ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿರತೆ ದಾಳಿಗೆ ಬಲಿಯಾಗಿದ್ದ ವೃದ್ಧೆ ಕುಟುಂಬ ಭೇಟಿ ಮಾಡಿದ ಡಿಸಿಎಂ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮೇ 22: ರಾಮನಗರದಲ್ಲಿ ಚಿರತೆ ದಾಳಿಗೆ ಬಲಿಯಾಗಿದ್ದ ವೃದ್ಧೆಯ ಮನೆಗೆ ಇಂದು ಡಿಸಿಎಂ ಡಾ.ಅಶ್ವಥ್ ನಾರಾಯಣ ಭೇಟಿ ನೀಡಿದ್ದರು. ಮೃತ ಗಂಗಮ್ಮ ಕುಟುಂಬಸ್ಥರಿಗೆ ಪರಿಹಾರ ಆದೇಶ ಪ್ರತಿ ವಿತರಿಸಿ ಗಂಗಮ್ಮ ಅವರ ಸೊಸೆ ಲಕ್ಷ್ಮಮ್ಮ, ಮೊಮ್ಮಗ ರವಿಶಂಕರ್ ಗೆ ಸಾಂತ್ವನ ಹೇಳಿದರು.

Recommended Video

ಈ ಇಬ್ಬರೂ ಸಚಿವರಿಗೆ ಕೊರೊನಾ ಭಯವೇ ಇಲ್ಲ..ಇದ್ದಿದ್ರೆ ಹೀಗೆ ಮಾಡ್ತಿರ್ಲಿಲ್ಲ | Ramanagara

ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ಕೊಟ್ಟಗಾಣಹಳ್ಳಿಯ 62 ವರ್ಷದ ಗಂಗಮ್ಮ ಅವರು ಮೇ 16ರಂದು ಬಹಿರ್ದೆಸೆಗೆ ಹೋಗಿದ್ದಾಗ, ಚಿರತೆ ದಾಳಿ ಮಾಡಿ ಕೊಂದು ಹಾಕಿತ್ತು. ಮೇ 18ರಂದು ಅರಣ್ಯ ಸಚಿವ ಆನಂದ್ ಸಿಂಗ್ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ 7.5 ಲಕ್ಷ ರೂ. ಪರಿಹಾರ ಮಂಜೂರು ಮಾಡುವುದಾಗಿ ತಿಳಿಸಿದ್ದರು.

Dcm Ashwatha Narayan Visited Leopard Attack Victim Gangamma Home In Ramanagar

 ಚಿರತೆ ದಾಳಿಗೆ ಬಲಿಯಾದ ವೃದ್ಧೆ ಮನೆಗೆ ಅರಣ್ಯ ಸಚಿವರ ಭೇಟಿ ಚಿರತೆ ದಾಳಿಗೆ ಬಲಿಯಾದ ವೃದ್ಧೆ ಮನೆಗೆ ಅರಣ್ಯ ಸಚಿವರ ಭೇಟಿ

ಇಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಾ.ಅಶ್ವಥ್ ನಾರಾಯಣ ಅವರು ಭೇಟಿ ನೀಡಿ ಪರಿಹಾರ ಆದೇಶ ಪ್ರತಿಯನ್ನು ನೀಡಿದರು. ಚಿರತೆ ದಾಳಿ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಿದ್ದಾರೆ, ಭಯ ಪಡಬೇಡಿ ಎಂದು ಗ್ರಾಮಸ್ಥರಿಗೆ ಧೈರ್ಯ ಹೇಳಿದರು. ಆದಷ್ಟು ಬೇಗ ಚಿರತೆಯನ್ನು ಸೆರೆ ಹಿಡಿಯಲಾಗುತ್ತದೆ ಎಂದು ಭರವಸೆಯನ್ನು ನೀಡಿದರು. ಅಶ್ವತ್ಥ ನಾರಾಯಣ ಅವರೊಂದಿಗೆ ಜಿಲ್ಲಾಧಿಕಾರಿ, ಸಿಇಓ ಸೇರಿದಂತೆ ಅಧಿಕಾರಿಗಳು ಇದ್ದರು.

English summary
DCM Dr Ashwath Narayana visited the home of leopard attack victim in Ramanagaram today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X