದ ಅಶ್ವಥ್ ನಾರಾಯಣ

ಮೃತ ಚನ್ನಮ್ಮ ಹಾಲು ಕರೆಯಲು ಎಂದಿನಂತೆ ಬೆಳಗಿನ ಜಾವ ತೋಟದ ಮನೆ ಬಳಿ ಹೋಗಿದ್ದರು. ಈ ವೇಳೆ ಏಕಾಏಕಿ ಎದುರಾದ ಕಾಡನೆ ಕಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೂ ಚನ್ನಮ್ಮನವರನ್ನು ಬೆನ್ನತ್ತಿದ ಕಾಡಾನೆ ತುಳಿದು ಕೊಂದು ಹಾಕಿದೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾಧಿಕಾರಿ,‌ ಹಿರಿಯ ಅರಣ್ಯಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

 ರೈತರು ಬೆಳೆದ ಬೆಳೆಗಳು ನೆಲಸಮ

ರೈತರು ಬೆಳೆದ ಬೆಳೆಗಳು ನೆಲಸಮ

ಕೆಲ ವರ್ಷಗಳಿಂದ ಕಾವೇರಿ ವನ್ಯಜೀವಿ ವಲಯದಿಂದ ಸುಮಾರು 25ಕ್ಕೂ ಹೆಚ್ಚಿನ ಸಂಖ್ಯೆಯ ಕಾಡನೆಗಳು ವಲಸೆ ಬಂದಿವೆ. ಐದಾರು ಗುಂಪುಗಳಾಗಿ ಜಿಲ್ಲೆಯಲ್ಲಿ‌ ಹಲವೆಡೆ ಶಾಶ್ವತವಾಗಿ ನೆಲೆಯೂರಿವೆ. ನಿರಂತರವಾಗಿ ರೈತರ ಜಮೀನುಗಳ ಮೇಲೆ ದಾಳಿ ಮಾಡಿ ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿವೆ. ಆನೆಗಳ ಉಪಟಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮಾಡಿದ ಪ್ರಯತ್ನ ಸಫಲವಾಗುತ್ತಿಲ್ಲ.

ಒಂದು ಭಾಗದಿಂದ ಆನೆಗಳನ್ನು ಓಡಿಸಿದರೆ ಮತ್ತೊಂದು ಕಡೆಯಿಂದ ದಾಗುಂಡಿ ಇಡುತ್ತಿವೆ. ಜಿಲ್ಲೆಯ ತೆಂಗಿನಕಲ್ಲು ಅರಣ್ಯ ಪ್ರದೇಶ, ಹಾಗೂ ಕಬ್ಬಾಳು ಅರಣ್ಯ ಪ್ರದೇಶಗಳಲ್ಲಿ ಬಿಡು ಬಿಟ್ಟಿರುವ ಕಾಡನೆಗಳು ಆಹಾರ ಅರಸಿ ರೈತರ ಜಮೀನಿಗೆ ಲಗ್ಗೆ ಇಡುತ್ತಿವೆ. ರೈತರು ಬೆಳೆದಿರುವ ಬೆಳೆಗಳನ್ನು ತಿನ್ನುವುದಲ್ಲದೇ, ತುಳಿದು ಹಾಳು ಮಾಡುತ್ತಿವೆ. ಇದರ ಜೊತೆಗೆ ಕೆಲವೊಮ್ಮೆ ಜಮೀನಿಗೆ ಹೋದ ರೈತರ ಮೇಲೆ ದಾಳಿ ದಾಳಿ ಮಾಡುತ್ತಿವೆ.

 ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ

ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ

ಆನೆ ದಾಳಿಗೆ ಚನ್ನಮ್ಮ ಬಲಿಯಾದ ಘಟನೆಯಿಂದ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಈ ಭಾಗದಲ್ಲಿ ಆನೆದಾಳಿಗೆ ಸಿಲುಕಿ ರೈತರು ಬಲಿಯಾಗುತ್ತಿರುವ ಪ್ರಕರಣಗಳು ನಡೆಯುತ್ತಲೇ ಇವೆ. ಆನೆ ಉಪಟಳ ತಪ್ಪಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ಆರೋಪಿಸಿದರು.

