ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚನ್ನಪಟ್ಟಣದಲ್ಲಿ ಹಾಳು ಕೊಂಪೆಯಾಗಿದೆ ಬಾಪುವಿನ ನೆನಪಿನ ಭವನ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಅಕ್ಟೋಬರ್ 2: ಜಗತ್ತಿಗೆ ಅಹಿಂಸಾ ತತ್ವವನ್ನು ಸಾರಿದ ಬಾಪುವಿನ 151ನೇ ಜನ್ಮ ದಿನಾಚರಣೆಯನ್ನು ರಾಷ್ಟ್ರದ ತುಂಬೆಲ್ಲಾ ಆಚರಿಸಲಾಗುತ್ತಿದೆ. ಗಾಂಧಿಜೀಯವರ ತತ್ವ, ಆದರ್ಶಗಳನ್ನು ಸಾರುವ ಕಾರ್ಯಕ್ರಮಗಳ ಮೂಲಕ ಆಚರಣೆ ನಡೆಯುತ್ತಿದೆ.

ಮಹಾತ್ಮ ಗಾಂಧಿಯವರ ನೆನಪುಗಳು ರಾಮನಗರ ಜಿಲ್ಲೆಯಲ್ಲೂ ಇದೆ. ಜನವರಿ 6,1934ರಂದು ಮಂಡ್ಯ ಮೂಲಕ ತಾಲೂಕಿಗೆ ಆಗಮಿಸಿದ ಮಹಾತ್ಮಾ ಗಾಂಧೀಜಿ ಚನ್ನಪಟ್ಟಣ ನಗರದ ಬಾಲಕರ ಪ್ರೌಢಶಾಲೆಯಲ್ಲಿ ಹರಿಜನ ನಿಧಿಯನ್ನು ಸಂಗ್ರಹಿಸಿದರು. ಈ ವೇಳೆ ವಿದ್ಯಾರ್ಥಿಗಳು, ದಾನಿಗಳು 90 ರೂ. ಹಣವನ್ನು ನಿಧಿಗೆ ದೇಣಿಗೆಯಾಗಿ ನೀಡಿದರು. ಸಾರ್ವಜನಿಕರನ್ನುದ್ದೇಶಿಸಿ ಗಾಂಧೀಜಿ ಬಾಷಣವನ್ನು ಸಹ ಮಾಡಿದರು. ಮುಂದೆ ಓದಿ...

ಗಾಂಧಿಯ ತತ್ವಾದರ್ಶ ಮರೆತ ನಮ್ಮ ನಾಯಕರು...ಗಾಂಧಿಯ ತತ್ವಾದರ್ಶ ಮರೆತ ನಮ್ಮ ನಾಯಕರು...

 ಗಾಂಧಿ ವಿಶ್ರಾಂತಿ ಪಡೆದಿದ್ದ ಜಾಗದಲ್ಲಿ

ಗಾಂಧಿ ವಿಶ್ರಾಂತಿ ಪಡೆದಿದ್ದ ಜಾಗದಲ್ಲಿ "ಸ್ಮಾರಕ ಭವನ"

ನಂತರ ಗಾಂಧೀಜಿ ಅವರು, ಸರಸ್ವತಿ ಮತ್ತು ಆರ್ಯಮೂರ್ತಿ ದಂಪತಿ ಹರಿಜನ ಸೇವೆಯಲ್ಲಿ ತೊಡಗಿಕೊಂಡಿದ್ದನ್ನು ತಿಳಿದು ಕೆಲ ಕಾಲ ಅವರ ಕುಟೀರದಲ್ಲಿ ವಿಶ್ರಾಂತಿ ಪಡೆದು ಪ್ರಯಾಣ ಮುಂದುವರೆಸಿದರು. ಇದು ಚನ್ನಪಟ್ಟಣಕ್ಕೆ ಮಹಾತ್ಮ ಗಾಂಧೀಜಿ ಭೇಟಿ ನೀಡಿದ್ದ ಇತಿಹಾಸ. ಗಾಂಧಿ ವಿಶ್ರಾಂತಿ ಪಡೆದಿದ್ದ ಅಭಯ ಕುಟೀರ ಸದ್ಯ ಪೊಲೀಸ್ ಠಾಣೆ ಮುಂಭಾಗ ಬೆಂ-ಮೈ ಹೆದ್ದಾರಿಯಲ್ಲಿ ಇದ್ದು, ಈ ಸ್ಥಳದಲ್ಲಿ ಗಾಂಧಿಸ್ಮಾರಕ ಭವನವನ್ನು ನಿರ್ಮಿಸಲಾಗಿದೆ.

