ಬಿಜೆಪಿಗೆ ಚುನಾವಣೆ ಬಂದಾಗ ಹನುಮಾನ ಚಾಲೀಸಾ ನೆನಪಾಗಿದೆ: ಡಿ.ಕೆ ಸುರೇಶ್
ರಾಮನಗರ, ಮೇ.9: ರಾಜ್ಯದಲ್ಲಿ ಹನುಮಾನ್ ಚಾಲೀಸಾ ವಿಚಾರ ಕೇವಲ ಚುನಾವಣೆ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರು ಜೊತೆಗೆ ಅದರ ಅಂಗ ಸಂಸ್ಥೆಗಳು ಮಾಡುತ್ತಿರುವ ಪಿತೂರಿ ಎಂದು ಕಾಂಗ್ರೆಸ್ ಲೋಕಸಭಾ ಸದಸ್ಯ ಡಿ.ಕೆ ಸುರೇಶ್ ರಾಮನಗರದಲ್ಲಿ ಕಿಡಿಕಾರಿದರು.
ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯನ್ನ ಮುಂದಿಟ್ಟುಕೊಂಡು ಈ ರೀತಿಯ ಗೊಂದಲಮಯ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡಿದರು.
ರಾಜ್ಯದಲ್ಲಿ ಹನುಮಾನ್ ಚಾಲೀಸಾ ವಿಚಾರ ಕೇವಲ ಚುನಾವಣೆ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರು ಜೊತೆಗೆ ಅದರ ಅಂಗ ಸಂಸ್ಥೆಗಳು ಮಾಡುತ್ತಿರುವ ಪಿತೂರಿ ಎಂದು ಕಾಂಗ್ರೆಸ್ ಲೋಕಸಭಾ ಸದಸ್ಯ ಡಿ.ಕೆ ಸುರೇಶ್ ರಾಮನಗರದಲ್ಲಿ ಕಿಡಿಕಾರಿದರು. ಕರ್ನಾಟಕ ಶಾಂತಿಗೆ ಪ್ರಿಯವಾದಂತ ರಾಜ್ಯ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯನ್ನ ಮುಂದಿಟ್ಟುಕೊಂಡು ಈ ರೀತಿಯ ಗೊಂದಲಮಯ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದರು.
ಶ್ರೀರಾಮಸೇನೆ ಹಾಗೂ ಬಿಜೆಪಿ ಇಬ್ಬರೂ ಅಣ್ಣತಮ್ಮಂದಿರು..!
ಶ್ರೀರಾಮಸೇನೆ ಹಾಗೂ ಬಿಜೆಪಿ ಅಣ್ಣತಮ್ಮದಿರು ಇದ್ದಂತೆ. ಹನುಮಾನ್ ಚಾಲೀಸಾ ಹಿಂದೆ ರಾಜ್ಯ ಸರ್ಕಾರದ ಕಾಣದ ಕೈವಾಡವಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿವರು ಪ್ರಮಾಣವಚನ ಸ್ವೀಕರಿಸುವಾಗ ಸಂವಿಧಾನ ಅಡಿಯಲ್ಲಿ ಈ ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುತ್ತೇನೆ ಎಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಕೂಡಲೇ ಸರ್ಕಾರ ಇದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹ ಮಾಡಿದರು.

ರಾಜ್ಯಪಾಲರು, ಪ್ರಧಾನಮಂತ್ರಿಗಳು ಮದ್ಯಪ್ರವೇಶ ಮಾಡಲಿ..!
ಕರ್ನಾಟಕದಲ್ಲಿ ಎಲ್ಲಾ ಭಾಷಿಕರು, ಎಲ್ಲಾ ಧರ್ಮದವರು ಜೀವನ ನಡೆಸುತ್ತಿದ್ದಾರೆ. ದಿನದಿಂದ ದಿನಕ್ಕೆ ಇಲ್ಲಸಲ್ಲದ ಗೊಂದಲಗಳನ್ನ ರಾಜ್ಯದಲ್ಲಿ ಸೃಷ್ಟಿಸುತ್ತಿದ್ದಾರೆ. ನಮ್ಮದು ಶಾಂತಿಪ್ರಿಯವಾದ ರಾಜ್ಯ, ಯಾವತ್ತೂ ಯಾರ ಮೇಲೆಯೂ ಅಶಾಂತಿ ತೋರಿಲ್ಲ. ಕೂಡಲೇ ರಾಜ್ಯಪಾಲರು ಅಥವಾ ದೇಶದ ಪ್ರಧಾನಮಂತ್ರಿಗಳ ಈ ವಿಚಾರ ಬಗ್ಗೆ ಮದ್ಯಪ್ರವೇಶ ಮಾಡಬೇಕು. ಕೇವಲ ಚುನಾವಣೆ ದೃಷ್ಟಿಯಿಂದ ಕರ್ನಾಟಕದಲ್ಲಿ ಅಶಾಂತಿಮಯ ವಾತಾವರಣ ಆಗುವುದನ್ನ ತಪ್ಪಿಸಬೇಕು ಎಂದರು.