ಅಲ್ಲದೇ ಕಾಡನೆ ದಾಳಿಗೆ ಹೆದರಿ ಬಹುತೇಕ ರೈತರು ವ್ಯವಸಾಯ ಮಾಡುವುದನ್ನೇ ಕೈ ಬಿಟ್ಟಿದ್ದಾರೆ. ಕಾಡನೆಗಳು ಗ್ರಾಮದ ಸಮೀಪವೇ ಬಂದು ಜನ, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಹಾಗಾಗಿ ಆನೆ ಉಪಟಳಕ್ಕೆ ಶಾಶ್ವತ ಪರಿಹಾರ ನೀಡಬೇಕು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು, ಸ್ಥಳದಲ್ಲಿ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದರು.

 ತಾಯಿಯನ್ನು ನೆನೆದು ರಾಜೇಶ್ ಕಣ್ಣೀರು

ತಾಯಿಯನ್ನು ನೆನೆದು ರಾಜೇಶ್ ಕಣ್ಣೀರು

ಕಾಡು ಪ್ರಾಣಿಗಳು ಸತ್ತ ತಕ್ಷಣ ಓಡೋಡಿ ಬರುವ ಅರಣ್ಯ ಅಧಿಕಾರಿಗಳು ರೈತರ ಪ್ರಾಣ ಹೋದಾಗ ಮಾತ್ರ ಬರುವುದಿಲ್ಲ‌. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ತಾಯಿಯನ್ನು ಕಳೆದುಕೊಂಡಿದ್ದೇವೆ. ಮುಂದೆ ಇಂತಹ ಘಟನೆಗಳು ಜರುಗಬಾರದು ಎಂದು ಹೇಳುತ್ತಾ ಮೃತ ಚೆಮ್ನಮ್ಮನವರ ಪುತ್ರ ರಾಜೇಶ್ ಕಣ್ಣೀರಿಟ್ಟರು.

ಪ್ರತಿಭಟನಾ ಕಾವು ಹೆಚ್ಚುತ್ತಿದ್ದಂತೆಯೇ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ್, ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್, ಎಸ್‌ಪಿ ಸಂತೋಷ್ ಬಾಬು, ಡಿಎಫ್ಓ ದೇವರಾಜ್ ಭೇಟಿ ನೀಡಿ ಚೆನ್ನಮ್ಮ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಬಳಿಕ ಗ್ರಾಮಸ್ಥರ ಮನವೊಲಿಸಿದ ಅಧಿಕಾರಿಗಳು ಮರಣೋತ್ತರ ಪರೀಕ್ಷೆಗೆ ಮೃತದೇಹ ರವಾನೆ ಮಾಡಿದರು.
‌‌‌‌

 ಹೆಚ್ಚಿನ ಪರಿಹಾರ ಕೊಡಿಸುವ ಭರವಸೆ

ಹೆಚ್ಚಿನ ಪರಿಹಾರ ಕೊಡಿಸುವ ಭರವಸೆ

ಅರಣ್ಯ ಇಲಾಖೆಯಿಂದ ಮೃತ ಮಹಿಳೆ ಕುಟುಂಬಕ್ಕೆ 7.5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿ, ಹೆಚ್ಚಿನ ಪರಿಹಾರಕ್ಕೆ ಶಿಫಾರಸ್ಸು ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಸರ್ಕಾರ ಈಗಾಗಲೇ ಆನೆ ಸೆರೆಗೆ ಅನುಮತಿ ನೀಡಿದ್ದು, ನಾಳೆಯಿಂದಲೇ ಆನೆಗಳನ್ನು ಸೆರೆಯಿಡಿಯುವ ಕಾರ್ಯಾಚರಣೆ ಪ್ರಾರಂಭಿಸಿಸುವುದಾಗಿ ಡಿಎಫ್ಓ ದೇವರಾಜ್ ತಿಳಿಸಿದರು.

ಈ ವೇಳೆ ಮಾತನಾಡಿದ ಸಿ. ಪಿ. ಯೋಗೇಶ್ವರ್, "ಜನರ ಸಂಕಷ್ಟ ನಮಗೆ ಅರ್ಥ ಆಗುತ್ತದೆ. ಹಿಂದೆಯೂ ಈ ಬಗ್ಗೆ ಅರಣ್ಯ ಅಧಿಕಾರಿಗಳ ಜೊತೆ ನಾನು ಚರ್ಚೆ ಮಾಡಿದ್ದೆ. ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯಲ್ಲಿ ಇನ್ನೂ 900 ಮೀಟರ್‌ಗಳು ಮಾತ್ರ ತಂತಿಬೇಲಿ ಅಳವಡಿಕೆ ಮಾಡಬೇಕಿದೆ. ಅದು ಪೂರ್ಣಗೊಂಡರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ" ಎಂದರು.

