ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈತ ಮುಖಂಡರ ಮೇಲೆ ಚಾಟಿ ಬೀಸಿದ ಸಿಎಂ ಕುಮಾರಸ್ವಾಮಿ

By ರಾಮನಗರ ಪ್ರತಿನಿಧಿ
|
Google Oneindia Kannada News

Recommended Video

ರೈತ ಮುಖಂಡರನ್ನ ತರಾಟೆಗೆ ತೆಗೆದುಕೊಂಡ ಎಚ್ ಡಿ ಕುಮಾರಸ್ವಾಮಿ | Oneindia Kannada

ರಾಮನಗರ, ಜುಲೈ.24: ಸಂಪೂರ್ಣ ಸಾಲಮನ್ನಾ ವಿಚಾರವಾಗಿ ಪ್ರತ್ಯೇಕ ರಾಜ್ಯಕ್ಕೆ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ವಿರುದ್ಧ ಸಿಎಂ ಎಚ್‌ಡಿ ಕುಮಾರಸ್ವಾಮಿ ಚಾಟಿ ಬೀಸಿದ್ದು, ಸಂಪೂರ್ಣ ಸಾಲ ಮನ್ನಾಗೆ ಬೇಡಿಕೆಯಿಡುವವರಿಗೆ ಓಟ್ ಹಾಕುವಾಗ ಕುಮಾರಸ್ವಾಮಿ ಯಾಕೆ ನೆನಪಿಗೆ ಬರಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಚನ್ನಪಟ್ಟಣದಲ್ಲಿ ನಡೆದ ಜೆಡಿಎಸ್ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡ ವೇಳೆ ಮಾತನಾಡಿದ ಅವರು ಸಾಲ ಮನ್ನಾ ಮಾಡಿ ಅಂತ ರಸ್ತೆಯಲ್ಲಿ ಕೂರುವವರು ಅಂದು ಜಾತಿಭ್ರಮೆ ಬಿಟ್ಟು, ಹಣದ ವ್ಯಾಮೋಹ ಬಿಟ್ಟು, ಓಟು ಹಾಕಿದ್ರೆ ಇಂದು ಕುಮಾರಸ್ವಾಮಿಯನ್ನು ಕೇಳುವ ನೈತಿಕತೆ ಇರುತಿತ್ತು.

'ಎರಡು ಕಣ್ಣು'ಗಳಿಗೆ 2 ಸಾವಿರ ಕೋಟಿ ಕೊಡುವುದಾಗಿ ಘೋಷಿಸಿದ ಎಚ್ ಡಿಕೆ'ಎರಡು ಕಣ್ಣು'ಗಳಿಗೆ 2 ಸಾವಿರ ಕೋಟಿ ಕೊಡುವುದಾಗಿ ಘೋಷಿಸಿದ ಎಚ್ ಡಿಕೆ

ನಾನು ಯಾವುದೇ ಕಾರಣಕ್ಕೂ ಹೆದರುವವನಲ್ಲ, ನಾನು ರೈತರ ಪರವಾಗಿರುವವನು. ಸಣ್ಣತನವನ್ನು ಬಿಡಿ, ನಿಮ್ಮ ಮನೆಯ ಮಗನಾಗಿ ಕೆಲಸ ಮಾಡುವವನು ನಾನು. ಉತ್ತರ ಕರ್ನಾಟಕ ಬೇರೆ ದಕ್ಷಿಣ ಕರ್ನಾಟಕ ಬೇರೆ ಅಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿ ನನ್ನ ಗುರಿ ಎಂದು ತಿಳಿಸಿದರು.

Chief Minister HD Kumaraswamy has turned against farmers leaders

"ನಿಮಗೆ ಪ್ರತ್ಯೇಕ ರಾಜ್ಯ ಬೇಕಾ? ಬೇರೆ ರಾಜ್ಯ ತಗೊಂಡು ಏನ್ ಆಗ್ತಿರೋ ನೋಡೋಣ. ಮತ್ತೇಕೆ ಪೂರ್ವಿಕರು ಸೇರಿ ಕರ್ನಾಟಕ ಏಕೀಕರಣ ಮಾಡಬೇಕಿತ್ತು. ಸಣ್ಣತನದಲ್ಲಿ ಜಾತಿ ಜಾತಿ ಮಧ್ಯೆ ವೈಷಮ್ಯವನ್ನುಂಟು ಮಾಡಿ, ಆ ಭಾಗ, ಈ ಭಾಗ ಅಂತ ಕಿಡಿ ಹಚ್ಚಿ, ಮುಗ್ಧ ಜನರ ಜೊತೆ ಇನ್ನೂ ಎಷ್ಟು ಚೆಲ್ಲಾಟವಾಡ್ತೀರಿ ಎಂದು ಇದೇ ವೇಳೆ ಅವರು ಪ್ರಶ್ನಿಸಿದರು.

English summary
Chief Minister HD Kumaraswamy has turned against farmers and said "I do not distinguish it from North Karnataka South Karnataka. I am on behalf of the farmers"
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X