• search
  • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ರಸ್ತೆಯಲ್ಲಿ ಹಣ ತುಂಬಿದ್ದ ಕಂಟೇನರ್ ಪಲ್ಪಿ; ಯೋಧರ ಭದ್ರತೆ!

By ರಾಮನಗರ ಪ್ರತಿನಿಧಿ
|

ರಾಮನಗರ, ಫೆಬ್ರವರಿ 25: ಮೈಸೂರಿನಿಂದ ಬೆಂಗಳೂರಿನ ಆರ್‌ಬಿಐಗೆ ಹಣ ತುಂಬಿಕೊಂಡು ಬರುತ್ತಿದ್ದ ಕಂಟೇನರ್ ಲಾರಿ ಮೈಸೂರು ರಸ್ತೆಯಲ್ಲಿ ಪಲ್ಪಿಯಾಗಿದೆ. ಕಂಟೇನರ್‌ ಲಾರಿಗೆ ಬಿಗಿ ಭದ್ರತೆ ನೀಡಲಾಗಿದ್ದು, ಪೊಲೀಸರು ಮತ್ತು ಸಿಐಎಸ್‌ಎಫ್ ಯೋಧರು ಕಾವಲಿದ್ದಾರೆ.

ಗುರುವಾರ ರಾಮನಗರ ಜಿಲ್ಲೆಯ ಬಿಡದಿ ಬಳಿಯ ಕಲ್ಲುಗೋಪಹಳ್ಳಿ ಬಳಿ ಕಂಟೇನರ್ ಲಾರಿ ಪಲ್ಪಿಯಾಗಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರ ಕಲ್ಲುಗೋಪಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.

ಕೊರೊನಾ ಆರ್ಥಿಕ ಸಂಕಷ್ಟ ಜನರಿಗೆ ಮಾತ್ರ, ಸಚಿವರ ಹೊಸ ಕಾರು ಖರೀದಿಗೆ ಸರ್ಕಾರದ ಕೋಟಿ ಕೋಟಿ ಹಣ!

ಮೈಸೂರು-ಬೆಂಗಳೂರು ನಡುವಿನ ಆರು ಪಥದ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಹಣ ತುಂಬಿಕೊಂಡು ಹೋಗುತ್ತಿದ್ದ ಕಂಟೇನರ್ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೇ ಪಲ್ಟಿಯಾಗಿದೆ.

10 ಲಕ್ಷಕ್ಕಿಂತ ಅಧಿಕ ಹಣ ಡ್ರಾ ಮಾಡಿದರೆ ಪೊಲೀಸ್ ಕಣ್ಗಾವಲು!

ಈ ಕಂಟೇನರ್ ಲಾರಿಗೆ ಮೈಸೂರಿನಿಂದಲೂ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಯೋಧರು ಭದ್ರತೆ ನೀಡುತ್ತಿದ್ದಾರೆ. ಬಿಡದಿ ಬಳಿ ಕಂಟೇನರ್ ಲಾರಿ ಪಲ್ಪಿಯಾದ ಬಳಿಕ ಸ್ಥಳೀಯ ಪೊಲೀಸರನ್ನು ಸಹ ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಮೈಸೂರಿನಿಂದ ಸಿಐಎಸ್‌ಎಫ್ ಸಿಬ್ಬಂದಿಗಳ ಭದ್ರತೆಯಲ್ಲಿ ಕೆಲವು ಲಾರಿಗಳು ಆಗಮಿಸುತ್ತಿದ್ದವು. ಇವುಗಳಲ್ಲಿ ಒಂದು ಲಾರಿ ಪಲ್ಟಿಯಾಗಿದೆ. ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಬಿಡದಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಬೆಂಗಳೂರಿನಿಂದ ಇದೀಗ ಆರ್‌ಬಿಐ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಕ್ರೇನ್ ಮೂಲಕ ಕಂಟೇನರ್ ಮೇಲೆತ್ತುವ ಕೆಲಸ ನಡೆಯಲಿದೆ. ಮೈಸೂರಿನಲ್ಲಿ ಆರ್‌ಬಿಐ ನೋಟು ಮುದ್ರಣಾಲಯವಿದೆ. ಅಲ್ಲಿಂದ ಹಣವನ್ನು ಬೆಂಗಳೂರಿಗೆ ತರಲಾಗುತ್ತಿತ್ತು.

English summary
Container truck carriying money from Mysuru to Bengaluru RBI overturned near Bidadi, Ramanagara. The Central Industrial Security Force (CISF) and local police deployed for security.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X