ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಎಫೆಕ್ಟ್: ರಾಮನಗರದಲ್ಲಿ 17 ಸಾವಿರ ಕೋಳಿಗಳ ಮಾರಣಹೋಮ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಮಾರ್ಚ್ 18: ಕೊರೊನಾ ವೈರಸ್ ಹಾಗೂ ಹಕ್ಕಿಜ್ವರದಿಂದಾಗಿ ಚಿಕನ್ ವ್ಯಾಪಾರ ಕುಸಿದಿರುವುದರಿಂದ ಕೋಳಿ ಸಾಕಾಣಿಕೆ ಮಾಡಲಾಗದೆ 17 ಸಾವಿರ ಕೋಳಿಗಳ ಜೀವಂತ ಸಮಾಧಿ ಮಾಡಲಾಗಿದೆ.

ರಾಮನಗರ ಜಿಲ್ಲೆ ಚನ್ನಪಟ್ಟಣದ ತಾಲ್ಲೂಕಿನ ಸಿಲ್ಕ್ ಫಾರಂ ಹಿಂಭಾಗ ಕೋಳಿಗಳನ್ನು ಜೀವಂತ ಸಮಾಧಿ ಮಾಡಲಾಗಿದ್ದು, ನಾಲ್ಕರಿಂದ ಐದು ಬ್ಯಾಚ್ ಗಳ, 75 ಸಾವಿರ ಕೋಳಿಗಳ ಸಾಕಾಣಿಕೆ ಮಾಡುತ್ತಿದ್ದರು.

ರಿಯಾಜ್ ಅಹಮದ್, ಫಯಾಜ್ ಅಹಮದ್ ಎಂಬುವವರಿಗೆ ಸೇರಿದ ಕೋಳಿ ಫಾರ್ಮ್ ಇದಾಗಿದ್ದು, ಕೆರೆಮ್ಯಾಗಳ ದೊಡ್ಡಿ, ತಗಿಚಕೆರೆ, ಎಂ.ಕೆ ದೊಡ್ಡಿ, ವಂದಾರಗುಪ್ಪೆ, ಮಳೂರು, ಬೇವೂರು ಗ್ರಾಮಗಳಲ್ಲಿ ಕೋಳಿಫಾರ್ಮ್ ಗಳು ಇವೆ.

Corona Effect: 17 Thousand Chickens Killing In Ramanagar

ಒಂದು ಕೆ.ಜಿ ಕೋಳಿ ಮಾಂಸಕ್ಕೆ 2 ರಿಂದ 3 ರುಪಾಯಿಗೆ ಕೇಳುತ್ತಿರುವ ಪೌಲ್ಟ್ರಿ ಸೆಂಟರ್ ನವರು, ನಮಗೆ ಕೋಳಿಗಳ ಸಾಕಣೆ ಮಾಡಲು ಸಾಧ್ಯವಾಗುತ್ತಿಲ್ಲ. ಬೇರೆ ದಾರಿ ಕಾಣದೇ ನಾವು ಕೋಳಿಗಳನ್ನು ಜೀವಂತವಾಗಿ ಮಣ್ಣಿಗೆ ಹಾಕಿ ಮುಚ್ಚುತ್ತಿದ್ದೇವೆ ಎಂದಿದ್ದಾರೆ.

ಸುಮಾರು 80 ಲಕ್ಷ ರುಪಾಯಿ ನಮಗೆ ಸದ್ಯ ನಷ್ಟವಾಗಿದೆ, ಕೋಳಿಗಳಿಗೆ ತಿಂಡಿ ಹಾಕಲೂ ಸಾಧ್ಯವಾಗುತ್ತಿಲ್ಲ. ಸರ್ಕಾರ ಪರಿಹಾರ ಕೊಟ್ಟರೆ ಅನುಕೂಲವಾಗುತ್ತದೆ, ಇಂದು ಮೊದಲ ಹಂತದಲ್ಲಿ 17 ಸಾವಿರ ಕೋಳಿ ಜೀವಂತವಾಗಿ ಮಣ್ಣಲ್ಲಿ ಮುಚ್ಚುತ್ತಿದ್ದೇವೆ ಎಂದು ಕೋಳಿ ಫಾರಂ ಮಾಲೀಕೆರು ತಿಳಿಸಿದ್ದಾರೆ.

English summary
The collapse of the chicken business due to the coronavirus and the Bird flu, 17,000 chickens have been buried alive in Ramanagara District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X