ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಛತ್ರಿ ಹಿಡಿದು 33ನೇ ದಿನದ ಟೊಯೊಟೊ ಕಾರ್ಮಿಕರ ಪ್ರತಿಭಟನೆ ಮುಂದುವರಿಕೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಡಿಸೆಂಬರ್ 11: ಏಷ್ಯಾದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಬಿಡದಿಯ ಟೊಯೊಟೊ ಕಿರ್ಲೋಸ್ಕರ್ ಕಾರ್ಖಾನೆಯ ಅಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ತಿಕ್ಕಾಟ ತಾರಕ್ಕೇರಿದ್ದು, ಸತತ 33ನೇ ದಿನದ ಹೋರಾಟವನ್ನು ಕಾರ್ಮಿಕರು ಛತ್ರಿ ಹಿಡಿದು ಪ್ರತಿಭಟನೆ ಮಾಡಿದ್ದಾರೆ.

ಕಾರ್ಖಾನೆ ಆಡಳಿತ ಮಂಡಳಿಯ ಧೋರಣೆ ಖಂಡಿಸಿ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನೆ 33ನೇ ದಿನಕ್ಕೆ ಕಾಲಿಟ್ಟಿದ್ದು, ಈಗಾಗಲೇ ವಿಧಾನಸೌಧ ಚಲೋ, ರಾಜಭವನ ಚಲೋ ಪ್ರತಿಭಟನೆ ಹಮ್ಮಿಕೊಂಡು ಸರ್ಕಾರ ಮತ್ತು ಕಾರ್ಖಾನೆಯ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸಿದ್ದ ಕಾರ್ಮಿಕರು‌ ತಮ್ಮ ಹೋರಾಟ ಮುಂದುವರೆಸಿದ್ದಾರೆ.

ಬೆಂಗಳೂರಿನ ಸರ್ಜಾಪುರ ಮುಖ್ಯರಸ್ತೆ ಬಳಿ 3 ಹಾಗೂ 4 BHK ಐಷಾರಾಮಿ ಅಪಾರ್ಟ್ಮೆಂಟ್. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ

ಕಳೆದ 33 ದಿನಗಳಿಂದ ಕಾರ್ಖಾನೆಯ ಅಕ್ರಮ ಲಾಕ್ ಡೌನ್ ಖಂಡಿಸಿ ಕಾರ್ಖಾನೆ ಮುಂದೆ ಇದ್ದ ಖಾಲಿ ಜಾಗದಲ್ಲಿ ಟೆಂಟ್ ಹಾಕಿಕೊಂಡು ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಇದೀಗ ಟೆಂಟ್ ಹಾಕಿದ್ದ ಜಾಗದ ಮಾಲೀಕರಿಗೆ ಟೊಯೊಟೊ ಆಡಳಿತ ಮಂಡಳಿ ಒತ್ತಡ ತಂದು, ನೋಟೀಸ್ ನೀಡಿ ಟೆಂಟ್ ಖಾಲಿ ಮಾಡಿಸಿದ್ದಾರೆ.

Ramanagara: Continuation Of The 33rd Day Of Toyota Workers Protest

ಕಾರ್ಮಿಕರ ಶಾಂತಿಯುತ ಹೋರಾಟವನ್ನು ಹತ್ತಿಕ್ಕಲು ಟೊಯೊಟೊ ಆಡಳಿತ ಮಂಡಳಿ ಪ್ರತಿಭಟನೆಯ ಸ್ಥಳವನ್ನು ಖಾಲಿ ಮಾಡಿಸಿ ಕಾರ್ಮಿಕರನ್ನು ಬೀದಿಗೆ ತಳ್ಳಿದೆ. ನೊಂದ ಕಾರ್ಮಿಕರ ರಕ್ಷಣೆ ಮಾಡಬೇಕಾದ ಪೊಲೀಸರೇ ಸ್ವತಃ ಶಾಮಿಯಾನ ಖಾಲಿ ಮಾಡಿಸಿದ್ದಾರೆ ಎಂದು ಕಾರ್ಮಿಕರು ಆರೋಪಿಸಿದರು.

Ramanagara: Continuation Of The 33rd Day Of Toyota Workers Protest

Recommended Video

Virushka ದಂಪತಿಗೆ ಇಂದು ಮೂರನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ | Oneindia Kannada

ಇನ್ನೂ ಕಾರ್ಮಿಕರ ಹೋರಾಟ ಹತ್ತಿಕ್ಕಲು ಮುಂದಾದ ಪೊಲೀಸರು ಮತ್ತು ಟೊಯೊಟೊ ಕಾರ್ಖಾನೆಯ ಆಡಳಿತ ಮಂಡಳಿಯ ಛತ್ರಿ ಬುದ್ಧಿ ಖಂಡಿಸಲು ಛತ್ರಿಗಳನ್ನು ಹಿಡಿದು ಕಂಪನಿಯ ಮುಂದೆ ತಮ್ಮ 33ನೇ ದಿನದ ಹೋರಾಟ ಮುಂದುವರೆಸಿದ್ದಾರೆ.

English summary
Workers have staged a protest for 33 days in a row against the governing body of the Bidadi Toyota Kirloskar factory.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X