ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನ್ ಧನ್ ಖಾತೆಯಲ್ಲಿ 30 ಕೋಟಿ ಪ್ರಕರಣ; ಖಾತೆಗೆ ಹಣ ಬಂದಿದ್ದು ಹೇಗೆ?

By ರಾಮನಗರ ಪ್ರತಿನಿಧಿ
|
Google Oneindia Kannada News

ಚನ್ನಪಟ್ಟಣ, ಫೆಬ್ರವರಿ 09: ಬಡ ಮಹಿಳೆಯ ಜನ್ ‌ಧನ್ ಖಾತೆಯನ್ನು ದುರುಪಯೋಗ ಮಾಡಿಕೊಂಡ ಅನಾಮಧೇಯ ವ್ಯಕ್ತಿ ಖಾತೆದಾರಳಿಗೆ ತಿಳಿಯದಂತೆ ಬ್ಯಾಂಕ್ ನಲ್ಲಿ ಹಣಕಾಸು ವಹಿವಾಟು ನಡೆಸಿರುವ ಘಟನೆ ಚನ್ನಪಟ್ಟಣ ‌ಎಸ್ ಬಿಐ ಬ್ಯಾಂಕ್ ನಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಅಪರಿಚಿತನಿಗೆ ತನ್ನ ಬ್ಯಾಂಕ್ ಖಾತೆಯ ಮಾಹಿತಿ ನೀಡಿ ಪೇಚಿಗೆ ಸಿಲುಕಿರುವ ಮಹಿಳೆ ಪಟ್ಟಣದ ರಿಹಾನ ಬಾನು.

ಬೀಡಿ ಕಾಲೋನಿ ನಿವಾಸಿ ರಿಹಾನ ಬಾನುರವರ ಜೀರೊ ಬ್ಯಾಲೆನ್ಸ್ ಜನ್ ಧನ್ ಖಾತೆಯಿಂದ ಲಕ್ಷಾಂತರ ವಹಿವಾಟು ಗಮನಿಸಿದ ಬ್ಯಾಂಕ್ ಮುಖ್ಯ ಬ್ರಾಂಚ್ ಅಧಿಕಾರಿಗಳು ಬ್ಯಾಂಕ್ ಮ್ಯಾನೇಜರ್ ಗೆ ಮಾಹಿತಿ ನೀಡಿದ್ದಾರೆ. ನಂತರ ಬ್ಯಾಂಕ್ ಸಿಬ್ಬಂದಿ ರಿಹಾನ ಬಾನು ಮನೆ ಬಳಿ ಬಂದು ಬಲವಂತವಾಗಿ ದಾಖಲೆಗಳಿಗೆ ಸಹಿ ಕೂಡ ಪಡೆದಿದ್ದಾರೆ. ಇದರಿಂದ ಅನುಮಾನಗೊಂಡು ತಮ್ಮ ಖಾತೆಯನ್ನು ರಿಹಾನ ಬಾನು ಪರಿಶೀಲಿಸಿದಾಗ ತಮ್ಮ ಖಾತೆಯಲ್ಲಿ ಬರೋಬ್ಬರಿ 29,99,74,084 ರೂಪಾಯಿಗಳು ಇದ್ದಿರುವುದು ಕಂಡುಬಂದಿದೆ. ಆಗ ಆಶ್ಚರ್ಯದ ಜೊತೆಗೆ ಅನುಮಾನವೂ ಉಂಟಾಗಿದ್ದು, ಇದೇ ದೊಡ್ಡ ಸುದ್ದಿಯಾಗಿತ್ತು.

 ಬಹುಮಾನದ ಆಸೆ ತೋರಿಸಿ ಬಲೆ ಬೀಸಿದ ಅಪರಿಚಿತ

ಬಹುಮಾನದ ಆಸೆ ತೋರಿಸಿ ಬಲೆ ಬೀಸಿದ ಅಪರಿಚಿತ

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಸ್ನ್ಯಾಪ್ ಡೀಲ್‌ನಲ್ಲಿ ಸೀರೆಯೊಂದನ್ನು ಖರೀದಿ ಮಾಡಿದ್ದ ರಿಹಾನ ಅವರಿಗೆ ನೀವು ಬಹುಮಾನ ಗೆದ್ದಿದ್ದೀರಿ ಅದನ್ನು ಪಡೆಯಲು ಬ್ಯಾಂಕ್ ಮಾಹಿತಿ ನೀಡಿ ಎಂದು ಆಮಿಷ ತೋರಿಸಿ ಮಾಹಿತಿ ಪಡೆದಿದ್ದಾರೆ. ಮಾಹಿತಿ ಪಡೆದ ಆ ಅನಾಮಧೇಯ ರಿಹಾನ ಬಾನುವಿನ ಬ್ಯಾಂಕ್ ಅಕೌಂಟ್ ಮೊಬೈಲ್ ನಂಬರ್ ಬದಲಿಸಿ, ತನ್ನ ನಂಬರ್ ಸೇರಿಸಿ ದಿನನಿತ್ಯ 25 ಸಾವಿರದಿಂದ 4 ಲಕ್ಷದ ತನಕ ಹಣವನ್ನು ಹಾಕಿ, ಅಂದೇ ವಿತ್ ಡ್ರಾ ಕೂಡಾ ಮಾಡಿದ್ದಾನೆ. ಬರೋಬ್ಬರಿ ಮೂರು ತಿಂಗಳ ಕಾಲ ಈ ವಹಿವಾಟು ನಡೆಸಿದ್ದಾನೆ.