 ಹಾಳುಕೊಂಪೆಯಾಗಿದೆ ಗಾಂಧಿ ನೆನಪಿನ ಭವನ

ಹಾಳುಕೊಂಪೆಯಾಗಿದೆ ಗಾಂಧಿ ನೆನಪಿನ ಭವನ

ನಗರದಲ್ಲಿ ಗಾಂಧಿ ಭೇಟಿ ಕೊಟ್ಟು ವಿಶ್ರಾಂತಿ ಪಡೆದ ನೆನಪಿಗಾಗಿ ನಿರ್ಮಾಣಗೊಂಡ ಭವನ, ನಿರ್ವಹಣೆ ಇಲ್ಲದೆ ಈಗ ಹಾಳು ಕೊಂಪೆಯಾಗಿದೆ. ಹತ್ತು ದಶಕಗಳ ಹಿಂದೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬಂದು ಹೋದ ನೆನಪಿಗಾಗಿ ಈ ಭವನವನ್ನು ನಿರ್ಮಾಣ ಮಾಡಲಾಗಿದ್ದು, ಇಂದು ಈ ಸ್ಮಾರಕ ಪ್ರತಿನಿತ್ಯ ಕೆಲಸ ಇಲ್ಲದೇ ಕುಡಿದು ಮಲಗುವವರ ತಾಣವಾಗಿದೆ. ಇದನ್ನು ಸಂರಕ್ಷಿಸಬೇಕಾದ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ, ಇದು ಯಾರ ಒಡೆತನಕ್ಕೆ ಸೇರಿದ್ದು ಎಂದು ತಿಳಿಯದೇ ಗೊಂದಲದಲ್ಲಿದೆ.

ಮಹಾತ್ಮ ಗಾಂಧಿ ಸುಳ್ಳೇಕೆ ಹೇಳುತ್ತಿರಲಿಲ್ಲ?ಮಹಾತ್ಮ ಗಾಂಧಿ ಸುಳ್ಳೇಕೆ ಹೇಳುತ್ತಿರಲಿಲ್ಲ?

 ಗಾಂಧಿ ಭವನ ಜಾಗದ ಬಗ್ಗೆ ಗೊಂದಲ

ಗಾಂಧಿ ಭವನ ಜಾಗದ ಬಗ್ಗೆ ಗೊಂದಲ

ಗಾಂಧಿಭವನದ ಜಾಗ ಯಾರಿಗೆ ಸೇರಿದ್ದು ಎಂಬ ಗೊಂದಲದಿಂದ, ಗಾಂಧಿ ಭವನದ ಆವರಣದಲ್ಲಿರುವ ಅಂಗಡಿ ಮಳಿಗೆಗಳ ಬಾಡಿಗೆ ಮತ್ತು ಜಾಹೀರಾತು ಫಲಕದ ಬಾಡಿಗೆ ಹಣ ಅನ್ಯರ ಪಾಲಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ. ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡು ಕಟ್ಟಡವನ್ನು ದುರಸ್ತಿ ಮಾಡಬೇಕೆಂದು ಹಲವು ಬಾರಿ ಒತ್ತಾಯಿಸಿದರೂ ತಾಲ್ಲೂಕು ಮತ್ತು ಜಿಲ್ಲಾಡಳಿತ ಜಾಣಗುರುಡು ಪ್ರದರ್ಶಿಸುತ್ತಿದೆ.

Recommended Video

ಕಡೆಗೂ ಪ್ರಕರಣದ ಬಗ್ಗೆ ಮೌನ ಮುರಿದ UP ಮುಖ್ಯಮಂತ್ರಿ Yogi AdityaNath | Oneindia Kannada
 ಭವನದ ಕಾಯಕಲ್ಪಕ್ಕೆ ಒತ್ತಾಯ

ಭವನದ ಕಾಯಕಲ್ಪಕ್ಕೆ ಒತ್ತಾಯ

ರಾಷ್ಟ್ರಪಿತ ಗಾಂಧೀಜಿ ನೆನಪಿನ ಈ ಗಾಂಧಿಸ್ಮಾರಕ ಭವನ ನಮಗೆ ಪವಿತ್ರತಾಣ. ಆದರೆ ಇದರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದು ಖೇದಕಾರಿಯಾಗಿದೆ. ಕೂಡಲೇ ಭವನದ ಕಾಯಕಲ್ಪಕ್ಕೆ ಮುಂದಾಗಬೇಕು ಎಂದು ಕನ್ನಡ ಪರ ಹೋರಾಟಗಾರರು ಒತ್ತಾಯಿಸಿದ್ದಾರೆ.

English summary
The Gandhi Bhavan, built in memory of Mahatma Gandhiji in Channapatna city, is in a state of ruining. District Administration is not giving attention to the maintainance of Gandhi Bhavan,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X