• search
 • Live TV
ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಗಡಿ-ಕನಕಪುರದಲ್ಲಿ ಆಮ್ಲಜನಕ ಘಟಕ ನಿರ್ಮಾಣಕ್ಕೆ ಮುಂದಾದ KRIDL

By ರಾಮನಗರ ಪ್ರತಿನಿಧಿ
|

ರಾಮನಗರ, ಮೇ 7: ರಾಜ್ಯದಲ್ಲಿ ಆಕ್ಸಿಜನ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಅವರ ಮನವಿ ಮೇರೆಗೆ ಹೊಸ ಆಕ್ಸಿಜನ್ ಘಟಕಗಳ ಸ್ಥಾಪನೆ ಮಾಡಲಾಗುವುದು ಎಂದು ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ಎಂ.ರುದ್ರೇಶ್ ತಿಳಿಸಿದರು.

ಆಮ್ಲಜನಕ ಘಟಕ ನಿರ್ಮಾಣ ಸಂಬಂಧ ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಕೆ.ಆರ್.ಐ.ಡಿ.ಎಲ್ ಅಧ್ಯಕ್ಷ ಎಂ.ರುದ್ರೇಶ್, ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಡಿಎಚ್ಒ ನಿರಂಜನ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದರು.

ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಎಂ.ರುದ್ರೇಶ್, ಕೆ.ಆರ್.ಐ.ಡಿ.ಎಲ್ ಸಂಸ್ಥೆ ವತಿಯಿಂದ ನೂತನ ಆಕ್ಸಿಜನ್ ಘಟಕಗಳ ನಿರ್ಮಾಣಕ್ಕೆ ಮಾಡಲಾಗುವುದು, ಕೆ.ಆರ್.ಐ.ಡಿ.ಎಲ್ ನ ಸಿಎಸ್ಆರ್ ಫಂಡ್ ಬಳಸಿ ನೂತನ ಆಕ್ಸಿಜನ್ ಘಟಕಗಳನ್ನ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ರಾಮನಗರ ಜಿಲ್ಲೆಯ ಮಾಗಡಿ ಹಾಗೂ ಕನಕಪುರ ತಾಲ್ಲೂಕು ಆಸ್ಪತ್ರೆಯ ಆವರಣದಲ್ಲಿ ಆಕ್ಸಿಜನ್ ಘಟಕಗಳ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. ಶೀಘ್ರವಾಗಿ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. ಇನ್ನೂ 15‌ ದಿನದಲ್ಲಿ ಮಾಗಡಿ ಮತ್ತು ಕನಕಪುರ ಸರ್ಕಾರಿ‌ ಅಸ್ಪತ್ರೆಯಲ್ಲಿ ಆಕ್ಸಿಜನ್ ಘಟಕ ಕೆಲಸ ಪ್ರಾರಂಭ ಮಾಡಿ ಸರ್ಕಾರಿ ಅಸ್ಪತ್ರೆಯ ರೋಗಿಗಳ ಜೊತೆಗೆ ಇತರ ಅಸ್ಪತ್ರಗಳಿಗೂ ಅಕ್ಸಿಜನ್ ಒದಗಿಸಲಾಗುವುದು ಎಂದು ಎಂ.ರುದ್ರೇಶ್ ತಿಳಿಸಿದರು.

ಕೆ.ಆರ್.ಡಿ.ಎಲ್ ಸಂಸ್ಥೆಯ ಸಿಎಸ್ಆರ್ ಫಂಡ್ ಮೂಲಕ ಅಕ್ಸಿಜನ್ ಘಟಕ ನಿರ್ಮಾಣದ ಸಂಪೂರ್ಣ ವೆಚ್ಚ ಬರಿಸಲಾಗುವುದು. ಜಿಲ್ಲೆಯಲ್ಲಿ ಅಕ್ಸಿಜನ್ ಘಟಕ ನಿರ್ಮಾಣದ ಜೋತೆಗೆ ಚಾಮರಾಜನಗರದಲ್ಲೂ ಘಟಕ ನಿರ್ಮಾಣಕ್ಕೆ ಬೇಡಿಕೆ ಬಂದಿದೆ. ಅಲ್ಲೂ ಒಂದು ಘಟಕ ನಿರ್ಮಾಣ ಮಾಡುತ್ತೇವೆ ಎಂದು ಕೆ.ಆರ್.ಡಿ.ಎಲ್ ಅಧ್ಯಕ್ಷ ಎಂ.ರುದ್ರೇಶ್ ಮಾಹಿತಿ ನೀಡಿದರು.

   ಸೋಮವಾರದಿಂದ ರಾಜ್ಯಾದ್ಯಂತ ಸಂಪೂರ್ಣ ಲಾಕ್ ಡೌನ್- ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ | Oneindia Kannada

   ರಾಜ್ಯದಲ್ಲಿ ಲಾಕ್ ಡೌನ್ ಮಾಡಿದರೂ ತೊಂದರೆ, ಮಾಡದಿದ್ದರೂ ತೊಂದ್ರೆಯಾಗುತ್ತದೆ. ಎಲ್ಲವನ್ನು ಸರಿದೂಗಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಜನರು ಎಚ್ಚೆತ್ತುಕೊಂಡ್ರೆ ಮಾತ್ರ ಕೋವಿಡ್ ಸೋಂಕು ತಡೆಗಟ್ಟಬಹುದು ಎಂದು ಎಂ.ರುದ್ರೇಶ್ ತಿಳಿಸಿದ್ದರು.

   English summary
   KRIDL President M Rudresh said the new oxygen units will be established at the request of CM Yediyurappa to address the shortage of oxygen in the state.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X