ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಚ್ಡಿಕೆ ಮಣಿಸಲು ಡಿಕೆಶಿ ಬೂಟು ನೆಕ್ಕಿದ್ದ ಯೋಗೇಶ್ವರ್: ಏನಿದು ಗಂಭೀರ ಆರೋಪ!

|
Google Oneindia Kannada News

ರಾಮನಗರ, ಮಾರ್ಚ್ 1: ಸಚಿವ ಸಿ.ಪಿ.ಯೋಗೇಶ್ವರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವಿನ 'ಚನ್ನಪಟ್ಟಣ ಪಾಲಿಟಿಕ್ಸ್' ಗೆ ಎರಡೂ ಪಕ್ಷಗಳ ಇತರ ನಾಯಕರೂ ಈಗ ಧ್ವನಿಗೂಡಿಸಲು ಆರಂಭಿಸಿದ್ದಾರೆ.

"ನನ್ನ ವಿರುದ್ದ ಏಕವಚನದಲ್ಲಿ ಮಾತನಾಡುತ್ತಿದ್ದೀಯಾ, ನಿನಗಿಂತ ಚೆನ್ನಾಗಿ ನಾನೂ ಮಾತನಾಡಬಲ್ಲೆ. ಇಸ್ಪೀಟ್ ದುಡ್ಡಲ್ಲಿ ನೀನು ಸಚಿವನಾಗಿದ್ದೀಯಾ ಅಷ್ಟೇ..ನನ್ನ ಮುಂದೆ ನೀನು ಇನ್ನೂ ಬಚ್ಚಾ"ಎಂದು ಕುಮಾರಸ್ವಾಮಿ, ಸಚಿವ ಯೋಗೇಶ್ವರ್ ಹೇಳಿಕೆಗೆ ತಿರುಗೇಟು ನೀಡಿದ್ದರು.

ಏರು ಧ್ವನಿಯಲ್ಲಿ ಕೆಮ್ಮಿಕೊಂಡು ಭಾಷಣ ಮಾಡಿದ್ನಲ್ಲಾ, ಅವನ ಯೋಗ್ಯತೆ ನನಗೆ ಗೊತ್ತಿಲ್ಲವೇ: ಎಚ್ಡಿಕೆ ವಾಕ್ ಪ್ರಹಾರಏರು ಧ್ವನಿಯಲ್ಲಿ ಕೆಮ್ಮಿಕೊಂಡು ಭಾಷಣ ಮಾಡಿದ್ನಲ್ಲಾ, ಅವನ ಯೋಗ್ಯತೆ ನನಗೆ ಗೊತ್ತಿಲ್ಲವೇ: ಎಚ್ಡಿಕೆ ವಾಕ್ ಪ್ರಹಾರ

ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ್ದ ಸಿಪಿವೈ, "ಸಿಎಂ ಆಗಿದ್ದಾಗ ಬೆಳಗ್ಗೆ ಆರು ಗಂಟೆಗೆ ಹೋದರೂ, ಮನೆಗೆ ಯಾರನ್ನೂ ಸೇರಿಸುತ್ತಿಲ್ಲ. ಈಗ, ಚನ್ನಪಟ್ಟಣಕ್ಕೆ ಬರುತ್ತಲೇ ಇದ್ದಾನೆ. ಅವನಿಗೆ ಗೊತ್ತಾಗಿದೆ, ಕೆಲಸ ಮಾಡಿದರೆ ಮಾತ್ರ ಜನ ಕೈಹಿಡಿಯುವುದು ಎಂದು. ರಾಮನಗರಕ್ಕೆ ಬಂದಾಗ ಅವನು ಕೂಡಾ ಬಚ್ಚನೇ ಆಗಿದ್ದ"ಎಂದು ಸಿಪಿವೈ ಹೇಳಿದ್ದರು.

ರಾಮನಗರ; ಟ್ರಕ್ಕಿಂಗ್ ಮೂಲಕ ತ್ಯಾಜ್ಯ ಸಂಗ್ರಹಿಸಿದ ಸಿಇಓರಾಮನಗರ; ಟ್ರಕ್ಕಿಂಗ್ ಮೂಲಕ ತ್ಯಾಜ್ಯ ಸಂಗ್ರಹಿಸಿದ ಸಿಇಓ

ಇವರ ಈ ಮಾತಿನ ಚಕಮಕಿಗೆ ಜೆಡಿಎಸ್ ಮತ್ತು ಬಿಜೆಪಿಯ ನಾಯಕರೂ ಹೇಳಿಕೆಯನ್ನು ನೀಡಿದ್ದಾರೆ. ಜೆಡಿಎಸ್ ಮುಖಂಡರೊಬ್ಬರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಡಿಕೆಶಿ ಬೂಟು ನೆಕ್ಕಿದ್ದರು ಎನ್ನುವ ಗಂಭೀರ ಹೇಳಿಕೆಯನ್ನು ನೀಡಿದ್ದಾರೆ.

