ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುಮಲತಾ ಗೆಲುವು: ಮಂಡ್ಯದ ಜನರಿಗೆ ಕೃತಜ್ಞತೆ ಸಲ್ಲಿಸಿದ ಕಾಂಗ್ರೆಸ್ ಮುಖಂಡ

|
Google Oneindia Kannada News

ರಾಮನಗರ, ಮೇ 25: ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರನ್ನು ಗೆಲ್ಲಿಸಿದ ಜನರಿಗೆ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ ಧನ್ಯವಾದ ಹೇಳಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು, 'ನಾನು ಮಂಡ್ಯದ ಮತದಾರನಾಗಿದ್ದರೆ ಖಂಡಿತವಾಗಿಯೂ ಸುಮಲತಾ ಅವರಿಗೆ ಮತ ಹಾಕುತ್ತಿದ್ದೆ' ಎಂದು ಹೇಳಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಸೋಲಿಗೆ ಇವಿಎಂ ಕಾರಣ: ಶಿವರಾಮೇಗೌಡ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಇವಿಎಂ ಕಾರಣ: ಶಿವರಾಮೇಗೌಡ

ಸುಮಲತಾ ಅವರ ವಿರುದ್ಧ ನಡೆಸಿದ ದಾಳಿಗಳನ್ನು ನೋಡಿದಾಗ ಬೇರೆ ಹೆಣ್ಣುಮಕ್ಕಳಾಗಿದ್ದರೆ ಜರ್ಜರಿತರಾಗಿ ಓಡಿ ಹೋಗುತ್ತಿದ್ದರು. ಆದರೆ ಸುಮಲತಾ ಗಟ್ಟಿ ಮನಸ್ಸಿನವರು. ಹೊರಗಿನಿಂದ ಬಂದವರಿಗೆ ಮಣೆ ಹಾಕಲು ಆಗುವುದಿಲ್ಲ ಎಂದು ಸುಮಲತಾ ಅವರನ್ನು ಗೆಲ್ಲಿಸಿದ್ದಾರೆ. ಮಂಡ್ಯದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

Congress MLC CM Lingappa thanked Mandya voters for Sumalatha Ambareesh win

ನಟ ಅಂಬರೀಷ್ ಅವರ ಮೇಲಿನ ಜನರಲ್ಲಿನ ಅಭಿಮಾನ ಸುಮಲತಾ ಅವರ ಗೆಲುವಿಗೆ ನೆರವಾಗಿದೆ. ಸುಮಲತಾ ಅವರಿಗೆ ಸುಮಲತಾ ಅವರಿಗೆ ಸ್ವಾಭಿಮಾನದ ಅಸ್ತ್ರ ವರದಾನವಾಯ್ತು. ಅತಿರಥ ಮಹಾರಥರು ಮೈತ್ರಿ ಅಭ್ಯರ್ಥಿ ಪ್ರಚಾರ ಮಾಡಿದ್ದರು.

ಮುಂದೆ ಯಾರಿಗೂ ಇಂತಹ ಐತಿಹಾಸಿಕ ಗೆಲುವು ಸಿಗುವುದಿಲ್ಲವೇನೋ. ಏಕಾಂಗಿಯಾಗಿ ಸ್ಪರ್ಧಿಸಿ ಗೆದ್ದ ಏಕೈಕ ಪಕ್ಷೇತರ ಅಭ್ಯರ್ಥಿ ಸುಮಲತಾ ಎಂದು ಹಾಡಿಹೊಗಳಿದರು.

ನಿಖಿಲ್ ಸೋತಿದ್ದಕ್ಕೆ ಬೆರಳು ಕತ್ತರಿಸಿಕೊಂಡ ಹುಚ್ಚು ಅಭಿಮಾನಿ ನಿಖಿಲ್ ಸೋತಿದ್ದಕ್ಕೆ ಬೆರಳು ಕತ್ತರಿಸಿಕೊಂಡ ಹುಚ್ಚು ಅಭಿಮಾನಿ

ಬಳಿಕ ಅವರು ಕಾಂಗ್ರೆಸ್ ಪಕ್ಷವು ಜೆಡಿಎಸ್ ಜತೆ ಮಾಡಿಕೊಂಡಿರುವ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ನಮಗೆ ಮೈತ್ರಿ ಬೇಡ. ಮೈತ್ರಿ ಮುಂದುಗರಿದರೆ ಕಾಂಗ್ರೆಸ್ ಶೇ 100ರಷ್ಟು ನಿರ್ನಾಮ ಆಗುವುದು ಸತ್ಯ. ಮೈತ್ರಿಯ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷ ಬೆಳೆಯಬೇಕು, ಹಾಗಾಗಿ ಮೈತ್ರಿ ಬೇಡ ಎಂದರು.

ಲೋಕಸಭೆ ಚುನಾವಣೆ ಸೋಲಿನ ಬಗ್ಗೆ ವಿವೇಕ ಮೂಡಿರುವುದು ಜೆಡಿಎಸ್ ಅಧ್ಯಕ್ಷ ವಿಶ್ವನಾಥ್ ಅವರಿಗೆ. ಕಾಂಗ್ರೆಸ್‌ನಲ್ಲಿ ಎಚ್‌‌ಕೆ ಪಾಟೀಲ್ ಅವರಿಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕಿದ್ದರೂ ಕೆಲಸ ಇರಲಿಲ್ಲ. ಚುನಾವಣೆ ಫಲಿತಾಂಶ ಬಂತು ರಾಜೀನಾಮೆ ಕೊಟ್ಟಿದ್ದಾರೆ ಅಷ್ಟೇ ಎಂದು ಹೇಳಿದರು.

English summary
Congress MLC CM Lingappa in Ramanagar said, he would like to thank Mandya voters for Sumalatha Ambareesh win.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X