 ರೈಲು ಕಂಬಿ‌ ಬೇಲಿ ಕಾಮಗಾರಿ ಪರಿಶೀಲನೆ

ರೈಲು ಕಂಬಿ‌ ಬೇಲಿ ಕಾಮಗಾರಿ ಪರಿಶೀಲನೆ

ಜಿಲ್ಲೆಯಲ್ಲಿ ಆನೆಗಳ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿ ಕಳೆದ ವಾರ ಆಗಸ್ಟ್‌ 4ರಂದು ಸಂಗಮ ಪ್ರವಾಸಿ ಮಂದಿರದಲ್ಲಿ ಹಿರಿಯ ಅರಣ್ಯಾಧಿಕಾರಿಗಳ ಸಭೆ ನಡೆಸಿದ್ದರು. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಆನೆ ದಾಳಿ ತಡೆಗೆ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಕಾವೇರಿ ವನ್ಯಜೀವಿ ವಲಯದಿಂದ ಆನೆಗಳ ವಲಸೆ ತಡೆಗಟ್ಟುವ ನಿಟ್ಟಿನಲ್ಲಿ ರೈಲು ಕಂಬಿ ಬೇಲಿ ನಿರ್ಮಾಣ ಕಾಮಾಗಾರಿ ಪರಿಶೀಲನೆ ನಡೆಸಿದರು. ಹಾಗೂ ಸಾತನೂರು ಹೋಬಳಿಯ ದುಂತೂರು ಗ್ರಾಮದ ಬಳಿ ರೈಲು ಕಂಬಿ ಬೇಲಿ ನಿರ್ಮಾಣಕ್ಕೆ ಕೆಲವರು ಅಡ್ಡಿ ಮಾಡಿದ್ದರು. ಸ್ಥಳಕ್ಕೆ ಕನಕಪುರ ತಹಶೀಲ್ದಾರ್ ಅವರೊಂದಿಗೆ ಭೇಟಿ ನೀಡಿ ಶೀಘ್ರವಾಗಿ ಜಮೀನು ವಿವಾದ ಬಗೆಹರಿಸುವಂತೆ ತಾಕೀತು ಮಾಡಿದರು.

"ನಾನು ಆನೆ ದಾಳಿಗೆ ಶಾಶ್ವತ ಪರಿಹಾರ ನೀಡಲು ರೈಲು ಕಂಬಿ ಬೇಲಿ ನಿರ್ಮಾಣಕ್ಕೆ ಆದೇಶ ಮಾಡಿದ್ದೆ. ಅದರೆ ಕೆಲವರು ಜಮೀನು ಖ್ಯಾತೆ ತೆಗೆದ ಹಿನ್ನೆಲೆಯಲ್ಲಿ ಕೇವಲ 900 ಮೀಟರ್ ಕೆಲಸ ಬಾಕಿ ಉಳಿದಿದೆ. ಕಾಮಗಾರಿಗೆ ಇರುವ ತೊಡಕುಗಳನ್ನು ಪರಿಹರಿಸುವಂತೆ ಕನಕಪುರ ತಹಶೀಲ್ದಾರ್ ವಿಶ್ವನಾಥ್‌ ಅವರಿಗೆ ಸೂಚನೆ ನೀಡಿದ್ದೇನೆ. ಶೀಘ್ರವೇ ಕಾಮಗಾರಿ ಮುಗಿದು ಜಿಲ್ಲೆಯಲ್ಲಿ ಕಾಡಾನೆ ಉಪಟಳಕ್ಕೆ ಕಡಿವಾಣ ಬೀಳಿತ್ತದೆ" ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದರು.

Recommended Video

   Modi Declared Total Income and Assets: ಕಳೆದ ವರ್ಷಕ್ಕಿಂತ 84 ಲಕ್ಷ ಆಸ್ತಿ ಕಳೆದುಕೊಂಡ ಮೋದಿ *India |OneIndia
   English summary
   55 year old woman Channamma killed after elephant attack in Chenniganahosahalli village, of Channapatna, Ramanagara. Villagers upset with forest department.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X