ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಗಡಿ ಇಂದಿರಾ ಕ್ಯಾಂಟೀನ್ ಭ್ರಷ್ಟ ಪುಟ ತೆರೆದಿಟ್ಟ ಎಚ್.ಸಿ.ಬಾಲಕೃಷ್ಣ

|
Google Oneindia Kannada News

ರಾಮನಗರ, ಮೇ 27: ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಮಾಗಡಿಯಲ್ಲಿನ ಇಂದಿರಾ ಕ್ಯಾಂಟೀನ್ ನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಶುಚಿತ್ವನ್ನು ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಎಚ್.ಸಿ.ಬಾಲಕೃಷ್ಣ ತೆರೆದಿಟ್ಟಿದ್ದಾರೆ.

ಈ ಬಗ್ಗೆ ಬಾಲಕೃಷ್ಣ ಟ್ವೀಟ್ ಮಾಡಿದ್ದು, ಇಂತಹ ಆರೋಗ್ಯ ಎಮರ್ಜೆನ್ಸಿಯ ವೇಳೆಯೂ ಸುಳ್ಳು ಲೆಕ್ಕವನ್ನು ಮಾಗಡಿ ತಾಲೂಕು ಆಡಳಿತ ಸರಕಾರಕ್ಕೆ ನೀಡುತ್ತಿದೆ ಎಂದು ಆಪಾದಿಸಿದ್ದಾರೆ.

ಮಾಗಡಿ; ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಕೊಡದೆ ವಂಚನೆ ಮಾಗಡಿ; ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಕೊಡದೆ ವಂಚನೆ

"ಕೊರೊನಾ ಎರಡನೇ ಅಲೆ ಎಲ್ಲೆಡೆ ತೀವ್ರವಾಗಿ ಹೆಚ್ಚಾಗಿದ್ದು .ಈ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಕ್ರಮವನ್ನು ಮುಂದುವರಿಸಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಬಡವರು ಹಾಗೂ ಕೂಲಿಕಾರ್ಮಿಕರು ಆಹಾರ ಸೇವಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಸರ್ಕಾರ‌ ಇಂದಿರಾ ಕ್ಯಾಂಟೀನ್ ಮೂಲಕ ಉಚಿತ ಆಹಾರದ ವ್ಯವಸ್ಥೆಯ ಆದೇಶ ಹೊರಡಿಸಿದೆ"ಎಂದು ಬಾಲಕೃಷ್ಣ ಟ್ವೀಟ್ ಮಾಡಿದ್ದಾರೆ.

Congress Leader H C Balakrishna Upset With Magadi Indira Canteen

"ಕೇವಲ ಆದೇಶ ಹೊರಡಿಸಿದರೇ ಸಾಕೇ? ಸೂಕ್ತ ಕಾರ್ಯ ನಿರ್ವಹಣೆ ಇಲ್ಲದಿದ್ದರೆ ಈ ಪರಿಸ್ಥಿತಿ, ಕಳೆದ ಒಂದು ತಿಂಗಳಿನಿಂದ ಮಾಗಡಿ ಪಟ್ಟಣದ ಇಂದಿರಾ ಕ್ಯಾಂಟೀನ್ ನಲ್ಲಿ ಅಡುಗೆ ತಯಾರಕರೇ ಇಲ್ಲಾ. ದಿನನಿತ್ಯ 900 ಮಂದಿ ಆಹಾರ ಸೇವಿಸುತ್ತಿದ್ದರೆ ಎಂದು ವರದಿ ನೀಡುತ್ತಾರೆ ಆದರೆ 900 ಮಂದಿಗೆ ಅಡುಗೆ ತಯಾರಿಸಲು ಬೇಕಾದ ಆಹಾರ ಸಾಮಗ್ರಿಗಳೇ ಇಲ್ಲ".

"ಹಾಗೂ ಆಹಾರ ತಯಾರಿಸುವ ಅಡುಗೆ ತಯಾರಕರು ಇಲ್ಲ, ಅಡುಗೆ ತಯಾರಿಸುವ ಸ್ಥಳದಲ್ಲಿ ಶುಚಿತ್ವ ಕೂಡ ಇಲ್ಲ ಹಾಗೂ ಗುಣಮಟ್ಟವಿಲ್ಲದ ಆಹಾರ ನೀಡುತ್ತಿದ್ದಾರೆ. ಇದರಿಂದ ಬಡವರು ಹಾಗೂ ಕೂಲಿಕಾರ್ಮಿಕರು ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಸೇವಿಸಲು ಇಚ್ಛೆ ಪಡುವುದಿಲ್ಲ".

"ದಿನನಿತ್ಯ 900 ಮಂದಿ ಆಹಾರ ಸೇವಿಸುತ್ತಿದ್ದಾರೆ ಎಂದು ಸರ್ಕಾರಕ್ಕೆ ಸುಳ್ಳು ಲೆಕ್ಕ ನೀಡಿ, ಇಂತಹಾ ಕಷ್ಟದ ಸಮಯದಲ್ಲಿ ಬಡವರಿಗೆ ನೀಡುವ ಆಹಾರದಲ್ಲಿ ಅವ್ಯವಹಾರ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಅವ್ಯವಹಾರ ನೆಡೆಯುವುದನ್ನು ನೋಡಿ ಕಣ್ಣು ಮುಚ್ಚಿ ಕುಳಿತಿರುವುದು ಮಾಗಡಿ ತಾಲೂಕಿನ ಆಡಳಿತ ವೈಫಲ್ಯದ ಕೈಗನ್ನಡಿಯಾಗಿದೆ".

Recommended Video

ನಾಯಿ ಮರಿಯನ್ನು ಒಂದೇ ಏಟಿಗೆ ನುಂಗಿದ ಮೊಸಳೆ | Oneindia Kannada

"ಮಾನ್ಯ ಜಿಲ್ಲಾಧಿಕಾರಿಗಳಿಗೆ ಈ ಮೂಲಕ ಮನವಿ ಮಾಡುತ್ತೇನೆ ತಾಲೂಕು ಆಡಳಿತದಲ್ಲಿ ಕೂಡಲೇ ಮಧ್ಯಪ್ರವೇಶಿಸಿ, ಈ ಅವ್ಯವಹಾರದ ಬಗ್ಗೆ ಕ್ರಮ ಜರುಗಿಸಿ , ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಿನಂತಿಸುತ್ತೇನೆ"ಎಂದು ಎಚ್.ಸಿ.ಬಾಲಕೃಷ್ಣ ಸರಣಿ ಟ್ವೀಟ್ ಮಾಡಿದ್ದಾರೆ.

English summary
Congress Leader H C Balakrishna Upset With Magadi Indira Canteen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X