ಜೆಡಿಎಸ್ ಮುಖಂಡ, ಶಾಸಕ ಸಾ.ರಾ.ಮಹೇಶ್

ಜೆಡಿಎಸ್ ಮುಖಂಡ, ಶಾಸಕ ಸಾ.ರಾ.ಮಹೇಶ್

"ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ, ಚನ್ನಪಟ್ಟಣದಲ್ಲಿ 'ಸರ್ವಪಕ್ಷ ಸದಸ್ಯ' @CPYogeeshwara ಬೆಂಬಲಿತ ಅಭ್ಯರ್ಥಿಗಳು ಹೇಳಹೆಸರಿಲ್ಲದೇ ಸೋತಿದ್ದಾರೆ. 80% ಜೆಡಿಎಸ್‌ ಗೆದ್ದಿದೆ.ದಿನೇ ದಿನೇ ಚನ್ನಪಟ್ಟಣ ಕ್ಷೇತ್ರ ದೂರವಾಗುತ್ತಿರುವುದು ನೋಡಲಾಗದೇ ಕ್ಷೇತ್ರ ಕಳೆದುಹೋಗಿರುವ ನೋವು ತಡೆಯಲಾಗದೇ ಯೋಗೇಶ್ವರ್ ಗೆ ಮತಿ ಭ್ರಮಣೆಯಾಗಿದೆ. ಅದಕ್ಕೇ ಈ ಉರಿ ಮಾತು" ಎಂದು ಜೆಡಿಎಸ್ ಮುಖಂಡ, ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.

ಜೆಡಿಎಸ್ ಮುಖಂಡ ಟಿ.ಎ.ಶರವಣ ವ್ಯಂಗ್ಯ

ಜೆಡಿಎಸ್ ಮುಖಂಡ ಟಿ.ಎ.ಶರವಣ ವ್ಯಂಗ್ಯ

"ಅವನೊಬ್ಬ ಬಚ್ಚಾ... ಯೋಗೇಶ್ವರ್‌ ಕುರಿತ ಕುಮಾರಸ್ವಾಮಿ ಅಕ್ಷರಶಃ ನಿಜ. ಯೋಗೇಶ್ವರ್‌ ರಾಜಕೀಯ ಪ್ರಬುದ್ಧನಲ್ಲ. ಆತನ ಮನಸ್ಸು ಮಂಗನಂತೆ ಚಂಚಲ. ಹೀಗಾಗಿಯೇ ಊರಲ್ಲಿರುವ ಪಕ್ಷಗಳನ್ನೆಲ್ಲ ಸುತ್ತಿ ಬಂದಿದ್ದಾನೆ. ಈಗ ಬಿಜೆಪಿಯಲ್ಲಿ ಕುಳಿತು ಸಿದ್ಧಾಂತದ ಮಾತಾಡುತ್ತಾನೆ. ಆತನ ಬಾಯಲ್ಲಿ ಸಿದ್ಧಾಂತ ಕೇಳಿ ನಗಲಾರದವರೂ ನಕ್ಕರೆ ಆಶ್ಚರ್ಯವಿಲ್ಲ" ಎಂದು ಜೆಡಿಎಸ್ ಮುಖಂಡ ಟಿ.ಎ.ಶರವಣ ವ್ಯಂಗ್ಯವಾಡಿದ್ದಾರೆ.

ಡಿ.ಕೆ.ಶಿವಕುಮಾರ್ ಅವರ ಬೂಟನ್ನು ಯೋಗೇಶ್ವರ್ ನೆಕ್ಕಿದ್ದ

ಡಿ.ಕೆ.ಶಿವಕುಮಾರ್ ಅವರ ಬೂಟನ್ನು ಯೋಗೇಶ್ವರ್ ನೆಕ್ಕಿದ್ದ

"ಇಸ್ಪೀಟ್‌ ಆಡಿದ ಅನುಭವ ಇದ್ದವರಿಗೇ ಅಲ್ಲವೇ ಜೋಕರ್‌ನ ಮಹತ್ವ ಗೊತ್ತು? ಹಾಗಾಗಿಯೇ ನಿಮ್ಮ ನಾಲಿಗೆ ಮೇಲೆ ಜೋಕರ್‌ಗಳು ನಲಿದಾಡುತ್ತಾರೆ. ಹಿಂದೊಮ್ಮೆ, ಕುಮಾರಸ್ವಾಮಿಯವರನ್ನು ರಾಜಕೀಯವಾಗಿ ಮಣಿಸಲು, ಡಿ.ಕೆ.ಶಿವಕುಮಾರ್ ಅವರ ಬೂಟನ್ನು ಯೋಗೇಶ್ವರ್ ನೆಕ್ಕಿದ್ದ"ಎಂದು ಜೆಡಿಎಸ್ ಮುಖಂಡ ಬೋಜೇಗೌಡ ಟೀಕಿಸಿದ್ದಾರೆ.

Recommended Video

ಕೈ ಕೊಟ್ಟ ಕೊರೊನಾ ವ್ಯಾಕ್ಸಿನ್‌ ಪೋರ್ಟಲ್‌..! ಸರ್ಕಾರದ ಅವ್ಯವಸ್ಥೆಗೆ ಹಿರಿಯನಾಗರಿಕರ ಬೇಸರ | Oneindia Kannada
ಡಿಸಿಎಂ ಡಾ.ಅಶ್ವಥ್ ನಾರಾಯಣ ಹೇಳಿಕೆ

ಡಿಸಿಎಂ ಡಾ.ಅಶ್ವಥ್ ನಾರಾಯಣ ಹೇಳಿಕೆ

"ಕುಮಾರಸ್ವಾಮಿಯವರ ವಿರುದ್ದ ಯೋಗೇಶ್ವರ್ ನೀಡುತ್ತಿರುವ ಹೇಳಿಕೆ ಸರಿಯಾಗಿದೆ, ಇದರಲ್ಲಿ ತಪ್ಪೇನು ಇಲ್ಲ. ಮುಂದಿನ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ದ ಯೋಗೇಶ್ವರ್ ಅಭ್ಯರ್ಥಿ ಮತ್ತು ಚುನಾವಣೆಯಲ್ಲಿ ಅವರನ್ನು ಸೋಲಿಸುತ್ತಾರೆ"ಎಂದು ಡಿಸಿಎಂ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.

English summary
Earlier To Fight Against HD Kumaraswamy, C P Yogeshwar Took Help Of D K Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X