ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಿಷತ್ ಚುನಾವಣೆ; ಕಾಂಗ್ರೆಸ್ ಬೆಂಬಲಿಸಿದ ಸಿ. ಪಿ. ಯೋಗೀಶ್ವರ್!

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 15; "ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿತ್ತು. ಆದರೆ ಚನಪಟ್ಟಣದಲ್ಲಿ ಮಾತ್ರ ಜೆಡಿಎಸ್-ಬಿಜೆಪಿ ಹೊಂದಾಣಿಕೆಯಾಗಿಲ್ಲ. ವಿಧಾನ ಷರಿಷತ್ ಸದಸ್ಯ ಸಿ. ಪಿ. ಯೋಗೀಶ್ವರ್ ಕಾಂಗ್ರಸ್ ಬೆಂಬಲಿಸಿದ್ದಾರೆ" ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ಸ್ಪಷ್ಟಪಡಿಸಿದರು.

ಬುಧವಾರ ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂಧನೆ ಸ್ವೀಕರಿಸಿದ ನಂತರ ಮಾತನಾಡಿದ ಎಸ್. ರವಿ, "ಬಿಜೆಪಿ ನಾಯಕ ಸಿ. ಪಿ. ಯೋಗೀಶ್ವರ್, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರೋಧಿಗಳು. ಅವರು ಜೆಡಿಎಸ್ ಅನ್ನು ವಿರೋಧಿಸುತ್ತಾರೆ. ಹಾಗಾಗಿ ಕಾಂಗ್ರಸ್ ಬೆಂಬಲಿಸಿದ್ದಾರೆ" ಎಂದರು.

ವಿಧಾನ ಪರಿಷತ್ ಚುನಾವಣೆ 2021; ಗೆದ್ದವರು, ಸೋತವರ ಪಟ್ಟಿ ವಿಧಾನ ಪರಿಷತ್ ಚುನಾವಣೆ 2021; ಗೆದ್ದವರು, ಸೋತವರ ಪಟ್ಟಿ

"ಜಿಲ್ಲೆಯ ನಾಯಕರು, ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಬಹಳಷ್ಟು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾರೆ. ಸಮರ್ಥರ ಹೊಳೆಯೇ ಪಕ್ಷಕ್ಕೆ ಬರುತ್ತದೆ" ಎಂದು ಎಸ್. ರವಿ ಭವಿಷ್ಯ ನುಡಿದರು.

CP Yogeshwar Supported Congress In legislative Council Elections Says S Ravi

"ರಾಮನಗರ, ಬೆಂಗಳೂರು ಗ್ರಾಮಾಂತರ ಎರಡು ಜಿಲ್ಲೆಯ ಕಾಂಗ್ರೆಸ್ ಮುಂಖಡರು ಮತ್ತು ಕಾರ್ಯಕರ್ತರ ಒಗ್ಗಟ್ಟಿನ ಮಂತ್ರ ನನ್ನ ಗೆಲುವಿಗೆ ಸಹಕಾರಿ ಆಯಿತು. ಕಾಂಗ್ರಸ್ ಪಕ್ಷ ತಮಗೆ ಅವಕಾಶ ನೀಡಿತ್ತು. ಎರಡು ಜಿಲ್ಲೆಗಳ ಮುಖಂಡರು ನನ್ನ ಗೆಲುವಿಗೆ ಶ್ರಮಿಸಿದ್ದಾರೆ‌. ಹಾಗಾಗಿ 724 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೇನೆ" ಎಂದು ಸಂತಸ ಹಂಚಿಕೊಂಡರು.

ಸಿ. ಪಿ. ಯೋಗೀಶ್ವರ್ ಇನ್ನೂ ಬಿಜೆಪಿಯಲ್ಲೇ ಇದ್ದಾರಾ? ಸಿ. ಪಿ. ಯೋಗೀಶ್ವರ್ ಇನ್ನೂ ಬಿಜೆಪಿಯಲ್ಲೇ ಇದ್ದಾರಾ?

"ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಾಧ್ಯಮಗಳ ಮೂಲಕ ಧನ್ಯವಾದಗಳನ್ನು ಹೇಳುತ್ತಿದ್ದೇನೆ. ಡಿ.ಕೆ. ಶಿವಕುಮಾರ್ ಹಾಗು ಸಿದ್ದರಾಮಯ್ಯ ಆಶೀರ್ವಾದ, ವೀರಪ್ಪಮೊಯ್ಲಿ, ಡಿ. ಕೆ‌. ಸುರೇಶ್ ಹಾಗು ಶಾಸಕರ ನೆರವಿನಿಂದ ಗೆಲುವು ಸಾಧಿಸಿದ್ದೇನೆ"‌ ಎಂದರು.

"ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರಸ್‌ನ ಎಸ್. ರವಿ ಗೆಲುವಲ್ಲ. ನಮ್ಮ ನಾಯಕರಾದ ಡಿ. ಕೆ. ಶಿವಕುಮಾರ್ ಅವರ ಗೆಲುವು. ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ. ಉಪಚುನಾವಣೆಯಲ್ಲಿ ಆಡಳಿತಾರೂಢ ಪಕ್ಷಗಳೇ ಗೆಲುವು ಸಾಧಿಸುವುದು ವಾಡಿಕೆ. ಆದರೆ ಅದನ್ನು ಈ ಚುನಾವಣೆ ಸುಳ್ಳಾಗಿಸಿದೆ" ಎಂದು ಹೇಳಿದರು.

ರಾಮನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ; ಸಚಿವ ಯೋಗೀಶ್ವರ್ ರಾಮನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ; ಸಚಿವ ಯೋಗೀಶ್ವರ್

ಶುಭ ದಿನ ಪ್ರಾರಂಭವಾಗಿದೆ; "ಕಳೆದ ಉಪ ಚುನಾವಣೆಯಲ್ಲಿ ಹಾನಗಲ್‌ನಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುವ ಮೂಲಕ ಕಾಂಗ್ರಸ್ ಪಕ್ಷಕ್ಕೆ ಶುಭ ಶಕುನ ಶುರುವಾಗಿದೆ. ಪ್ರಸ್ತುತ ನಡೆದ ವಿಧಾನ ಪರಿಷತ್ ಚುನಾವಣೆ ಇದಕ್ಕೆ ದಾರಿ ಮಾಡಿಕೊಟ್ಟಿದೆ. ರಾಜಕೀಯ ಪ್ರಜ್ಞಾವಂತರ ಕ್ಷೇತ್ರದ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷದ ಸಮಕ್ಕೆ ಗೆಲುವು ಸಾಧಿಸಿದೆ. ಮುಂದಿನ ಭವಿಷ್ಯಕ್ಕೆ ಕಾಂಗ್ರೆಸ್ ಪಕ್ಷ ಬೇಕು ಎಂಬುದನ್ನು ಈ ಚುನಾವಣೆ ಸ್ಪಷ್ಟವಾಗಿ ಹೇಳಿದೆ" ಎಂದು ರವಿ ತಿಳಿಸಿದದರು.

"ಎರಡು ಜಿಲ್ಲೆಯ 8 ಕ್ಷೇತ್ರಗಳಲ್ಲಿ ಎಲ್ಲರ ಸಂಘಟಿತದ ಹೋರಾಟದ ಫಲವಾಗಿ ಗೆಲುವು ಸಾಧಿಸಿದ್ದೇನೆ. ಆತರಿಕ ಸಮೀಕ್ಷೆಯಲ್ಲಿ ಇಷ್ಟು ದೊಡ್ಡದ ಮತಗಳಿರಲಿಲ. 2 ಸಾವಿರದ ಆಸುಪಾಸಿನಲ್ಲೇ ಇತ್ತು. ಆದರೆ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಯನ್ನು ಮೀರಿ ಫಲಿತಾಂಶ ಬಂದಿದೆ" ಎಂದು ಹೇಳಿದರು.

ಜೆಡಿಎಸ್-ಬಿಜೆಪಿ ಮೈತ್ರಿಯಾಗಿತ್ತು; "‌ಜೆಡಿಎಸ್ ಪಕ್ಷದ ವರಿಷ್ಠರ ಹೇಳಿಕೆ ಗೊಂದಲಗಳಿಗೆ ಕಾರಣವಾಗಿದೆ. ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ನಾಯಕರು ಮತ್ತು ಮುಖಂಡರಲ್ಲಿ ಗೊಂದಲ ಉಂಟಾಗಿತ್ತು. ಇಲ್ಲಿಯು ಸಹ ಬಿಜೆಪಿ ಹಾಗು ಜೆಡಿಎಸ್ ನಡುವೆ ಹೊಂದಾಣಿಕೆ ಆಗಿತ್ತು" ಎಂದು ಎಸ್. ರವಿ ಆರೋಪಿಸಿದರು.

Recommended Video

Manish Pandey RCB ಗೆ ಬಂದ್ರೆ ಆಗೋ ಲಾಭ ಒಂದಾ ಎರಡಾ? | Oneindia Kannada

"ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಂದಲೇ ಸುಳ್ಳು ಹುಟ್ಟಿದೆ. ನಮಗೆ ಸುಳ್ಳಿನ ಅವಶ್ಯಕತೆ ಇಲ್ಲ. ಬಿಜೆಪಿ ನಮ್ಮ ಜತೆ ಬರಲು ಸಾಧ್ಯವೇ ಇಲ್ಲ‌. ಜೆಡಿಎಸ್ ಹೇಗಾದರೂ ಬರಲು ಸಾಧ್ಯ?" ಎಂದು ಪ್ರಶ್ನಿಸುವ ಮೂಲಕ ಕಾಂಗ್ರಸ್-ಬಿಜೆಪಿ ಮೈತ್ರಿಯಾಗಿವೆ ಎಂಬ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು.

English summary
Former minister and BJP leader C. P. Yogeshwar supported Congress party in legislative council elections said Congress MLC S. Ravi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X