ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿಎಂ ಕುಮಾರಸ್ವಾಮಿ ರಾಜಕಾರಣದ ರಹಸ್ಯ ಬಿಚ್ಚಿಟ್ಟ ಯೋಗೇಶ್ವರ್!

|
Google Oneindia Kannada News

Recommended Video

Lok Sabha Elections 2019 : ಸಿಎಂ ಕುಮಾರಸ್ವಾಮಿ ರಾಜಕಾರಣದ ರಹಸ್ಯ ಬಿಚ್ಚಿಟ್ಟ ಯೋಗೇಶ್ವರ್!

ರಾಮನಗರ, ಮಾರ್ಚ್ 18:ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮೈತ್ರಿ ಸರ್ಕಾರ ಯಾವತ್ತೋ ಬಿದ್ದು ಹೋಗುತ್ತಿತ್ತಂತೆ. ಈ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿಗೆ ಎರಡೇ ದಿನ ಸಾಕಾಗುತ್ತಿತ್ತಂತೆ. ಹಾಗಾದರೆ ರಾಜ್ಯದಲ್ಲಿ ಇನ್ನೂ ಕೂಡ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದೆ ಅಂದ್ರೆ ಅಚ್ಚರಿಯಾಗಬಹುದಲ್ವ?.

ದೋಸ್ತಿ ಸರ್ಕಾರ ಮುಂದುವರಿದುಕೊಂಡು ಹೋಗುವುದರ ಹಿಂದೆ ರಹಸ್ಯವೊಂದು ಅಡಗಿದೆಯಂತೆ. ಆ ರಹಸ್ಯ ಏನು ಎಂಬುದನ್ನು ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಬಯಲು ಮಾಡಿದ್ದಾರೆ.

ಇಷ್ಟಕ್ಕೂ ಸಿ.ಪಿ.ಯೋಗೇಶ್ವರ್ ರಾಜ್ಯದ ಮೈತ್ರಿ ಸರ್ಕಾರದ ಕುರಿತಂತೆ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬ್ಯಾಲೆನ್ಸ್ ರಾಜಕಾರಣದ ಕುರಿತಂತೆ ಬಿಚ್ಚಿಟ್ಟಿರುವ ರಹಸ್ಯ ಏನಿರಬಹುದು ಎಂಬ ಕುತೂಹಲ ಎಲ್ಲರನ್ನು ಕಾಡದಿರದು.

ಆ ಎರಡು ಆಘಾತದಿಂದ ಸಿ.ಪಿ.ಯೋಗೇಶ್ವರ್ ಹೊರಬಂದಿಲ್ವಾ?ಆ ಎರಡು ಆಘಾತದಿಂದ ಸಿ.ಪಿ.ಯೋಗೇಶ್ವರ್ ಹೊರಬಂದಿಲ್ವಾ?

ಆದರೆ ಅದರಲ್ಲೆಷ್ಟು ಸತ್ಯಾಸತ್ಯತೆ ಇದೆ ಎಂಬುದು ಕೂಡ ಒಂದಷ್ಟು ಕುತೂಹಲಕ್ಕೆ ಎಡೆ ಮಾಡಿಕೊಡಬಹುದು. ಈ ವಿಚಾರವನ್ನು ಬೇರೆ ಯಾವುದೇ ರಾಜಕೀಯ ಪಕ್ಷದ ನಾಯಕರು ಹೇಳಿದ್ದರೆ ಗಂಭೀರವಾಗಿ ಪರಿಗಣಿಸುವ ಅಗತ್ಯವೇ ಇರಲಿಲ್ಲ. ಆದರೆ ಹೇಳಿರೋದು ಸಿ.ಪಿ.ಯೋಗೇಶ್ವರ್. ಹಾಗಾದರೆ ಮಾಧ್ಯದವರ ಮುಂದೆ ಯೋಗೇಶ್ವರ್ ಬಿಚ್ಚಿಟ್ಟ ಆ ರಹಸ್ಯ ಏನಿರಬಹುದು?
ಎಂಬುದನ್ನು ತಿಳಿಯಬೇಕೇ? ಹಾಗಿದ್ದರೆ ಆ ಹೇಳಿಕೆ ಇಲ್ಲಿದೆ.

 ಬಿಜೆಪಿ ಜೊತೆಗೂ ಸಂಪರ್ಕ ಹೊಂದಿದ್ದಾರೆ

ಬಿಜೆಪಿ ಜೊತೆಗೂ ಸಂಪರ್ಕ ಹೊಂದಿದ್ದಾರೆ

ರಾಮನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿನ ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ತೆಗೆಯಲು ನಮಗೆ ಕೇವಲ ಎರಡೇ ದಿನ ಸಾಕಾಗಿತ್ತು, ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಜತೆಗೂ ಸಂಪರ್ಕ ಹೊಂದಿದ್ದಾರೆ.

