ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆಗಾಗಿ ಅತಿರುದ್ರಯಾಗ ಮಾಡಿಸಿಲ್ಲ : ದೇವೇಗೌಡರ ಸ್ಪಷ್ಟನೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಜನವರಿ 19 : ಶೃಂಗೇರಿಯಲ್ಲಿ ಕುಟುಂಬ ಸಮೇತ ಹತ್ತು ದಿನಗಳ ಕಾಲ ಅತಿರುದ್ರಯಾಗ ಮಾಡಿಸಿದ್ದು ಚುನಾವಣೆ ಗೆಲ್ಲಲು ಅಲ್ಲ, ಲೋಕ ಕಲ್ಯಾಣಕ್ಕಾಗಿ ಎಂದು ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದರು.

ಅವರು ತಮ್ಮ ಸೊಸೆ ಎಚ್ಡಿಕೆಯವರ ಪತ್ನಿ ಅನಿತಾಕುಮಾರಸ್ವಾಮಿಯವರೊಂದಿಗೆ ಚನ್ನಪಟ್ಟಣ ತಾಲ್ಲೂಕಿನ ಉಜ್ಜನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ವೀರಾಂಜನೇಯ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

'ಚುನಾವಣೆಗಾಗಿ ದೇವೇಗೌಡರು ಯಾಗ ಮಾಡಿದ್ದಾರೆ' ಎಂದು ಎಲ್ಲರು ಹೇಳುತ್ತಾರೆ. ನಾವು ಕೈಗೊಂಡ ಅತಿರುದ್ರಯಾಗ ಲೋಕ ಕಲ್ಯಾಣಕ್ಕಾಗಿ ಎಂದರು.

ಚುನಾವಣೆಯಲ್ಲಿ ಗೆಲುವು ಸಾಧಿಸಲು ದುರ್ಗಿಯನ್ನು ಪೂಜೆ ಮಾಡುತ್ತಾರೆ, ಅದು ಚಂಡಿಕಾ ಹೋಮ. ಈ ಹೋಮ ಮಾಡುವುದರಿಂದ ಮನಸ್ಸಿನ ಕೋರಿಕೆ ಈಡೆರುತ್ತೆ ಎನ್ನೂ ನಂಬಿಕೆ. ಅದರೆ ರುದ್ರನ್ನು ಪೂಜೆ ಮಾಡುವುದು ಜಗತ್ ಕಲ್ಯಾಣಕ್ಕಾಗಿ. ನಾವು ಈಶ್ವರನ ಸಂಪ್ರದಾಯದಿಂದ ಬಂದವರು ಅಗಾಗೇ ರುದ್ರಯಾಗ ಮಾಡಿಸಿದ್ದು ಎಂದು ಸ್ಪಷ್ಟಪಡಿಸಿದರು.

ದೇವಸ್ಥಾನಗಳು ನೆಮ್ಮದಿ ಕೊಡೋ ಸ್ಥಳಗಳು

ದೇವಸ್ಥಾನಗಳು ನೆಮ್ಮದಿ ಕೊಡೋ ಸ್ಥಳಗಳು

ದೇವಸ್ಥಾನಗಳು ನೆಮ್ಮದಿ ಕೊಡೋ ಸ್ಥಳಗಳು. ದೇವರನ್ನ ಆರಾಧಿಸಿ ಪೂಜಿಸಿದರೆ ಸಂಕಷ್ಟಗಳು ಬಗೆಹರಿದು ಇಷ್ಟಾರ್ಥ ಸಿದ್ಧಿಯಾಗುತ್ತೆ ಅನ್ನೋ ನಂಬಿಕೆ ಹಿಂದಿನಿಂದಲೂ ಇದೆ. ಉಜ್ಜನಹಳ್ಳಿಯ ವೀರಾಂಜನೇಯಸ್ವಾಮಿ ದೇವಾಲಯಕ್ಕೆ 800 ವರ್ಷಗಳ ಇತಿಹಾಸ ಇದೆ.

