ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೊತೆಯಾಗಿ ಗ್ರಾಮ ಪಂಚಾಯತಿ ಪ್ರವೇಶ ಮಾಡಿದ ಅತ್ತೆ-ಸೊಸೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 30: ಗ್ರಾಮ ಪಂಚಾಯತಿ ಚುನಾವಣೆ ಎಂದರೆ ಸ್ನೇಹಿತರು ಹಾಗೂ ಸಂಬಂಧಿಕರ ನಡುವೆ ವೈಷಮ್ಯ ಮೂಡುತ್ತದೆ ಎಂಬ ಮಾತಿದೆ.

ಅದರೆ ಇಲ್ಲೊಂದು ಮನೆಯಲ್ಲಿ ಅತ್ತೆ‌ ಪಾರ್ವತಮ್ಮ 330 ಮತ ಪಡೆದು, 68 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಅದೇ ರೀತಿ ಸೊಸೆಯು 335 ಮತ ಪಡೆದು, 85 ಮತಗಳ ಅಂತರದಿಂದ ಗೆದ್ದು ಬೀಗಿದರು. ಅತ್ತೆ-ಸೊಸೆ ಜೊತೆಯಾಗಿ ಜಯಗಳಿಸಿ ಗ್ರಾಮ ಪಂಚಾಯತಿ ಪ್ರವೇಶ ಮಾಡಿದ್ದಾರೆ.

ಮಂದಗತಿಯಲ್ಲಿ ಸಾಗುತ್ತಿರುವ ಗ್ರಾಮ ಪಂಚಾಯತಿ ಚುನಾವಣಾ ಫಲಿತಾಂಶಮಂದಗತಿಯಲ್ಲಿ ಸಾಗುತ್ತಿರುವ ಗ್ರಾಮ ಪಂಚಾಯತಿ ಚುನಾವಣಾ ಫಲಿತಾಂಶ

ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಗ್ರಾಮ ಪಂಚಾಯತಿಗೆ ಸೇರುವ ಬಿ.ವಿ.ಪಾಳ್ಯ ಗ್ರಾಮದಲ್ಲಿ ಜೆಡಿಎಸ್ ಮುಖಂಡರಾಗಿರುವ ಗಿರೀಶ್‌ಬಾಬು ಅವರ ತಾಯಿ ಪಾರ್ವತಮ್ಮ.ಎ.ಸಿ ಅವರನ್ನು ಸಾಮಾನ್ಯ ಮಹಿಳೆ ವರ್ಗದಿಂದ ಸ್ಪರ್ಧೆ ಮಾಡಿ ಗೆಲವು ಸಾಧಿಸಿದ್ದರೆ, ಅವರ ಸೊಸೆ ಲಕ್ಷ್ಮಿ.ವಿ ಹಿಂದುಳಿದ ವರ್ಗ-ಎ ಯಿಂದ ಸ್ಪರ್ಧೆ ಮಾಡಿ ಗೆಲವು ಸಾಧಿಸಿಸುವ ಮೂಲಕ ಹಳ್ಳಿ ಗದ್ದುಗೆ ಗುದ್ದಾಟದಲ್ಲಿ ಗೆದ್ದಿರುವುದು ವಿಶೇಷವೆನಿಸಿದೆ.

Daughter In-Law And Mother In-Law Won Gram Panchayat Election In Ramanagara

ಈ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬಿ.ವಿ.ಪಾಳ್ಯದಲ್ಲಿ 140 ಮನೆಗಳು ಬರಲಿದ್ದು, ಮತ್ತೊಂದು ಗ್ರಾಮ ಚೆನ್ನಿಗನಹೊಸಳ್ಳಿ ಗ್ರಾಮದಲ್ಲಿ 60 ಮನೆಗಳು ಬರುತ್ತವೆ. ಎರಡೂ ಗ್ರಾಮಗಳಿಂದ ಸುಮಾರು 600 ಮತಗಳಿದ್ದಾವೆ.

ಇನ್ನು ಈ ಬಗ್ಗೆ ಗಿರೀಶ್‌ಬಾಬು ಮಾತನಾಡಿ, ""ನಮ್ಮ ಕುಟುಂಬಕ್ಕೆ ಅಧಿಕಾರದ ಆಸೆಯಿಲ್ಲ. ಆದರೆ ಗ್ರಾಮದ ಜನರು, ಪಕ್ಷದ ಮುಖಂಡರು ಒಮ್ಮತದ ತೀರ್ಮಾನ ಮಾಡಿ ನಮ್ಮ ತಾಯಿ, ಪತ್ನಿಯನ್ನೇ ಸ್ಪರ್ಧೆ ಮಾಡಿಸಬೇಕೆಂದು ಒತ್ತಾಯ ಮಾಡಿದರು. ಹಾಗಾಗಿ ಅತ್ತೆ-ಸೊಸೆ ಇಬ್ಬರನ್ನು ಚುನಾವಣೆಗೆ ಸ್ಪರ್ಧೆ ಮಾಡಿಸಬೇಕಾಯಿತು'' ಎನ್ನುತ್ತಾರೆ.

Daughter In-Law And Mother In-Law Won Gram Panchayat Election In Ramanagara

ಇತ್ತೀಚಿನ ದಿನಗಳಲ್ಲಿ ಅತ್ತೆ-ಸೊಸೆಯರು ಹೊಂದಾಣಿಕೆ ಮಾಡಿಕೊಂಡು ಮನೆಗಳಲ್ಲಿ ಬಾಳುವುದೇ ಕಷ್ಟವಾಗಿದೆ. ಆದರೆ ಪಾರ್ವತಮ್ಮ ಹಾಗೂ ಲಕ್ಷ್ಮಿಯವರ ಪರಸ್ಪರ ಪ್ರೀತಿ ನೋಡಿರುವ ಗ್ರಾಮದ ಜನರು, ಮತ ನೀಡುವ ಮೂಲಕ ಆಶೀರ್ವಾದ ಮಾಡಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ನೂತನ ಸದಸ್ಯೆ ಪಾರ್ವತಮ್ಮ, ಗ್ರಾಮದ ಜನರೇ ಒಗ್ಗಟ್ಟಾಗಿ ನಮ್ಮಿಬ್ಬರನ್ನು ಅಭ್ಯರ್ಥಿಗಳಾಗಿ ಆಯ್ಕೆ ಮಾಡಿದ್ದಲ್ಲದೇ, ನಮಗೆ ಮತ ನೀಡಿ ಗೆಲ್ಲಿಸಿದ್ದಾರೆ. ಹಾಗಾಗಿ ಗ್ರಾಮದ ಅಭಿವೃದ್ಧಿಗಾಗಿ ಅತ್ತೆ-ಸೊಸೆ ಒಗ್ಗಟ್ಟಾಗಿ ಊರಿನ ಉದ್ಧಾರಕ್ಕಾಗಿ ದುಡಿಯುತ್ತೇವೆಂದರು.

Recommended Video

ಬೆಂಗಳೂರು: ರೂಪಾಂತರ ಕೊರೊನಾ ವೈರಸ್‌ ಕಂಟಕದ ಭೀತಿಯಲ್ಲಿ ಸಿಲಿಕಾನ್ ಸಿಟಿ! | Oneindia Kannada

English summary
Mother In-Law Parvathamma AC and Daughter In-Law Lakshmi V have won in the B.V Halli Gram Panchayat election of Channapattana Taluk in Ramanagar District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X