NEFT ಹಣ ವರ್ಗಾವಣೆಯಲ್ಲಿ ಬದಲಾವಣೆ, ಶುಲ್ಕ? ಮಿತಿ ಎಷ್ಟು?NEFT ಹಣ ವರ್ಗಾವಣೆಯಲ್ಲಿ ಬದಲಾವಣೆ, ಶುಲ್ಕ? ಮಿತಿ ಎಷ್ಟು?

 ಝೀರೊ ಬ್ಯಾಲೆನ್ಸ್ ಹೊಂದಿದ್ದ ಖಾತೆ

ಝೀರೊ ಬ್ಯಾಲೆನ್ಸ್ ಹೊಂದಿದ್ದ ಖಾತೆ

ರಿಹಾನಾ ಬಾನು 2015ರಲ್ಲಿ ತೆರೆದಿದ್ದ ಜನ ಧನ್ ಖಾತೆಯಲ್ಲಿ ಸರಿಯಾಗಿ ವಹಿವಾಟು ಮಾಡಿರಲಿಲ್ಲ. ಹೀಗಾಗಿ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಇತ್ತು. ಆದರೆ, ಖಾತೆ ಪರಿಶೀಲಿಸಿದಾಗ ಖಾತೆಯಲ್ಲಿ ಆನ್‌ಲೈನ್ ಮೂಲಕ ಜಮೆಯಾಗಿದ್ದ ಮೊತ್ತದಲ್ಲಿ 25,914ರೂ. ಇತ್ತು. ಡಿ.5ರಂದು ಎಟಿಎಂನಲ್ಲಿ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿದ ರಿಹಾನ ಬಾನು ಅವರಿಗೆ ತೋರಿಸಿರುವ ಮೊತ್ತ 29,99,74,084 ರೂ. ಆದರೆ, ಅವರು ಮೈನಸ್ ಎಂಬುದನ್ನು ಗಮನಿಸದೆ 30 ಕೋಟಿ ರೂ. ಬಂದಿದೆ ಎಂದು ತಪ್ಪು ತಿಳಿದಿದ್ದಾರೆ ಎನ್ನುತ್ತಾರೆ ಬ್ಯಾಂಕ್ ಅಧಿಕಾರಿಗಳು.

 30 ಕೋಟಿಯಲ್ಲ, 66 ಲಕ್ಷ ಅಕ್ರಮ ವಹಿವಾಟು

30 ಕೋಟಿಯಲ್ಲ, 66 ಲಕ್ಷ ಅಕ್ರಮ ವಹಿವಾಟು

ಅನಾಮಧೇಯ ವ್ಯಕ್ತಿ ರಿಹಾನು ಬಾನು ಖಾತೆಯಲ್ಲಿ ಮೂರು ತಿಂಗಳು ಅಕ್ರಮ ವಹಿವಾಟು ನಡೆಸಿದ್ದಾನೆ. 2019ರ ಸೆಪ್ಟೆಂಬರ್ ತಿಂಗಳಲ್ಲಿ ಖಾತೆಗೆ 18.20 ಲಕ್ಷ ರೂ. ಜಮೆಯಾಗಿದ್ದು, 18.17 ರೂ. ಹಣವನ್ನು ಆನ್‌ಲೈನ್ ಮೂಲಕ ಬೇರೆ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಅದೇ ರೀತಿ ಅಕ್ಟೋಬರ್‌ ತಿಂಗಳಿನಲ್ಲಿ 20.79 ಲಕ್ಷ ರೂ. ಜಮೆಯಾಗಿದ್ದು, 20.75 ಲಕ್ಷ ರೂ. ಅನ್ನು ಮತ್ತೊಂದು ಖಾತೆಗೆ ವರ್ಗಾಯಿಸಲಾಗಿದೆ. ನವೆಂಬರ್‌ ತಿಂಗಳಿನಲ್ಲಿ 21.60 ಲಕ್ಷ ರೂ. ಜಮೆಯಾಗಿದೆ. ಇನ್ನು ಜಮೆಯಾಗಿದ್ದ 21.38 ಲಕ್ಷ ರೂ. ಮತ್ತೊಂದು ಖಾತೆಗೆ ವರ್ಗಾವಣೆಯಾಗಿದೆ.

