ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಕಾಂಗ್ರೆಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು'

|
Google Oneindia Kannada News

ರಾಮನಗರ, ಏಪ್ರಿಲ್ 09: ಈ ದೇಶದಲ್ಲಿರುವ ಎಲ್ಲಾ ರಾಜಕೀಯ ಪಕ್ಷಗಳು ಬಂಡವಾಳ ಶಾಹಿ ಹಿಡಿತದಲ್ಲಿವೆಯಂತೆ. ಯಾವ ಪಕ್ಷವೂ ಜನರ ಹಿತಕಾಯುತ್ತಿಲ್ಲವಂತೆ, ಎಲ್ಲಾ ಪಕ್ಷಗಳ ನಿಲುವು ಒಂದೇ ಅಂತೆ. ಹೀಗಂತ ಹೇಳುತ್ತಿರುವುದು ಎಸ್‌ಯುಸಿಐ (ಕಮ್ಯೂನಿಸ್ಟ್) ಪಕ್ಷದ ಮುಖಂಡರು ಇವರ ಪ್ರಕಾರ ಅವರಪಕ್ಷ ಹೊರತುಪಡಿಸಿದರೆ ಬೇರೆ ಯಾವ ಪಕ್ಷಕ್ಕೂ ಜನರ ಹಿತ ಬೇಕಾಗಿಲ್ಲವಂತೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈಗಾಗಲೇ ಪಕ್ಷದಿಂದ ಬೆಂಗಳೂರು ಗ್ರಾಮಾಂತರ ಲೋಕಸಭೆಗೆ ಅಭ್ಯರ್ಥಿಯಾಗಿ ಟಿ.ಸಿ.ರಮಾ ಎಂಬುವವರನ್ನು ಕಣಕ್ಕಿಳಿಸಲಾಗಿದ್ದು, ಅವರ ಪರ ಎಸ್‌ಯುಸಿಐ (ಕಮ್ಯೂನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಎನ್.ಶ್ರೀರಾಮ್ ಮಾತನಾಡಿದ್ದು, ಅವರೇನು ಹೇಳಿದ್ದಾರೆ ಎಂಬುದು ಇಲ್ಲಿದೆ.

 ನನ್ನನ್ನು ಕೆಟ್ಟದಾಗಿ ಬಿಂಬಿಸಲು ಜೆಡಿಎಸ್ ಸಂಚು: ಸುಮಲತಾ ಅಂಬರೀಷ್ ಗಂಭೀರ ಆರೋಪ ನನ್ನನ್ನು ಕೆಟ್ಟದಾಗಿ ಬಿಂಬಿಸಲು ಜೆಡಿಎಸ್ ಸಂಚು: ಸುಮಲತಾ ಅಂಬರೀಷ್ ಗಂಭೀರ ಆರೋಪ

ಕಾಂಗ್ರೆಸ್ ಮತ್ತು ಬಿಜೆಪಿ ದೊಡ್ಡ ಬಂಡವಾಳಿಗರ ನಿಷ್ಠಾವಂತ ಪಕ್ಷಗಳಾಗಿದ್ದು, ಇವು ಒಂದೇ ನಾಣ್ಯದ ಎರಡು ಮುಖಗಳು. ಬಿಜೆಪಿ ಬಂಡವಾಳಶಾಹಿಗಳ ಪರವಿದ್ದು, ಜನವಿರೋಧಿ ಹಾಗೂ ಕೋಮುವಾದಿ ಆಡಳಿತಕ್ಕೆ ಕಾಂಗ್ರೆಸ್ ಪರ್ಯಾಯ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ದೇಶವನ್ನು ಐದು ದಶಕಗಳಿಗೂ ಹೆಚ್ಚು ಕಾಲ ಆಳಿದ ಕಾಂಗ್ರೆಸ್ ಇಂದಿನ ಪ್ರಮುಖ ಸಮಸ್ಯೆಗಳಿಗೆ ಕಾರಣವಾಗಿದೆ. ಬಂಡವಾಳ ಶಾಹಿಗಳನ್ನು ಪೋಷಿಸಿಕೊಂಡು ಬಂದಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಿಲುವು ಒಂದೇ ಆಗಿದೆ.

Congress and the BJP are two faces of the same coin

ಉದ್ಯಮಿಗಳು ಬ್ಯಾಂಕ್ ಗಳಿಗೆ ಪಂಗನಾಮ ಹಾಕಿ, ಸಾರ್ವಜನಿಕರ ಹಣವನ್ನು ದರೋಡೆ ಮಾಡಿ ದೇಶ ಬಿಟ್ಟು ಓಡಿ ಹೋದಾಗ ಸ್ವಘೋಷಿತ ಚೌಕೀದಾರ್ ಪ್ರಧಾನಿ ಹಾಗೂ ಅವರ ಸಹೊದ್ಯೋಗಿಗಳು ಏನು ಮಾಡುತ್ತಿದ್ದರು?

 ಮೈಸೂರಿಗೆ ಮೋದಿ ಬರುವ ಮುನ್ನವೇ ಬಿಜೆಪಿ ಬಾವುಟ ತೆಗೆಸಿದ ಚು.ಆಯೋಗ ಮೈಸೂರಿಗೆ ಮೋದಿ ಬರುವ ಮುನ್ನವೇ ಬಿಜೆಪಿ ಬಾವುಟ ತೆಗೆಸಿದ ಚು.ಆಯೋಗ

ಮೇಲಿಂದ ಮೇಲೆ ಪ್ರಶ್ನೆಗಳನ್ನು ಮಾಡಿರುವ ಎಸ್‌ಯುಸಿಐ (ಕಮ್ಯೂನಿಸ್ಟ್) ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಎನ್.ಶ್ರೀರಾಮ್ ದೇಶದಲ್ಲಿ ಜನಹಿತ ಆಡಳಿತ ಬರಬೇಕಾದರೆ ತಮ್ಮ ಪಕ್ಷದಿಂದ ಮಾತ್ರ ಸಾಧ್ಯ ಎಂಬುದಾಗಿ ಹೇಳುತ್ತಿದ್ದಾರೆ. ಅದೇನೋ ಗೊತ್ತಿಲ್ಲ ಅವರ ಮಾತುಗಳಂತು ಕಿವಿಗೆ ಖುಷಿ ಕೊಡುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

English summary
Lok Sabha Elections 2019:MN Sriram, State Secretary of the Communist Party of India (SUCI) said Congress and the BJP are the loyal parties of the bigger capitalism. Two faces of the same coin.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X