ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೋಸ್ತಿ ಸರಕಾರದ ಪತನದ ಬಗ್ಗೆ ಮಾತನಾಡಿದ ಡಿಕೆಶಿ, ತೂಕದ ಬಟ್ಟು ಯಾರ ಕಡೆಗೆ?

By ರಾಮನಗರ ಪ್ರತಿನಿಧಿ
|
Google Oneindia Kannada News

ಚನ್ನಪಟ್ಟಣ (ರಾಮನಗರ), ಅಗಸ್ಟ್ 25: "ಯಾವುದೇ ಮೈತ್ರಿ ಸರಕಾರ ರಚನೆಯಾಗುವುದು ಪಕ್ಷದ ಹೈಕಮಾಂಡ್ ನಿಂದ. ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ" ಎಂದು ಭಾನುವಾತ ಮಾಜಿ ಸಚಿವ ಡಿ.ಕೆ‌. ಶಿವಕುಮಾರ್ ಹೇಳಿದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚಕ್ಕೆರೆ ಗ್ರಾಮದ ಪಟ್ಟಲದಮ್ಮ ದೇವಾಲಯದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ಮಾತನಾಡಿದರು. ದೋಸ್ತಿ ಸರಕಾರದ ಪತನದ ಬಳಿಕ ನಾಯಕರ ಆರೋಪ- ಪ್ರತ್ಯಾರೋಪ ವಿಚಾರವಾಗಿ ಡಿ.ಕೆ‌. ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

Recommended Video

ದೇವೇಗೌಡ ಮತ್ತು ಸಿದ್ದರಾಮಯ್ಯ ಇಬ್ಬರಲ್ಲಿ ಡಿಕೆಶಿ ಬೆಂಬಲ ಯಾರಿಗೆ..? | DK Shivakumar | Oneindia Kannada

ನನಗೆ ಪ್ರತಿಪಕ್ಷ ನಾಯಕನ ಹುದ್ದೆ ಬೇಡ: ಡಿಕೆ ಶಿವಕುಮಾರ್ನನಗೆ ಪ್ರತಿಪಕ್ಷ ನಾಯಕನ ಹುದ್ದೆ ಬೇಡ: ಡಿಕೆ ಶಿವಕುಮಾರ್

"ಯಾರ ಬಗ್ಗೆಯೂ ಮಾತನಾಡಲು ನನಗೆ ಶಕ್ತಿಯಿಲ್ಲ. ಪಟ್ಟಲದಮ್ಮ ದೇವಿ ಆಶೀರ್ವಾದಕ್ಕೆ ಬಂದಿದ್ದೇನೆ. ಎಲ್ಲರಿಗೂ ದೇವಿಯಿಂದ ಅನುಗ್ರಹವಾಗಲಿ. ದುಃಖ ದೂರ ಮಾಡಲಿ, ಧೈರ್ಯ ನೀಡಲಿ, ಆರೋಗ್ಯವಂತರನ್ನಾಗಿಡಲಿ" ಎಂದು ಹೇಳಿದರು.

DK Shivkumar Spoke About Coalition Government Collapse

ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ಸ್ಥಳಾಂತರ ವಿಚಾರವಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್, "ಆದೇಶದ ಪ್ರತಿ ನನಗಿನ್ನೂ ಬಂದಿಲ್ಲ. ಅದು ಬಂದ ನಂತರ ಮಾತನಾಡುತ್ತೇನೆ" ಎಂದರು. ನನ್ನನ್ನು ಮೈತ್ರಿ ಪಕ್ಷದವರಂತೆ ನೋಡಿಲ್ಲ, ಶತ್ರುವಂತೆ ನೋಡಿದ್ದಾರೆ ಎಂಬ ಸಿದ್ದರಾಮಯ್ಯನವರ ಹೇಳಿಕೆ ವಿಚಾರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಡಿ.ಕೆ‌. ಶಿವಕುಮಾರ್ ತೆರಳಿದರು.

English summary
Former minister- Congress prominent leader D. K. Shivakumar spoke about JDS- Congress coalition government collapse.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X