ಕಾಳ್ಗಿಚ್ಚಿಗೆ ದೇಣಿಗೆ ಸಂಗ್ರಹ: ಹೆಚ್ಚು ಹಣ ಕೊಟ್ಟವರಿಗೆ ಯುವತಿಯಿಂದ ಬೆತ್ತಲೆ ಚಿತ್ರದ 'ಗಿಫ್ಟ್'ಕಾಳ್ಗಿಚ್ಚಿಗೆ ದೇಣಿಗೆ ಸಂಗ್ರಹ: ಹೆಚ್ಚು ಹಣ ಕೊಟ್ಟವರಿಗೆ ಯುವತಿಯಿಂದ ಬೆತ್ತಲೆ ಚಿತ್ರದ 'ಗಿಫ್ಟ್'

ಕೊನೆಯದಾಗಿ ಡಿಸೆಂಬರ್ ತಿಂಗಳ ಕೊನೆಯಲ್ಲಿ 24 ಸಾವಿರ ರೂ. ಹಣ ಖಾತೆಗೆ ಬಂದಿದೆಯಾದರೂ ಅದನ್ನು ಬೇರೆ ಖಾತೆಗೆ ವರ್ಗಾವಣೆ ಮಾಡಲು ಸಾಧ್ಯವಾಗದ ಕಾರಣ ಬೇನಾಮಿ ವಹಿವಾಟು ನಡೆಸುತ್ತಿದ್ದ ನಿಗೂಢ ವ್ಯಕ್ತಿ ಈ ಖಾತೆಗೆ ಹಣ ಹಾಕುವುದನ್ನು ನಿಲ್ಲಿಸಿದ್ದಾನೆ. ಒಟ್ಟಾರೆ ಸೆಪ್ಟೆಂಬರ್ ನಿಂದ ನವೆಂಬರ್ ವರೆಗೆ ಮೂರು ತಿಂಗಳ ಕಾಲ ಈ ಖಾತೆಗೆ ಆನ್‌ಲೈನ್ ಮೂಲಕ 60.66 ಲಕ್ಷ ರೂ. ಜಮೆಯಾಗಿದೆ. 60.31 ಲಕ್ಷ ರೂ ಹಣವನ್ನು ಆನ್‌ಲೈನ್ ಮೂಲಕ ಖಾತೆಯಿಂದ ವರ್ಗಾವಣೆ ಮಾಡಲಾಗಿದೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

 ಖಾತೆಯನ್ನು 30 ಕೋಟಿಗೆ ಹೋಲ್ಡ್ ಮಾಡಿದ ಅಧಿಕಾರಿಗಳು

ಖಾತೆಯನ್ನು 30 ಕೋಟಿಗೆ ಹೋಲ್ಡ್ ಮಾಡಿದ ಅಧಿಕಾರಿಗಳು

ಝೀರೊ ಬ್ಯಾಲೆನ್ಸ್ ಇದ್ದ ಜನ್ ಧನ್ ಖಾತೆಯಿಂದ ಲಕ್ಷಾಂತರ ರೂಪಾಯಿ ವಹಿವಾಟು ನಡೆದಿರುವುದನ್ನು ಗಮನಿಸಿದ ಬ್ಯಾಂಕ್ ಅಧಿಕಾರಿಗಳು ತಮ್ಮ ಅಧಿಕಾರ ಬಳಸಿ ಖಾತೆಯನ್ನು ಹೋಲ್ಡ್ ಮಾಡಿದ್ದಾರೆ ಹಾಗೂ ಹೋಲ್ಡಿಂಗ್ ಮಿತಿಯನ್ನು 30 ಕೋಟಿಗೆ ನಿಗದಿಪಡಿಸಿದ್ದಾರೆ. ಸಾಮಾನ್ಯ ಉಳಿತಾಯ ಖಾತೆಯನ್ನು 10 ರಿಂದ 20 ಲಕ್ಷ ರೂ.ಗಳಿಗೆ ಹೋಲ್ಡ್ ಮಾಡುತ್ತಾರೆ. ಆದರೆ, ರಿಹಾನಾ ಬಾನು ಖಾತೆಯಲ್ಲಿ ಪ್ರತಿದಿನ ಲಕ್ಷಾಂತರ ರೂ. ವಹಿವಾಟು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಂದಾಜು 20 ಲಕ್ಷ ರೂ.ಗಳಿಗೆ ಹೋಲ್ಡ್ ಮಾಡಿದರೆ ಎಲ್ಲಿ ಕೆಲ ದಿನಗಳಲ್ಲಿ ಈ ಮೊತ್ತ ತಲುಪುವುದೋ ಎಂದು ಲೆಕ್ಕಾಚಾರ ಮಾಡಿದ ಬ್ಯಾಂಕ್ ಲೆಕ್ಕಾಧಿಕಾರಿ ಬರೋಬ್ಬರಿ 30 ಕೋಟಿ ರೂ. ಗಳಿಗೆ ಹೋಲ್ಡ್ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

English summary
An unidentified person who misused the woman's Jan Dhan account has allegedly done financial transactions at the bank at Channapatna
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X