ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಸದ ಪ್ರತಾಪ್ ಸಿಂಹ ಅವರನ್ನು ಪಕ್ಷದಿಂದ ಉಚ್ಚಾಟಿಸಿ : ಡಿಕೆ ಸುರೇಶ್

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 05: ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿ ಮಾಡಲು ಹೇಳಿಕೆ ನೀಡಿರುವ ಸಂಸದ ಪ್ರತಾಪ್ ಸಿಂಹ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕೆಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಆಗ್ರಹಿಸಿದ್ದರು.

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಇಂದು ನಡೆದ ನಗರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸುರೇಶ್,
ಬಿಜೆಪಿಯ ರಾಷ್ಟ್ರೀಯ ನಾಯಕರ ಆದೇಶದಂತೆ ಕೋಮುಗಲಭೆ ಮಾಡುತ್ತಿರುವುದಾಗಿ ಸ್ವತಃ ಪ್ರತಾಪ್ ಸಿಂಹ ಅವರೇ ಹೇಳಿದ್ದಾರೆ. ಆದರೂ ಅವರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲವೇಕೆ? ಎಂದು ಪ್ರಶ್ನಿಸಿದರು.

Expel MP Pratap Simha from BJP for triggering communal violence : DK Suresh


ಬಿಜೆಪಿಯ ರಾಷ್ಟ್ರೀಯ ನಾಯಕರ ಆದೇಶದಂತೆ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿ ಮಾಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇಂತಹ ಗಲಭೆಗೆ ಮುಖ್ಯಮಂತ್ರಿಗಳು ಅವಕಾಶ ನೀಡುವುದಿಲ್ಲ, ಚುನಾವಣೆ ಸಮಯದಲ್ಲಿ ರಾಜ್ಯದಲ್ಲಿ ಕಲುಷಿತ ವಾತಾವರಣ ಸೃಷ್ಟಿ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಇನ್ನೂ ಕಾಂಗ್ರೆಸ್ ಸರಕಾರ ರಾಜ್ಯವನ್ನು ರಾವಣ ರಾಜ್ಯ ಮಾಡಲು ಹೊರಟ್ಟಿದೆ ಎಂಬ ಸಚಿವ ಅನಂತ್ ಕುಮಾರ್ ಹೇಳಿಕೆ ಪ್ರತಿಕ್ರಿಯಿಸಿದ ಸುರೇಶ್ ರಾಮಾಯಣದಲ್ಲಿ ರಾಮ ರಾಜ್ಯವು ಬರುತ್ತದೆ. ರಾವಣ ರಾಜ್ಯವು ಬರುತ್ತದೆ ಹಾಗಾಗಿ ಅನಂತ್ ಕುಮಾರ್ ಹಾಗೂ ಅವರ ಪಕ್ಷದವರು ರಾಮಾಯಣವನ್ನ ಭಾಗ ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದ್ರು.

ನಾನು ಯಾವುದೇ ಅಧಿಕಾರಿಗಳಿಗೆ ಏಕವಚನ ಪ್ರಯೋಗ ಮಾಡಿಲ್ಲ, ಇದೆಲ್ಲ ಯೋಗೀಶ್ವರ್ ಅವರ ಕಟ್ಟು ಕಥೆ ಒಂದು ವೇಳೆ ನಾನು ಏಕವಚನ ಪ್ರಯೋಗ ಮಾಡಿದ್ರೆ ಅಂತಹ ಅಧಿಕಾರಿಗಳು ಬೇಕಾದ್ರೆ ತಮ್ಮ ಹಿರಿಯ ಅಧಿಕಾರಿಗಳಿಗೊ ಇಲ್ಲ ಶಾಸಕರಿಗೊ ನನ್ನ ವಿರುದ್ಧ ದೂರು ಕೊಡಲಿ ಎಂದು ತಿಳಿಸಿದರು.

ಸಿಪಿವೈ ಅವರ ಸಹೋದರನೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವುದಾಗಿ ಹೇಳಿಕೊಂಡು ಜಿ.ಪಂ ಅಧ್ಯಕ್ಷಗಿರಿಯಲ್ಲಿ ಇದ್ದುಕೊಂಡು ಅಧಿಕಾರ ಅನುಭವಿಸುತ್ತಿದ್ದಾರೆ. ಸಿಪಿವೈಗೆ ಅಷ್ಟು ನಾಚಿಕೆ ಮಾನ ಮರ್ಯಾದೆ ಇದ್ರೆ ಸಹೋದರ ರಾಜೇಶ್ ಕೈಯಲ್ಲಿ ಜಿ.ಪಂ ಅಧ್ಯಕ್ಷಗಾದಿಗೆ ರಾಜಿನಾಮೆ ಕೊಡಿಸಲಿ ಎಂದು ಸಿಪಿವೈಗೆ ಸವಾಲು ಹಾಕಿದ್ರು.

English summary
Bengaluru rural MP DK Suresh demanded BJP to expel Kodagu- Mysuru MP Pratap Simha from BJP for triggering communal violence in state post Hunsur incidence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X