ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತದಾರರಿಗೆ ಹಂಚಲು ತಂದಿದ್ದ ಸೀರೆ, ಹಣ ವಶ

By ಬಿ.ಎಂ. ಲವಕುಮಾರ್
|
Google Oneindia Kannada News

ಮಾಗಡಿ: ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷವೊಡ್ಡಲು ತಂದಿದ್ದ ಹಣ ಮತ್ತು ಸೀರೆಯನ್ನು ಚುನಾವಣಾಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಉಡುವೆಗೆರೆಯ ಬಸವೇಶ್ವರ ಕಾಲೋನಿಯಲ್ಲಿ ಶುಕ್ರವಾರ ನಡೆದಿದೆ.

ಉಡುವೆಗೆರೆಯ ಬಸವೇಶ್ವರ ಕಾಲೋನಿಯ ಪರಮಶಿವಯ್ಯ ಮನೆಯಲ್ಲಿ 58 ಹಾಗೂ ಶಿವಲಿಂಗಯ್ಯ ಎಂಬುವವರ ಮನೆಯಲ್ಲಿ 50 ಸೀರೆಗಳು ಪತ್ತೆಯಾಗಿದ್ದು, ಇದು ಮತದಾರರಿಗೆ ಹಂಚಲು ತಂದಿದ್ದು ಎಂದು ತಿಳಿದು ಬಂದಿದೆ. ಯಾವ ಪಕ್ಷಕ್ಕೆ ಸೇರಿದ್ದು ಎಂಬುದನ್ನು ಚುನಾವಣಾಧಿಕಾರಿಗಳು ಖಚಿತ ಪಡಿಸಿಲ್ಲ.

ರಾಮನಗರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ 2 ಲಕ್ಷಕ್ಕಿಂತ ಅಧಿಕ ಮತದಾರರುರಾಮನಗರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ 2 ಲಕ್ಷಕ್ಕಿಂತ ಅಧಿಕ ಮತದಾರರು

ಚುನಾವಣಾಧಿಕಾರಿಗಳು ದಾಳಿ ನಡೆಸಿದ ವೇಳೆ ಬೈಕ್‍ನಲ್ಲಿ 1 ಲಕ್ಷದ 48 ಸಾವಿರ ರೂಪಾಯಿ ಹಣವನ್ನು ರಸ್ತೆ ಬದಿಯಲ್ಲಿ ಎಸೆದು ಬೈಕ್ ಸವಾರ ಪರಾರಿಯಾಗಿದ್ದಾನೆ.

election officers seized sarees, money from two houses

ಈ ಹಣವು ಮತದಾರರಿಗೆ ಹಂಚಲು ತರಲಾಗಿತ್ತು ಎಂಬುದು ತಿಳಿದು ಬಂದಿದೆ. ಯಾವ ಪಕ್ಷಕ್ಕೆ ಸೇರಿದೆ ಎಂಬುದು ಗೊತ್ತಾಗಿಲ್ಲ ಎಂದು ಆರ್‍ಒ ಕೃಷ್ಣಮೂರ್ತಿ ಹೇಳಿದ್ದಾರೆ.

ರಾಮನಗರ ಮತಗಟ್ಟೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ರಾಮನಗರ ಮತಗಟ್ಟೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್

election officers seized sarees, money from two houses

ಗ್ರಾಮಸ್ಥರು ನೀಡಿದ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಬೆಳಗ್ಗೆ 10.30ರ ಸಮಯದಲ್ಲಿ ಚುನಾವಣೆ ನೀತಿ ಸಂಹಿತೆ ತಂಡದ ಅಶೋಕ್, ಅಬಕಾರಿ ವೃತ್ತ ನಿರೀಕ್ಷಕ ಸುಬ್ರಹ್ಮಣ್ಯ, ಮಾಗಡಿ ಎಎಸ್‍ಐ ಮರಿಸ್ವಾಮಿ, ಪಿಸಿ ನರೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು. ಈ ವೇಳೆ ಸ್ಥಳದಲ್ಲಿ ಸೀರೆ ಮತ್ತು ಹಣ ಪತ್ತೆಯಾಗಿದೆ. ಹಣ ಮತ್ತು ಸೀರೆಯನ್ನು ವಶಪಡಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

English summary
karnataka assembly elections 2018: Election officers had seized sarees and money, which are brought to distribute to voters in Uduvegere of Magadi talluq. Total 108 sarees and 1.48 lakh cash distraint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X