ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣಾ ಪ್ರಚಾರದಲ್ಲಿ ರೇವಣ್ಣಗೆ ಸಾಥ್ ಕೊಟ್ಟ ಡಿಕೆಶಿ, ಸಾಧುಕೋಕಿಲಾ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ. 06: ಎಚ್.ಡಿ. ಕುಮಾರಸ್ವಾಮಿ ಯಾಕೆ ಎರಡು ಕಡೆ ಸ್ಪರ್ಧೆ ಮಾಡಬೇಕಾಗಿತ್ತು. ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಮನೆ ಮಾಡಿದ್ದಾರೆ. ಅಲ್ಲಿಯೇ ನಿಲ್ಲಬೇಕಾಗಿತ್ತು.
ಯಾಕೆ ಎರಡು ಕಡೆ ನಿಂತು ದ್ವಂದ್ವ ನೀತಿ ಅನುಸರಿಸಿದ್ದಾರೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದರು.

ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಎಂ.ರೇವಣ್ಣ ಪರ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಪ್ರಚಾರ ನಡೆಸಿ ಮಾತನಾಡಿದರು. ಪ್ರಚಾರದ ವೇಳೆ ಡಿಕೆಶಿಗೆ ಸ್ಥಳೀಯ ಮುಖಂಡರು ಹಾಗೂ ಹಾಸ್ಯನಟ ಸಾಧುಕೋಕಿಲಾ ಸಾಥ್ ನೀಡಿದರು.

ಚನ್ನಪಟ್ಟಣದಲ್ಲಿ ರೇವಣ್ಣ ಪರ ಸ್ಯಾಂಡಲ್ ವುಡ್ ಸ್ಟಾರ್ಸ್ ಮತಯಾಚನೆ ಚನ್ನಪಟ್ಟಣದಲ್ಲಿ ರೇವಣ್ಣ ಪರ ಸ್ಯಾಂಡಲ್ ವುಡ್ ಸ್ಟಾರ್ಸ್ ಮತಯಾಚನೆ

ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಬಹಿರಂಗವಾಗಿ ಮಾತನಾಡಿದ ಡಿಕೆಶಿ ಮೋದಿ ಗೌಡರನ್ನು ಯಾಕೆ ಹೊಗಳಬೇಕಾಗಿತ್ತು, ಅತ್ತ ದೇವೇಗೌಡ್ರು ಹೇಳ್ತಾರೆ ಬಿಜೆಪಿ ಜೊತೆಯಲ್ಲಿ ಎಚ್ ಡಿಕೆ ಹೋದ್ರೆ ನನ್ನ ಮಗನನ್ನೇ ಮನೆಯಿಂದ ಹೊರ ಹಾಕ್ತೀನಿ ಅಂತ.

DK Shivakumar, Sadhu kokila did campaign for Congress candidate Revanna

ಇತ್ತ ಕುಮಾರಸ್ವಾಮಿ ಯಾಕೆ ಎರಡು ಕಡೆ ಸ್ಪರ್ಧೆ ಮಾಡಬೇಕಾಗಿತ್ತು. ಹಾಗಾದ್ರೆ, ರಾಮನಗರ ಜನತೆಯ ಮೇಲೆ ನಂಬಿಕೆ ಇಲ್ಲವೋ ಅಥವಾ ಇಲ್ಲಿಯವರ ಮೇಲೆ ನಂಬಿಕೆ ಇಲ್ಲವೋ ಎಂದು ಎಚ್ ಡಿಕೆ ಅವರನ್ನು ಪ್ರಶ್ನಿಸಿದರು.

ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಜಾತ್ಯಾತೀತ ಜನತಾದಳ 112 ಸೀಟ್ ಗೆದ್ದು ಅಧಿಕಾರಕ್ಕೆ ಬರಲ್ಲ. ಇನ್ನು ಬಿಜೆಪಿ ಅಧಿಕಾರಕ್ಕೆ ಬರುತ್ತಾ ಅದು ಇಲ್ಲಾ, ಇನ್ನೇನಿದ್ದರು ಕಾಂಗ್ರೆಸ್ ಸರ್ಕಾರ ಮಾತ್ರ ಅಧಿಕಾರಕ್ಕೆ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್ ಎಂ ರೇವಣ್ಣ ಸಂದರ್ಶನಚನ್ನಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಚ್ ಎಂ ರೇವಣ್ಣ ಸಂದರ್ಶನ

ಇದೇ ವೇಳೆ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೀಶ್ವರ್ ವಿರುದ್ಧ ಗುಡುಗಿದ್ರು. ಏನಪ್ಪ ನೀನು ಬಿಜೆಪಿಗೆ ಹೋಗಿದ್ದೀಯಾ, ನಿನ್ನ ಪಕ್ಷ ಎಲ್ಲರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ಹಣ ಹಾಕ್ತೀವಿ ಅಂದರು. ಹಾಕಿದ್ದಾರ? ಇಲ್ಲ‌. ಅವರಂತೆ ಯೋಗೇಶ್ವರ್ ಕೂಡ ಸುಳ್ಳು ಹೇಳಿಕೊಂಡು ಪ್ರಚಾರ ಮಾಡ್ತಾವ್ರೆ ಎಂದು ವ್ಯಂಗ್ಯವಾಡಿದರು.

ಹಣ ಹಂಚಿ ಕಾಂಗ್ರೆಸ್ ಕಾರ್ಯಕರ್ತರ ಖರೀದಿಗೆ ಮುಂದಾಗಿದ್ದಾರೆ. ಶಿಕಾರಿ ಮಾಡಲು ರೆಡಿ ಇದ್ದಾರೆ. ಹಾಗಾಗಿ ನಮ್ಮ ಕಾರ್ಯಕರ್ತರ ಪಡೆ ಅವರ ಹಿಂದೆ ಇದೇ. ಅದಕ್ಕೆಲ್ಲ ಅವಕಾಶ ಸಿಗಲ್ಲ ಎಂದು ಸಿಪಿವೈ ವಿರುದ್ಧ ವಾಗ್ದಾಳಿ ನಡೆಸಿದರು.

English summary
Karnataka assembly elections 2018: Karnataka Energy Minister and Congress leader DK Shivakumar and Actor Sadhu kokila did campaign for Congress candidate Revanna in Channapatna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X