ತುಂಬಾನೇ ದೈವಿಕ ಶಕ್ತಿ ಇರೋ ಸ್ಥಳ ಅ

ತುಂಬಾನೇ ದೈವಿಕ ಶಕ್ತಿ ಇರೋ ಸ್ಥಳ ಅ

ತುಂಬಾನೇ ದೈವಿಕ ಶಕ್ತಿ ಇರೋ ಸ್ಥಳ ಅನ್ನೋ ನಂಬಿಕೆ ಇದೆ. ಆ ಭಗವಂತ ಹನುಮ ದೇಶದಲ್ಲಿ ಶಾಂತಿ ನೆಮ್ಮದಿ ಸಮೃದ್ದಿಯನ್ನ ಕರುಣಿಸಲಿ ಅಂತ ನಾನು ಕೂಡ ಪ್ರಾರ್ಥಿಸ್ತೇನೆ ಎಂದು ಮಾಜಿ ಶಾಸಕಿ ಅನಿತಾಕುಮಾರಸ್ವಾಮಿ ಹೇಳಿದರು.

ಚನ್ನಪಟ್ಟಣಕ್ಕೆ ಅವಿನಾಭಾವ ಸಂಬಂಧ

ಚನ್ನಪಟ್ಟಣಕ್ಕೆ ಅವಿನಾಭಾವ ಸಂಬಂಧ

ನಮ್ಮ ಕುಟುಂಬಕ್ಕೂ ಈ ಚನ್ನಪಟ್ಟಣಕ್ಕೆ ಅವಿನಾಭಾವ ಸಂಬಂಧ ಇದೆ. ಆದ್ದರಿಂದಲೇ ಚನ್ನಪಟ್ಟಣದ ಜನರು ನಮ್ಮ ಮೇಲೆ ಪ್ರೀತಿ, ವಿಶ್ವಾಸ, ಅಭಿಮಾನ ಇಟ್ಟಿದ್ದಾರೆ. ನಿಮ್ಮಗಳ ವಿಶ್ವಾಸ ಪ್ರೀತಿಗೆ ನಾವೆಂದೆಂದಿಗೂ ಋಣಿಯಾಗಿರ್ತೇವೆ. ಆಂಜನೇಯನ ಆಶೀರ್ವಾದದಿಂದ ನಿಮ್ಮಗಳ ಆಶೀರ್ವಾದದಿಂದ ಕರ್ನಾಟಕದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಲಿ ಅನ್ನೋದು ನನ್ನ ಆಶಯ ಎಂದರು.

ಈ ಚನ್ನಪಟ್ಟಣ ನಿಜವಾಗ್ಲೂ ಶಕ್ತಿಭೂಮಿ

ಈ ಚನ್ನಪಟ್ಟಣ ನಿಜವಾಗ್ಲೂ ಶಕ್ತಿಭೂಮಿ

ಈ ಚನ್ನಪಟ್ಟಣ ನಿಜವಾಗ್ಲೂ ಶಕ್ತಿಭೂಮಿ. ಇಲ್ಲಿನ ಜನ ಸ್ವಾಭಿಮಾನಿಗಳು ನಾನು ನಿಮ್ಮ ಮನೆಮಗಳು ನಿಮ್ಮಲ್ಲೊಬ್ಬಳಾಗಿರ್ತೇನೆ. ನನಗೆ ನೀವು ತೋರಿಸೋ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನು ಅಭಾರಿಯಾಗಿರ್ತೇನೆ ಎಂದು ಅಭಿಮಾನ ವ್ಯಕ್ತಪಡಿಸಿದರು.

English summary
JDS supremo HD Deve Gowda clarifies about purpose of 'Ati Rudra Mahayaga' at the Shringeri Sharada Peetha. Deve gowda during the private function at Ramanagara said Yaga conducted for the prosperity of Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X