 ಆಜಾದ್ ತಂತ್ರ : ಕುಮಾರಸ್ವಾಮಿ ಸಿಎಂ, ಕೈ -ತೆನೆ ಮೈತ್ರಿ ಆಜಾದ್ ತಂತ್ರ : ಕುಮಾರಸ್ವಾಮಿ ಸಿಎಂ, ಕೈ -ತೆನೆ ಮೈತ್ರಿ

 ಬ್ಯಾಲೆನ್ಸ್ ರಾಜಕಾರಣ ಮಾಡುತ್ತಿದ್ದಾರೆ

ಬ್ಯಾಲೆನ್ಸ್ ರಾಜಕಾರಣ ಮಾಡುತ್ತಿದ್ದಾರೆ

ದೆಹಲಿಗೆ ಹೋದ ಸಂದರ್ಭದಲ್ಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂಬುದಾಗಿ ಹೇಳುವ ಮೂಲಕ ಅಚ್ಚರಿಗೆ ತಳ್ಳಿದ್ದಾರೆ. ಅಷ್ಟೇ ಅಲ್ಲದೆ ಮುಂದುವರೆದು ಸಿಎಂ ಕುಮಾರಸ್ವಾಮಿ ಅವರು ಬಿಜೆಪಿ ನಾಯಕರ ಜೊತೆಗೆ ನಿರಂತರ ಸಂಪರ್ಕ ಸಾಧಿಸಿಕೊಂಡು ಬ್ಯಾಲೆನ್ಸ್ ರಾಜಕಾರಣ ಮಾಡುತ್ತಿದ್ದಾರೆ.

 ಚುನಾವಣೆ ಹೊತ್ತಲ್ಲಿ ರಾಹುಲ್ ಗಾಂಧಿ, ಕುಮಾರಸ್ವಾಮಿಗೆ ಮೋದಿ ಮಾಡಿದ ಮನವಿ ಏನು? ಚುನಾವಣೆ ಹೊತ್ತಲ್ಲಿ ರಾಹುಲ್ ಗಾಂಧಿ, ಕುಮಾರಸ್ವಾಮಿಗೆ ಮೋದಿ ಮಾಡಿದ ಮನವಿ ಏನು?

 ಇದು ಆರೋಪನಾ? ವ್ಯಂಗ್ಯನಾ?

ಇದು ಆರೋಪನಾ? ವ್ಯಂಗ್ಯನಾ?

ಆದರೆ ಮೈತ್ರಿ ಸರ್ಕಾರದ ಶಾಸಕರೇ ಕಿತ್ತಾಡಿಕೊಂಡು ಸರ್ಕಾರವನ್ನು ಪತನಗೊಳಿಸುತ್ತಾರೆ ಎಂಬುದನ್ನು ಹೇಳಲು ಮಾತ್ರ ಮರೆಯಲಿಲ್ಲ. ಸದ್ಯ ಯೋಗೇಶ್ವರ್ ಅವರ ಈ ಮಾತು ಒಂದಷ್ಟು ಸಂಚಲನಕ್ಕೆ ಕಾರಣವಾಗಿದೆ. ಇದು ಆರೋಪನಾ? ವ್ಯಂಗ್ಯನಾ? ಯಾವುದೆಂದು ಗೊತ್ತಾಗದ ಕಾಂಗ್ರೆಸ್‌ನ ನಾಯಕರು ಮಾತ್ರ ಪಿಳಿಪಿಳಿ ಕಣ್ಣು ಮಿಟಿಕಿಸುವಂತಾಗಿದೆ.

 ಆತಂಕ ತಂದರೂ ಅಚ್ಚರಿ ಪಡಬೇಕಾಗಿಲ್ಲ

ಆತಂಕ ತಂದರೂ ಅಚ್ಚರಿ ಪಡಬೇಕಾಗಿಲ್ಲ

ಈಗಾಗಲೇ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಸೀಟು ಹಂಚಿಕೆ ವಿಚಾರದಲ್ಲಿ ಕಿತ್ತಾಡಿಕೊಂಡು ಒಳಗೊಳಗೆ ಶೀತಲ ಸಮರ ನಡೆಸುತ್ತಿರುವ ತೆನೆ ಮತ್ತು ಕೈ ಪಕ್ಷದ ನಾಯಕರಿಗೆ ಯೋಗೇಶ್ವರ್ ನೀಡಿದ ಹೇಳಿಕೆ ಆತಂಕ ತರುವಂತೆ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ.

English summary
Lok Sabha Elections 2019:BJP leader CP Yogeshwar revealed the secret of CM Kumaraswamy's politics.Here's a detailed article on this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X